ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಬೂತ್ವಾಲಿಬರ ವಿಯೋಗದ ನಂತರದ ಮಕ್ಕಾದಲ್ಲಿ ಉಂಟಾದ ಸಂಧಿಗ್ದ ಪರಿಸ್ಥಿತಿಯ ಕುರಿತು ಒಂದು ಉಲ್ಲೇಖವು ಈ ರೀತಿಯಾಗಿದೆ. ಅನಸ್'ರವರು ◌ؓ ಹೇಳುವುದು ಕಾಣಬಹುದು. ಖುರೈಷಿಗಳು, ಪ್ರವಾದಿಯವರ ﷺ ಮೇಲೆ ಬಹಳಷ್ಟು ಹಲ್ಲೆ ನಡೆಸಿದರು. ಅವರು ತಮ್ಮ ಪ್ರಜ್ಞೆ ತಪ್ಪುವ ಪರಿಸ್ಥಿತಿಗೆ ಬಂದು ತಲುಪಿದರು. ತಕ್ಷಣವೇ ಅಲ್ಲಿಗೆ ಬಂದ ಅಬೂಬಕ್ಕರ್ ◌ؓ, ಜೋರು ಧ್ವನಿಯಲ್ಲಿ, ನನ್ನ ರಕ್ಷಕ ಅಲ್ಲಾಹನಾಗಿದ್ದಾನೆ, ಎಂದು ಹೇಳಿದ ಕಾರಣಕ್ಕೆ ನೀವು ಅವರನ್ನು ಸಾಯಿಸಲು ನೋಡುತ್ತಿದ್ದೀರೇ.? ಎಂದು ಕೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಅವರ ಮಧ್ಯಸ್ಥಿಕೆ ಬಹಳಷ್ಟು ಪರಿಣಾಮಕಾರಿಯಾಗಿತ್ತು. ಅದನ್ನು ಸೂಚಿಸುವ ಒಂದು ಘಟನೆಯ ಬಗ್ಗೆ, ಮುಹಮ್ಮದ್ ಬಿನ್ ಅಖೀಲ್ ತಿಳಿಸುವ ಉಲ್ಲೇಖವನ್ನು ಅಬೂನುಐಂ ಈ ರೀತಿ ವಿವರಿಸುತ್ತಾರೆ. ನನ್ನಲ್ಲಿ ಅಲಿಯವರು ◌ؓ, ಈ ಜನತೆಯಲ್ಲಿ ಬಹಳಷ್ಟು ಧೈರ್ಯಶಾಲಿ ವ್ಯಕ್ತಿ ಯಾರೆಂದು.? ನನಗೆ ತಿಳಿಸುವಿರ ಎಂದು ಕೇಳಿದಾಗ, ಅದು ನೀವೆ ಎಂದು ಎಲ್ಲರೂ ಒಟ್ಟಾಗಿ ತಿಳಿಸಿದೆವು. ತಕ್ಷಣವೇ ಅಲಿಯವರು ◌ؓ ನೇರವಾದ ನಡೆದ ಯುದ್ಧದಲ್ಲಿ ನಾನು ಬಹಳಷ್ಟು ಜನರನ್ನು ಎದುರಿಸಿದ್ದೇನೆ, ಅದಲ್ಲ ನಾನು ಕೇಳಿದ್ದು, ಅತೀ ದೊಡ್ಡ ಧೀರ ವ್ಯಕ್ತಿ (ಶುಜಾಯಿ) ಯಾರು ಎಂದು.? ಪುನಃ ಕೇಳಿದಾಗ, ನಾವೆಲ್ಲರೂ ಅದೂ ಕೂಡ ನೀವೆ ಎಂದು ಉತ್ತರಿಸಿದೆವು. ತಕ್ಷಣವೇ ಅಲಿಯವರು ◌ؓ ಅಬೂಬಕ್ಕರ್ ◌ؓ ಆಗಿದ್ದಾರೆ ಎಂದು ಹೇಳಿದರು. ಯಾಕೆಂದರೆ, ಒಂದು ದಿನ ಖುರೈಷಿಗಳು ಪ್ರವಾದಿಯಾರಿಗೆ ﷺ ಬಹಳಷ್ಟು ತೊಂದರೆ ನೀಡಿ ಈ ವ್ಯಕ್ತಿಯಾಗಿದ್ದಾರೆ, ನಮ್ಮ ಹಲವಾರು ದೇವರುಗಳನ್ನು, ಒಂದೇ ದೇವನು ಮಾತ್ರ ಎಂದು ಬದಲಾವಣೆ ಮಾಡಿದ್ದು ಎಂದು ಹೇಳುತ್ತಿದ್ದಾಗ, ನಾವ್ಯಾರಿಗೂ ಅಲ್ಲಿ ಹೋಗಲು ಸಾಧ್ಯವಾಗಿಲ್ಲ. ಅಷ್ಟರಲ್ಲೇ ಅಬೂಬಕ್ಕರ್ ◌ؓ ನೇರವಾಗಿ ಅಲ್ಲಿಗೆ ಬಂದು, ಪ್ರವಾದಿಯವರನ್ನು ಸುತ್ತುವರಿದಿದ್ದ ಜನರನ್ನು ದೂರ ಸರಿಸಿ, ನಿಮಾಗಾಗಿದೆ ನಾಶ.! ನನ್ನ ರಕ್ಷಕ ಅಲ್ಲಾಹನಾಗಿದ್ಡಾನೆ ಎಂದು ಹೇಳಿದ ಕಾರಣಕ್ಕೆ ಇವರನ್ನು ನೀವುಗಳು ಸಾಯಿಸುತ್ತಿದ್ದೀರೆ.? ಎಂದು ಹೇಳಿ ಮುಗಿಸುವಾಗ ಅಲಿಯವರು ◌ؓ ಭಾವುಕರಾಗಿ ಅಳಲು ಆರಂಭಿಸಿದರು. ಕಣ್ಣೀರು ಅವರ ಗಡ್ಡದ ನಡುವಿನಿಂದ. ಹರಿದು ಹೋಗುವಷ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನಂತರ ಅವರು ಸಭೆಯೊಂದಿಗೆ, ಫರೋವನ ಜನತೆಯ ಸತ್ಯ ವಿಶ್ವಾಸಿಗಳೋ ಧೀರರು ಅಥವಾ ಅಬೂಬಕ್ಕರ್'ರವರ ◌ؓ ಧೀರ ವ್ಯಕ್ತಿ ಎಂದು ಕೇಳಿದಾಗ.? ಸಭೆಯಲ್ಲಿ ಯಾರೂ ಏನೂ ಹೇಳಲಿಲ್ಲ. ಅದನ್ನು ಕಂಡು ಯಾಕೆ ಯಾರೂ ಹೇಳುತ್ತಿಲ್ಲ ಎಂದು ಕೇಳಿ.? ಅಬೂಬಕ್ಕರ್'ರವರ ◌ؓ ಒಂದೊಂದು ನಿಮಿಷವೂ ಕೂಡ ಫರೋವನ ಜನತೆಯ ಸತ್ಯ ವಿಶ್ವಾಸಿಗಳ ಜೀವನಕ್ಕೆ ಸಮಾನವಾಗಿದೆ. ಅಷ್ಟೇ ಅಲ್ಲ ಅವರು ಫರೋವನ ಭಯದಿಂದ ತಮ್ಮ ವಿಶ್ವಾಸವನ್ನು ರಹಸ್ಯವಾಗಿ ಇಟ್ಟರು ಆದರೆ ಅಬೂಬಕ್ಕರ್ ◌ؓ ಸಾರ್ವಜನಿಕವಾಗಿ ಎದುರಿಸಿದರು ಎಂದು ಹೇಳಿದರು.
ಹಿಜ್'ರ ಹತ್ತನೇ ವರ್ಷದ ಘಟನೆಯನ್ನಾಗಿದೆ ನಾವು ಈಗ ತಿಳಿದದ್ದು. ಮಕ್ಕಾದಲ್ಲಿದ್ದ ಪ್ರತಿರೋಧಗಳು ಬಹಳಷ್ಟು ಕ್ರೂರವಾಯಿತು. ಇಸ್ಲಾಮಿನ ಸುಂದರ ಆದರ್ಶಗಳನ್ನು ತಿಳಿಸಿಕೊಡಲು ಮುಂದಿನ ದಾರಿ ಏನೆಂದು ಯೋಚಿಸುತ್ತಾ, ಸಖೀಫ್ ಜನತೆಯ ಬೆಂಬಲ ಪಡೆದರೆ ಹೇಗೆ.? ಎಂಬ ತೀರ್ಮಾನಕ್ಕೆ ಬಂದು. ಸಖೀಫ್ ಜನತೆಯ ಕಡೆಗೆ ಹೋದರು. ಅವರು ತ್ವಾಹಿಫ್'ನಲ್ಲಾಗಿತ್ತು ವಾಸವಾಗಿದ್ದದ್ದು. ಅಷ್ಟೇ ಅಲ್ಲ ಪ್ರವಾದಿಯವರ ﷺ ಸಾಕು ತಾಯಿ ಹಲೀಮ ಬೀವಿಯವರ ◌ؓ ಹಾಗೂ ಸಂಬಂಧಿಕರ ಮನೆಯೂ ಕೂಡ ಅಲ್ಲೇ ಇದ್ದವು. ಹೀಗೆ ಪ್ರವಾದಿಯವರು ﷺ ಹಿಜ್'ರ ಹತ್ತನೇ ವರ್ಷ ಶವ್ವಾಲ್ ತಿಂಗಳಲ್ಲಿ ತ್ವಾಹಿಫ್'ಗೆ ಹೊರಟರು. ಅವರ ಜೊತೆಯಲ್ಲಿ ಝೈದ್ ಬಿನ್ ಹಾರಿಸ್ ◌ؓ ಕೂಡ ಜೊತೆಯಲ್ಲಿದ್ದರು. ತ್ವಾಹಿಫಿನ ಜನತೆ ಖಂಡಿತ ಸಹಾಯ ಮಾಡುವರು ಎನ್ನುವ ಭರವಸೆಯಿಂದಾಗಿತ್ತು ತ್ವಾಹೀಫಿಗೆ ತಲುಪಿದ್ದು. ಅವರು ಸಖೀಫ್ ಜನಾಂಗದ ನಾಯಕರನ್ನು ಭೇಟಿಯಾಗಲು ಹೊರಟರು. ಅಂರ್ ಬಿನ್ ಉಮೈರ್'ನ ಮೂರು ಮಕ್ಕಳಾಗಿದ್ದರು ಅಲ್ಲಿನ ನಾಯಕರು. ಅವರಲ್ಲಿ ಅಬ್ದು ಯಾಲಿಲ್, ಹಬೀಬ್, ಮಸ್'ಊದ್ ಎನ್ನುವರಾಗಿದ್ದರು, ಪ್ರಮುಖ ವ್ಯಕ್ತಿಗಳು. ಸಫ್'ವಾನ್ ಬಿನ್ ಉಮಯ್ಯರ ತಾಯಿಯಾದ ಖುರೈಷಿ ಯುವತಿ ಸಫಿಯ ಅವರಲ್ಲಿ ಒಬ್ಬರಾಗಿದ್ದರು.
ಪ್ರವಾದಿಯವರು ﷺ ನೇರವಾಗಿ ಅವರನ್ನು ಭೇಟಿಯಾಗಿ ಅವರ ಬೆಂಬಲವನ್ನು ಆಗ್ರಹಿಸಿದರು. ಶತ್ರುಗಳ ವಿರುದ್ಧ ನಮ್ಮ ಜೊತೆಯಲ್ಲಿ ಇರಬೇಕು ಎಂದು ವಿನಂತಿಸಿದರು. ಎಲ್ಲವನ್ನೂ ಕೇಳಿದ ನಂತರ, ಅವರಲ್ಲಿ ಒಬ್ಬ ವ್ಯಕ್ತಿ ಎದ್ದು ನಿಂತು ಅಣಕಿಸುವ ರೀತಿಯಲ್ಲಿ, ಅಲ್ಲಾಹನು ಪ್ರವಾದಿಯಾಗಿ ಮುಹಮ್ಮದ್'ರನ್ನು ﷺ ನಿಯೋಗಿಸಿದ್ದರೆ ಕಅಬಾಲಯದ ಕಿಸ್'ವನ್ನು ನಾನು ಹರಿದು ಹಾಕುತ್ತೇನೆ ಎಂದು ಹೇಳಿದಾಗ, ಇನ್ನೊಬ್ಬ ವ್ಯಕ್ತಿ. ಪ್ರವಾದಿಯಾಗಿ ಮಾಡಲು ಬೇರೆ ಯಾರು ಸಿಗಲಿಲ್ವ.? ಎಂದು ಹೇಳಿದನು. ಮತ್ತೊಬ್ಬ ವ್ಯಕ್ತಿ ನಾನೇನು ಹೇಳುವುದಿಲ್ಲ, ನೀವು ನಿಜವಾಗಿಯೂ ಪ್ರವಾದಿ ಆಗಿದ್ದರೆ ಮಾತಾಡದೆ ಇರುವುದೇ ಒಳಿತು, ಇನ್ನು ಸುಳ್ಳು ಹೇಳುವುದಾದರೂ ಆಗಲೂ ಮಾತಾಡದೆ ಇರುವುದೇ ಒಳಿತು ಎಂದು ಹೇಳಿದರು. ಪ್ರವಾದಿಯವರು ﷺ, ಸಖೀಫ್ ಜನತೆಯ ಬೆಂಬಲ ಸಿಗುವುದಿಲ್ಲ ಎಂದು ಅರಿತು ಬೇಸರದಿಂದ ಎದ್ದು ನಿಂತು, ಅವರಲ್ಲಿ ನೀವು ನನ್ನನ್ನು ಅಣಕಿಸಿದ್ದು, ನನ್ನ ಬಳಿ ವರ್ತಿಸಿದ್ದು ಎಲ್ಲವು ಹಾಗೆ ಇರಲಿ. ಆದರೆ ಅದನ್ನು ಪ್ರಚಾರ ಮಾಡಬೇಡಿ ಎಂದು ಹೇಳಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment