ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಬಹಳ ವಿನಮ್ರತೆಯಿಂದ ನಜ್ಜಾಶ್ ರಾಜ ಆ ಪತ್ರವನ್ನು ಸ್ವೀಕರಿಸಿದರು. ಅದನ್ನು ಓದಿದ ನಂತರ ಅವರು ಕೂಡ ತಿರುಗಿ ಅದಕ್ಕೆ ಪ್ರತಿಕ್ರಿಯೆ ನೀಡಿದರು, ಅದರ ವಿವರಣೆ ಈ ರೀತಿ ಆಗಿದೆ.
"ಅಸ್'ಹಂ ಬಿನ್ ಅಬ್'ಜರ್ ಅನ್ನಜ್ಜಾಶಿ, ಅಲ್ಲಾಹುವಿನ ದೂತರಾದ ಮುಹಮ್ಮದ್ ﷺ ಪ್ರವಾದಿಯವರಿಗೆ, ಅಲ್ಲಾಹನ ಪ್ರವಾದಿಯವರ ﷺ ಮೇಲೆ ಅಲ್ಲಾಹನ ಕರುಣೆಯೂ, ರಕ್ಷಣೆಯೂ ಇರಲಿ. ನನ್ನನ್ನು ಸನ್ಮಾರ್ಗಕ್ಕೆ ಕರೆದು ತಂದ ಅಲ್ಲಾಹನಲ್ಲದೆ ಬೇರಾರು ಆರಾಧ್ಯನಿಲ್ಲ. ಓ ಪ್ರವಾದಿಯವರೇ ﷺ ತಾವು ಈಸ ಪ್ರವಾದಿಯವರ (ಅ) ಕುರಿತು ಬರೆದದ್ದನ್ನು ನಾನು ಓದಿದೆನು. ಜಗದೊಡೆಯನ ಮೇಲಾಣೆ.! ತಾವು ಹೇಳಿದ ಮಾತು ಅಕ್ಷರಶಃ ಸತ್ಯ, ತಮ್ಮ ದೊಡ್ಡಪ್ಪನ ಮಗನ ಕುರಿತು ಬರೆದು ವಿಷಯಗಳು ಕೂಡ ನನಗೆ ಅರ್ಥವಾಯಿತು. ನೀವು ನೀತಿವಂತರಾದ, ಸತ್ಯ ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ. ನಾನು ನಿಮ್ಮನ್ನು ಅನುಸರಿಸುತ್ತೇನೆ, ಅದನ್ನು ನಿಮ್ಮ ದೊಡ್ಡಪ್ಪನ ಮಗನ ಕೈ ಹಿಡಿದು ಈಗಾಗಲೇ ಹೇಳಿದ್ದೇನೆ. ನನ್ನ ಮಗ ಅರೀಹನನ್ನು ನೀವು ಒಪ್ಪುದಾದರೆ, ಅಲ್ಲಿಗೆ ಕಳುಹಿಸಿ ಕೊಡುತ್ತೇನೆ. ನಿಮ್ಮ ಎಲ್ಲಾ ಸಂದೇಶಗಳನ್ನು ಸಂಪೂರ್ಣವಾಗಿ ಅಂಗೀಕರಿಸುತ್ತೇನೆ." ಎಂದು ಬರೆದಿದ್ದರು.
ಹಬ್'ಷದ ರಾಜ ಇಸ್ಲಾಮ್ ಸ್ವೀಕರಿಸಿದ ನಂತರ, ಸತ್ಯ ವಿಶ್ವಾಸಿಗಳು ಬಹಳ ಸಂತೋಷದಿಂದ ಅಲ್ಲಿ ಕಾಲ ಕಳೆಯುತ್ತಿದ್ದರು. ಮಕ್ಕಾದಲ್ಲಿ ಇರುವವರಿಗೂ ಈ ಸುದ್ದಿ ಬಹಳಷ್ಟು ಸಂತೋಷ ತಂದಿತ್ತು, ಅವರೂ ಕೂಡ ಒಂದು ಕ್ಷಣ ಹಬ್'ಷಕ್ಕೆ ಯಾತ್ರೆ ಹೋದರೆ ಹೇಗೆ ಎಂದು ಚಿಂತಿಸಿದರು, ಅಬೂಬಕ್ಕರ್'ರವರ ◌ؓ ಯೋಚನೆಯೂ ಕೂಡ ಇದಕ್ಕೆ ಹೊರೆತಾಗಿರಲಿಲ್ಲ.
ಇದರ ಬಗ್ಗೆ ಆಯಿಷಾ ◌ؓ ಬೀವಿಯವರು ಈ ರೀತಿ ವಿವರಿಸುತ್ತಾರೆ. ಪ್ರವಾದಿಯವರು ﷺ ಎಲ್ಲಾ ದಿವಸವೂ, ಬೆಳಿಗ್ಗೆ ಹಾಗೂ ಸಂಜೆ ನಮ್ಮ ತಂದೆಯ ಬಳಿ ಬರುತ್ತಿದ್ದರು. ಸಮಸ್ಯೆಗಳು ಅಧಿಕವಾದಾಗ ತಂದೆಯವರು ಕೂಡ ಹಬ್'ಷ ನಗರಕ್ಕೆ ಹೋಗಲು ತೀರ್ಮಾನಿಸಿ, ಯಾತ್ರೆ ಹೋಗಿಯೇ ಬಿಟ್ಟರು. ಬರ್'ಕುಲ್ ಗಿಮಾದ್'ವರೆಗೆ ತಲುಪಿದರು. ಅಷ್ಟರಲ್ಲೇ ಆ ಪ್ರಾಂತ್ಯದ ನಾಯಕನಾಗಿದ್ದ, ಇಬ್'ನುದ್ದುಗನ್ನ, ಇದು ನೀವುಗಳು ಎಲ್ಲಿಗೆ ಹೋಗುವುದು.? ಎಂದು ಕೇಳಿದರು. ಅದಕ್ಕೆ ಅಬೂಬಕ್ಕರ್ ◌ؓ, ಇಲ್ಲಿಯ ಜನತೆ ನಮ್ಮನ್ನು ಹೊರಗೆ ಹಾಕಿದ್ದಾರೆ, ಶಾಂತಿಯಿಂದ ಅಲ್ಲಾಹನನ್ನು ಆರಾಧಿಸಲು ಕೂಡ ಬಿಡುತ್ತಿಲ್ಲ. ಹಾಗಾಗಿ ಬೇರೆ ಕಡೆ ಹೋಗುತ್ತಿದ್ದೇವೆ ಎಂದು ಹೇಳಿದರು. ಅದನ್ನು ಕೇಳಿದ ಇಬ್'ನುದ್ದುಗುನ್ನ, ನೀವು ಊರು ಬಿಟ್ಟು ಹೋಗಬಾರದು. ಬಡವರನ್ನೂ, ನಿರಾಶ್ರಿತರನ್ನೂ ಸಮನವಾಗಿ ಕಂಡು, ಎಲ್ಲರಿಗೂ ಸಹಾಯ ಮಾಡುವ ನೀವು, ಎಲ್ಲಿಗೂ ಹೋಗಬಾರದು. ಬೇಕಿದ್ದರೆ ನಿಮಗೆ ನಾನು ಆಶ್ರಯ ನೀಡುತ್ತೇನೆ ಎಂದು ಹೇಳಿದರು. ಅದಕ್ಕೆ ಅಬೂಬಕ್ಕರ್'ರವರು ◌ؓ, ಸರಿ ಹಾಗೆ ಆಗಲಿ, ಆದರೆ ನನ್ನ ಜೊತೆಯಲ್ಲಿ ಹಾರಿಸ್ ಬಿನ್ ಖಾಲಿದ್ ◌ؓ ಕೂಡ ಇದ್ದಾರೆ ಎಂದು ಹೇಳಿದಾಗ, ಇಬ್'ನುದ್ದುಗನ್ನ ಅವರು ಯಾತ್ರೆ ಮುಂದುವರಿಸಲಿ, ನೀವು ಮಾತ್ರ ನಿಂತರೆ ಸಾಕು ಎಂದು ಹೇಳಿದರು. ಅದನ್ನು ಕೇಳಿ ಸಿದ್ದೀಕ್'ರು ◌ؓ, ಹಾಗಿದ್ದರೆ ಇಲ್ಲಿ ಸೌಹಾರ್ದತೆಗೆ ಏನು ಬೆಲೆಯಿದೆ.? ಎಂದು ಕೇಳಿದರು.
ಆದರೆ ಹಾರಿಸ್ ◌ؓ ಹಾಗೂ ಅವರ ಸಂಗಡಿಗರು ಅಲ್ಲಿಂದ ಯಾತ್ರೆ ಮುಂದುವರಿಸಿದರು. ನಂತರ ಇಬ್'ದ್ದುಗುನ್ನ ಅಲ್ಲಿಂದ ನೇರವಾಗಿ, ಖುರೈಷಿಗಳ ಬಳಿ ತೆರಳಿ, ಬಡವರನ್ನೂ, ನಿರಾಶ್ರಿತರನ್ನು ಸಹಾಯ ಮಾಡುವ ಅಬೂಬಕ್ಕರ್ ◌ؓ ಯಾವುದೇ ಕಾರಣಕ್ಕೂ ಈ ಊರನ್ನು ಬಿಟ್ಟು ಹೋಗಬಾರದು. ಹಾಗಾಗಿ ನಾನು ಅವರಿಗೆ ಆಶ್ರಯ ನೀಡುತ್ತಿದ್ದೇನೆ ಎಂದು ಹೇಳಿದಾಗ. ಖುರೈಷಿಗಳು ಅವರ ಆಶ್ರಯವನ್ನು ಸ್ವೀಕರಿಸಿದರು. ಈ ಘಟನೆಯ ಕುರಿತು ಇನ್ನೊಂದು ಅಭಿಪ್ರಾಯದ ಪ್ರಕಾರ, ಖುರೈಷಿಗಳು ಈ ರೀತಿ ಹೇಳಿದರು. ಅಬೂಬಕ್ಕರ್'ರವರು ◌ؓ ಮನೆಯಲ್ಲೇ ಕುಳಿತು ಆರಾಧನೆ, ಖುರ್'ಆನ್ ಪಠನೆ ಎಲ್ಲವನ್ನೂ ಮಾಡಲಿ ಆದರೆ ಸಾರ್ವಜನಿಕವಾಗಿ ಯಾವುದೇ ಕಾರಣಕ್ಕೂ ಮಾಡಬಾರದು, ಬಹುಶಃ ಆ ಕಾರಣದಿಂದ ನಮ್ಮ ಕುಟುಂಬದ ಇತರ ಸದಸ್ಯರಿಗೂ ಅದು ಪರಿಣಾಮ ಬೀರಬಹುದು ಎಂದು ಹೇಳಿದ್ದರು.
ಅಬೂಬಕ್ಕರ್ ◌ؓ ಮನೆಯೊಳಗಯೇ ಆರಾಧನೆಯಲ್ಲಿ ನಿರತರಾಗಿದರು. ಸ್ವಲ್ಪ ದಿನದ ಬಳಿಕ ಮನೆಯ ಪಕ್ಕದಲ್ಲೇ ಸಣ್ಣ ಮಸ್ಜಿದ್ ನಿರ್ಮಿಸಿ, ಅಲ್ಲಿಯೇ ನಮಾಝ್ ಮಾಡಿ ಖುರ್'ಆನ್ ಪಠನೆಯನ್ನೂ ಆರಂಭಿಸಿದರು. ಇವರ ಆರಾಧನೆ ಶೈಲಿಯನ್ನು ಕಂಡು ಸುತ್ತಮುತ್ತಲಿನ ಮಹಿಳೆಯರು, ಮಕ್ಕಳೂ ಕೂಡ ಆಕರ್ಷಿತರಾಗಿದ್ದರು. ಮಾಹನರು ಕುರ್'ಆನ್ ಪಠಿಸುವಾಗ ಅದರ ಅರ್ಥವನ್ನು ಗಂಭೀರವಾಗಿ ಚಿಂತಿಸಿ, ಬಹಳಷ್ಟು ಕಣ್ಣೀರು ಸುರಿಸುತ್ತಿದ್ದರು. ಅದನ್ನು ಕಂಡ ಸತ್ಯ ನಿಷೇಧಿಗಳಿಗೆ ಅದನ್ನೂ ಕೂಡ ಸಹಿಸಲು ಆಗಲಿಲ್ಲ. ಅವರು ನೇರವಾಗಿ ಇಬ್'ನುದ್ದುಗನ್ನಯರ ಬಳಿ ಹೋಗಿ , ನೀವು ಆಶ್ರಯ ನೀಡಿದ ಅಬೂಬಕ್ಕರ್'ರಲ್ಲಿ ◌ؓ, ನೀವು ಹೇಳಿದ್ದು ಮನೆಯ ಒಳಗೆ ಆರಾಧನೆ ಮಾಡಲು ಆಗಿತ್ತು ಅಲ್ಲವೇ, ಆದರೆ ಈಗ ಅವರು ಮನೆಯ ಪಕ್ಕದಲ್ಲೇ ಮಸ್ಜಿದ್ ನಿರ್ಮಿಸಿ, ಸಾರ್ವಜನಿಕವಾಗಿ ಆರಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಅದನ್ನು ಕೇಳಿ ತಕ್ಷಣವೇ ಇಬ್'ನುದ್ದುಗನ್ನ ಅಬೂಬಕ್ಕರ್'ರವರನ್ನು ◌ؓ ಭೇಟಿಯಾಗಿ, ನನ್ನ ಆಶ್ರಯದಲ್ಲಿರುವ ಒಬ್ಬ ವ್ಯಕ್ತಿ, ಈ ರೀತಿ ತಂತ್ರಗಳನ್ನು ರೂಪಿಸುವುದು ನನಗೆ ಇಷ್ಟವಿಲ್ಲ, ಹಾಗಾಗಿ ನೀವು ಈ ಕೂಡಲೇ ಸಾರ್ವಜನಿಕವಾಗಿ ಆರಾಧನೆ ಮಾಡುವುದನ್ನು ನಿಲ್ಲಿಸಬೇಕು. ಅಥವಾ ನನ್ನ ಆಶ್ರಯವನ್ನು ಬಿಟ್ಟು ಬಿಡಬೇಕು ಎಂದು ಹೇಳಿದರು. ಅದಕ್ಕೆ ಅಬೂಬಕ್ಕರ್'ರವರು ◌ؓ ತಕ್ಷಣವೇ ನಾನು ನಿಮ್ಮ ಆಶ್ರಯದಿಂದ ದೂರ ಸರಿದು ಅಲ್ಲಾಹನ ಆಶ್ರಯವನ್ನು ಬಯಸುತ್ತೇನೆ ಎಂದು ಹೇಳಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment