ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಮರುದಿವಸ ಅಂರ್ ರಾಜ ದರ್ಬಾರಿಗೆ ತೆರಳಿ, ಮುಸ್ಲಿಮರು ಪ್ರವಾದಿ ಈಸರವರ (ಅ) ಕುರಿತು ಕೆಟ್ಟ ಅಭಿಪ್ರಾಯಗಳನ್ನಾಗಿದೆ ಹೇಳುತ್ತಿರುವುದು ಎಂದು ಹೇಳಿದರು. ಅದಕ್ಕೆ ರಾಜರು ಜಅಫರನ್ನು ದರ್ಬಾರಿಗೆ ಬರಲು ಆಜ್ಞೆ ನೀಡಿದರು. ಅದರ ನಡುವೆ ಮುಸ್ಲಿಮರು ಜೊತೆ ಸೇರಿ ಪರಸ್ಪರ ಚರ್ಚಿಸಲು ಆರಂಭಿಸಿದರು. ಏನಾಗಿರಬಹುದು ಸಮಸ್ಯೆ.? ಇನ್ನೂ ಪ್ರವಾದಿ ಈಸರವರ (ಅ) ಕುರಿತು ಕೇಳುವುದಾದರೆ.? ಏನು ಉತ್ತರ ನೀಡಬೇಕು.? ಎಂದು ಕೇಳಿದಾಗ, ಎಲ್ಲರೂ ಒಟ್ಟಾಗಿ, ಪುಣ್ಯ ಪ್ರವಾದಿಯವರು ﷺ ಏನನ್ನು ಕಲಿಸಿ ಕೊಟ್ಟಿದ್ದರೋ, ಅದನ್ನೇ ಧೈರ್ಯವಾಗಿ ಹೇಳೋಣ ಎಂದು ಹೇಳಿದರು.
ಸ್ವಹಾಬಿಗಳು, ರಾಜ ದರ್ಬಾರಿಗೆ ತಲುಪಿದರು. ದರ್ಬಾರಿನ ಮತ್ತೊಂದು ಭಾಗದಲ್ಲಿ ಆಮಿರ್, ಅಂರ್ ಹಾಗೂ ಕ್ರೈಸ್ತ ಪಾದ್ರಿಗಳು ಕೂಡ ಜೊತೆಯಲ್ಲಿ ಕುಳಿತುಕೊಂಡರು. ರಾಜರು, ಜಅಫರ್ ◌ؓ ಹಾಗೂ ಅವರ ಸಂಗಡಿಗರಲ್ಲಿ, ನಿಮಗೆ ಈಸ ಪ್ರವಾದಿಯವರ (ಅ) ಕುರಿತು ಇರುವ ಅಭಿಪ್ರಾಯವೇನು.? ನಿಮ್ಮ ಪ್ರವಾದಿಯವರು ﷺ ಇದರ ಬಗ್ಗೆ ಏನು ಹೇಳಿದ್ದಾರೆ.? ಎಂದು ತಿಳಿಸುವಿರ.? ಎಂದು ಕೇಳಿದರು. ಅದಕ್ಕೆ ಜಅಫರ್'ರವರು ◌ؓ, ನಮಗೆ ನಮ್ಮ ಪ್ರವಾದಿಯವರು ﷺ, ಈಸ ಪ್ರವಾದಿಯವರ (ಅ) ಬಗ್ಗೆ ಕಲಿಸಿ ಕೊಟ್ಟದ್ದು, ಅವರೊಬ್ಬರು ಅಲ್ಲಾಹನ ದೂತರೂ, ಸೇವಕನೂ ಆಗಿರುವರು. ಆ ಪವಿತ್ರಆತ್ಮವನ್ನು ಅಲ್ಲಾಹನು, ಅವನ ಪವಿತ್ರ ಸೇವಕಿಯಾದ ಮರ್'ಯಮಿನ ◌ؓ ಗರ್ಭದಲ್ಲಿ ಸೇರಿಸಿದನು ಎಂದು ಹೇಳಿದರು. ಅದನ್ನು ಕೇಳಿದ್ದೇ ತಡ, ರಾಜರು ಕೈಯನ್ನು ನೆಲಕ್ಕೆ ಬಡಿಯುತ್ತಾ, ಜಅಫರ್ ◌ؓ ಹೇಳಿದ್ದು, ಅಕ್ಷರಶಃ ಸತ್ಯ. ಅವರ ಮಾತಿನಲ್ಲಿ ಯಾವುದೇ ಸುಳ್ಳು ಕಾಣುತ್ತಿಲ್ಲ, ಓ ಪಾದ್ರಿಗಳೇ ಇದರ ಬಗ್ಗೆ ಇನ್ನೇನು ಹೇಳಲಿಕ್ಕಿಲ್ಲ ಎಂದು ಹೇಳಿದಾಗ, ಕೆಲವು ಪಾದ್ರಿಗಳಿಗೆ ಕಸಿವಿಸಿ ಉಂಟಾಯಿತು. ಅದನ್ನು ಕಂಡ ರಾಜರು, ತಕ್ಷಣವೇ ಎದ್ದು ನಿಂತು ನೀವೇನೇ ಹೇಳಿದರೂ ಅಷ್ಟೇ, ಇದುವೇ ಸತ್ಯ. ವೇದ ಗ್ರಂಥವನ್ನು, ಪ್ರವಾದಿತ್ವದ ಅದರ್ಶವೆಲ್ಲವೂ ಚೆನ್ನಾಗಿ ತಿಳಿದಿದ್ದ ವ್ಯಕ್ತಿಯಾಗಿದ್ದರು, ಅವರು ಎಂದು ಹೇಳಿದರು.
ನಂತರ ವಿಶ್ವಾಸಿಗಳ ಕಡೆ ತಿರುಗಿ, ನಿಮಗೆಲ್ಲರಿಗೂ ಸ್ವಾಗತ, ಮುಹಮ್ಮದ್'ರು ﷺ ಅಲ್ಲಾಹನ ಪ್ರವಾದಿ ಆಗಿರುವರು ಎಂದು ನಾನೂ ಕೂಡ ಸಾಕ್ಷಿ ವಹಿಸುತ್ತೇನೆ. ತೌರಾತ್ ಗ್ರಂಥದಲ್ಲೂ, ಇಂಜೀಲ್ ಗ್ರಂಥದಲ್ಲೂ ಪ್ರತ್ಯೇಕವಾಗಿ ಹೇಳಿದ ಸತ್ಯ ದೂತರಾಗಿರುತ್ತಾರೆ ಅವರು. ನೀವೆಲ್ಲರೂ ಈ ರಾಜ್ಯದಲ್ಲಿ ಯಾವುದೇ ಭಯವಿಲ್ಲದೆ ಜೀವಿಸಬಹುದು. ಬಹುಶಃ ನನಗೆ ಈ ರಾಜಧಿಕಾರ ಇಲ್ಲದೆ ಇರುತ್ತಿದ್ದರೆ.? ನಾನು ಆ ಪ್ರವಾದಿಯವರ ﷺ ಸೇವಕನಾಗುತ್ತಿದ್ದೆ. ಅಷ್ಟು ಹೇಳಿ, ಎಲ್ಲಾ ವಿಶ್ವಾಸಿಗಳಿಗೆ ಒಳ್ಳೆಯ ಬಟ್ಟೆ, ಆಹಾರ ಕೊಟ್ಟು ಕಳುಹಿಸಲು ಆಜ್ಞೆ ನೀಡಿದರು. ನಂತರ ಮಾತು ಮುಂದುವರಿಸುತ್ತಾ, ಯಾರಾದರೂ ನಿಮಗೆ ಇಲ್ಲಿ ತೊಂದರೆ ನೀಡಿದರೆ, ಯಾವುದೇ ಭಯವಿಲ್ಲದೆ ನನ್ನಲ್ಲಿ ತಿಳಿಸಿರಿ. ನಾನು ಅವರಿಗೆ ಖಂಡಿತ ದಂಡ ವಿಧಿಸುತ್ತೇನೆ ಎಂದು ಮೂರು ಬಾರಿ ಅದನ್ನು ಹೇಳಿದರು. ಅಷ್ಟೇ ಅಲ್ಲ, ನನ್ನ ಬಳಿ ಬಂದು ಒಂದು ಪರ್ವತದಷ್ಟು ತೂಕದಲ್ಲಿ, ಉಡುಗೊರೆಯಾಗಿ ಚಿನ್ನ ಕೊಡುತ್ತೇನೆ ಎಂದು ಆಮಿಷ ತೋರಿಸಿದರೂ, ನಾನು ಮಾತ್ರ ನಿಮ್ಮನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.
ಈ ಘಟನೆಯ ಕುರಿತು ಮತ್ತೊಂದು ಉಲ್ಲೇಖವು ಈ ರೀತಿಯಾಗಿದೆ. ರಾಜರು, ಮುಸ್ಲಿಮರಲ್ಲಿ ನಿಮಗೆ ಇಲ್ಲಿ ಯಾರಾದ್ರೂ ತೊಂದರೆ ಮಾಡುತ್ತಿದ್ದಾರ.? ಎಂದು ಕೇಳಿದರು. ಅದಕ್ಕೆ ಕೆಲವರು ಮುಂದೆ ಬಂದು, ಹೌದು ಎಂದು ಉತ್ತರಿಸಿದರು. ಅದನ್ನು ಕೇಳಿ, ತನ್ನ ಸೈನಿಕನೊಬ್ಬನನ್ನು ಕರೆದು, ಇನ್ನುಮುಂದೆ ಯಾರಾದರೂ ಮುಸ್ಲಿಮರಿಗೆ ತೊಂದರೆ ನೀಡಿದರೆ.? ಅವರಿಗೆ ನಾಲ್ಕು ದಿರ್'ಹಂ ದಂಡ ವಿಧಿಸಿ ಎಂದು ಹೇಳುತ್ತಾ, ವಿಶ್ವಾಸಿಗಳ ಕಡೆ ತಿರುಗಿ ಇಷ್ಟು ಸಾಕಲ್ಲವೇ.? ಎಂದು ಕೇಳಿದರು. ಅದಕ್ಕೆ ವಿಶ್ವಾಸಿಗಳು ಅಷ್ಟು ಸಾಕಾಗದು ಎಂದು ಹೇಳಿದಾಗ, ಸರಿ ಹಾಗಾದ್ರೆ ಅದರ ದುಪ್ಪಟ್ಟು ಅಂದರೆ ಎಂಟು ದಿರ್'ಹಂ ದಂಡ ವಸೂಲಿ ಮಾಡಿ ಎಂದು ಆಜ್ಞೆ ನೀಡಿದರು. ಮೂಸ ಬಿನ್ ಉಖ್'ಬರವರ ಅಭಿಪ್ರಾಯದ ಪ್ರಕಾರ, ಯಾರಾದರೂ ಮುಸ್ಲಿಮರಿಗೆ ತೊಂದರೆ ಕೂಡುವುದು ಬಿಡಿ, ಅದರ ಬಗ್ಗೆ ಆಲೋಚಿಸಿದರೂ ಕೂಡ ಅವರು ನನ್ನ ವಿರೋಧ ಕಟ್ಟಕೊಂಡ ಹಾಗೆ ಎಂದು ಅವರು ಜೊತೆಯಲ್ಲಿ ಹೇಳಿದ್ದರು.
ನಿರಾಸೆಯಿಂದ ಕೂಡಿದ ನಿರಾಶ್ರಿತರೇ ಇರುವ ಪ್ರಸ್ತುತ ಈ ಕಾಲದಲ್ಲಿ, ಈ ಐತಿಹಾಸಿಕ ಘಟನೆಗಳನ್ನು ಬಹಳ ಆಸಕ್ತಿಯಿಂದ ತಿಳಿಯಬೇಕಿದೆ. ಸಾಮರಸ್ಯದ ಜೊತೆಯಲ್ಲಿ, ನ್ಯಾಯವಾದ ರೀತಿಯಲ್ಲಿ ಸಮಸ್ಯೆಗಳನ್ನು ಯಾವ ರೀತಿ ನಿವಾರಿಸಬಹುದು ಎನ್ನುವುದನ್ನು, ಇಲ್ಲಿ ನಮಗೆ ಈ ಘಟನೆಗಳ ಮೂಲಕ ತಿಳಿಯಬಹುದು.
ಖುರೈಷಿ ಪ್ರತಿನಿಧಿಗಳಾದ, ಅಂರ್ ಹಾಗೂ ಆಮಿರ್'ರನ್ನು ಹಿಂತಿರುಗಿ ಹೋಗಲು ಆಜ್ಞೆ ನೀಡಿದರು. ಜೊತೆಯಲ್ಲಿ ಅವರ ನೀಡಿದ್ದ ಉಡುಗೊರೆಗಳನ್ನೂ ಕೂಡ ತಿರುಗಿ ಕೊಂಡುಹೋಗಲು ಹೇಳಿದರು. ನಂತರ ಮಾತು ಮುಂದುವರಿಸುತ್ತಾ, ನನಗೆ ನನ್ನ ಅಧಿಕಾರವನ್ನು ತಿರುಗಿ ನೀಡಿದ ಅಲ್ಲಾಹನು, ನನ್ನಿಂದ ಲಂಚ ಪಡೆಯದೆ ಇರುವಾಗ, ನಾನು ಹೇಗೆ ಇನ್ನೊಬ್ಬರಿಂದ ಲಂಚ ಪಡೆಯಲಿ.? ಜನರ ವಿಷಯದಲ್ಲಿ, ಜನರನ್ನು ನನಗೆ ವಿಧೇಯರಾಗುವಂತೆ ಮಾಡಿದ ಅಲ್ಲಾಹನಿಗೆ, ನಾನೂ ಕೂಡ ವಿಧೇಯನಾಗಿದ್ದೇನೆ ಎಂದು ಹೇಳಿದರು. ಅದನ್ನು ಕೇಳಿದ ಖುರೈಷಿಗಳು ನಿರಾಸೆಯಿಂದ ಮಕ್ಕಾ ನಗರಕ್ಕೆ ಹಿಂತಿರುಗಿ ಬಂದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment