Abu Hisham Saquafi

Official Website Of Hafiz Ilyas Saquafi Padaladka

Friday, October 7, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -109 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಪ್ರವಾದಿಯವರು ﷺ ಹಾಗೂ ಝೈದ್ ಬಿನ್ ಹಾರಿಸ ◌ؓ ಬಂದು ಹಿರಾದ ಬಳಿ ತಲುಪಿದರು. ಮಕ್ಕಾ ನಗರದ ಒಳಗೆ ಹೋಗಬೇಕಾದರೆ ಯಾರದ್ದಾದರೂ ಆಶ್ರಯವಿದ್ದರೆ ಮಾತ್ರವೇ ಹೋಗ ಬಹುದಿತ್ತು. ಹಾಗಾಗಿ ಅಬ್ದುಲ್ಲಾಹಿಬಿನ್ ಉರೈಖಿತರನ್ನು, ಅಖ್'ನಸ್ ಬಿನ್ ಶರೀಖ್ ಎಂಬ ಗಣ್ಯ ವ್ಯಕ್ತಿಯ ಬಳಿ ಕಳುಹಿಸಿದಾಗ, ಅವರು ನಾನೇ ಕೆಲವೊಂದು ಒಪ್ಪಂದದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಹಾಗಾಗಿ ನನಗೆ ಯಾರಿಗೂ ಆಶ್ರಯ ನೀಡಲು ಅನುಮತಿ ಇಲ್ಲ ಎಂದು ಹೇಳಿದರು. ನಂತರ ಅಲ್ಲಿಂದ ಸುಹೈಲ್ ಬಿನ್ ಅಂರ್'ನ ಬಳಿ ಬಂದಾಗ ಅವರು ಬನೂ ಆಮೀರ್ ಜನಾಂಗದ ಜನರು, ಬನೂ ಕಅಬ್ ಜನಾಂಗಕ್ಕೆ ಆಶ್ರಯ ನೀಡುವುದಿಲ್ಲ ಎಂದು ವಾಪಸು ಕಳುಹಿಸಿದರು. ಕೊನೆಗೆ ಮುತ್ವ್ಇಮು ಬಿನ್ ಅದಿಯ್ಯಿರಲ್ಲಿ ಕೇಳಿದಾಗ, ಅವರು ಆಶ್ರಯ ನೀಡಲು ಒಪ್ಪಿಕೊಂಡು ಪ್ರವಾದಿಯವರನ್ನು ﷺ ಅವರ ಮನೆಗೆ ಬರಲು ಅನುಮತಿ ನೀಡಿದರು. ಮೊದಲು ಆಶ್ರಯ ಕೇಳಿ ಹೋಗಿದ್ದ ಇಬ್ಬರೂ ನಂತರದ ಕಾಲದಲ್ಲಿ ಇಸ್ಲಾಂ ಸ್ವೀಕರಿಸಿದ್ದರೂ ಮೂರನೇ ವ್ಯಕ್ತಿಗೆ ಮಾತ್ರ ಆ ಭಾಗ್ಯ ಸಿಗಲಿಲ್ಲ. ಮರುದಿನ ಪ್ರವಾದಿಯವರ ﷺ ಜೊತೆಯಲ್ಲಿ ಮುತ್ವ್'ಇಂ ಕೂಡ ತನ್ನ ಆರೇಳು ಮಕ್ಕಳ ಜೊತೆಯಲ್ಲಿ ಆಯುಧದಾರಿಯಾಗಿ ಕಅಬಾಲಯದ ಬಳಿ ಬಂದು, ಪ್ರವಾದಿಯವರಲ್ಲಿ ﷺ ಕಅಬಾದ ತ್ವವಾಫ್ (ಕಅಬಾದ ಪ್ರದಕ್ಷಿಣೆ) ಹಾಕಲು ಹೇಳಿದರು. ಅದನ್ನು ಅಲ್ಲೇ ನೋಡುತ್ತಿದ್ದ ಅಬೂಸೂಫಿಯಾನ್, ಮುತ್ವ್'ಇಮರಲ್ಲಿ ನೀವು ಮುಹಮ್ಮದ್'ರ ﷺ ಅನುಯಾಯಿ ಆಗಿದ್ದೀರ.? ಎಂದು ಕೇಳಿದಾಗ, ಇಲ್ಲ ನಾನು ಅವರಿಗೆ ಆಶ್ರಯ ನೀಡಿದ್ದು ಮಾತ್ರ, ಎಂದು ಮುತ್ವ್'ಇಂ ಹೇಳಿದರು. ಹಾಗಾದರೆ ಸರಿ, ನಾವು ಕೂಡ ಅವರಿಗೆ ಆಶ್ರಯ ನೀಡುತ್ತೇವೆ ಎಂದು ಅಬೂಸೂಫಿಯಾನ್ ಕೂಡ ಅಲ್ಲೇ ಕುಳಿತು ಕೊಂಡರು. ಪ್ರವಾದಿಯವರು ﷺ ಮನೆಗೆ ಹಿಂತಿರುಗಿ ಹೋದಾಗ, ಮುತ್ವ್'ಇಂ ತನ್ನ ಗೆಳೆಯರ ಜೊತೆಯಲ್ಲಿ ಮಸ್ಜಿದ್'ನ ಕಡೆಗೆ ಹೋದರು. ಪ್ರವಾದಿಯವರ ﷺ ಹಿಜ್'ರ (ಪಲಾಯನ) ಹೋಗವ ಸಂದರ್ಭದಲ್ಲಿ ಮುತ್ವ್'ಇಂ ಮರಣ ಹೊಂದಿದರು, ಅವರು ಮಾಡಿದ ಸಹಾಯ ಪ್ರವಾದಿಯವರ ﷺ ಮನಸ್ಸಿನಲ್ಲಿ ಹಾಗೆ ಉಳಿದಿತ್ತು. ಹಾಗಾಗಿ ಪ್ರವಾದಿಯವರು ﷺ, ಬದ್ರ್ ಯುದ್ಧದಲ್ಲಿ ಮುತ್ವ್ಇಂ ಬದುಕಿರುತಿದ್ದರೆ.? ಅವರ ಮಾತು ಕೇಳಿ ಬಂಧಿತರಾದವರನ್ನು ಬಿಡುಗಡೆ ಮಾಡಬೇಕಿತ್ತು ಎಂದು ಹೇಳುತ್ತಿದ್ದರು.

    ಹುಟ್ಟೂರಿಗಾಗಿ ಮತ್ತೊಮ್ಮೆ ಆಶ್ರಯ ಹುಡುಕುತ್ತಾ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಕಅಬಾಲಯದ ಪ್ರದಕ್ಷಿಣೆ ಕೂಡ ಹಾಕಲು ಆಗದ ಪರಿಸ್ಥಿತಿಯಾಗಿತ್ತು. ಹಿಂಸಿಸಲ್ಪಡುವ ವಿಶ್ವಾಸಿಗಳ ನೋವುಗಳು, ಪಲಾಯನದಿಂದ ಅಪಾಯಗಳನ್ನು ಎದುರಿಸುತ್ತಿದ್ದ ಅವರ ಕುಟುಂಬಗಳು, ಮನುಷತ್ವವೇ ಇಲ್ಲದೆ ಕ್ರೂರಿತನದ ವರ್ತನೆಯನ್ನು ಸಹಿಸುತ್ತಾ ಕಳೆಯುತ್ತಿದ್ದ ದಿನಗಳು. ಪ್ರವಾದಿಯವರು ﷺ ಕೂಡ ಅಲ್ಲಾಹನ ಆಜ್ಞೆಗಾಗಿ ಕಾಯುತ್ತಾ ಕುಳಿತಿದ್ದರು. ಇದರ ನಡುವೆ ತ್ವಾಹಿಫಿನಿಂದ ಮಕ್ಕಾ ನಗರಕ್ಕೆ ಹಿಂತಿರುಗಿ ಬರುವಾಗ, ಒಂದು ಅದ್ಭುತ ಘಟನೆಯನ್ನು ಪ್ರವಾದಿಯವರಿಗೆ ﷺ ಎದುರಿಸಬೇಕಾಗಿ ಬಂದಿತು. ಇಮಾಮ್ ಇಬ್'ನು ಇಸ್'ಹಾಖ್ ಉಲ್ಲೇಖಿಸಿದ ಹದೀಸ್'ನಲ್ಲಿ ಕಾಣಬಹುದು. ಪ್ರವಾದಿಯವರು ﷺ ಸಖೀಫ್'ನಿಂದ ತಮ್ಮ ಕಾರ್ಯ ಸಾಧ್ಯವಾಗದೆ ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ, ಮಕ್ಕಾ ನಗರಕ್ಕೆ ಹತ್ತಿರವಿದ್ದ ಒಂದು ಸ್ಥಳದಲ್ಲಿ, ಜಿನ್ನ್'ಗಳಿಂದ ಕೆಲವರು ಪ್ರವಾದಿಯವರು ﷺ ಖುರ್'ಆನ್ ಓದುದನ್ನು ಕೇಳಿದರು. ನಸೀಬೀನ್ ಜನಾಂಗದ ಏಳು ಮಂದಿ ಆಗಿದ್ದರು ಎಂದಾಗಿತ್ತು ಇಬ್'ನು ಇಸ್'ಹಾಕ್ ಅಭಿಪ್ರಾಯ ಪಟ್ಟಿದ್ದು. ಪ್ರವಾದಿಯವರ ﷺ ನಮಾಝಿನ ಬಳಿಕ ಅವರು, ಅವರ ಗುಂಪಿಗೆ ಹೋಗಿ, ಪ್ರವಾದಿಯವರಿಂದ ﷺ ಕೇಳಿದ ಖುರ್'ಆನನ್ನು ಅವರಿಗೂ ತಿಳಿಸಿದರು. ಅವರೂ ಕೂಡ ಅದನ್ನು ಅಂಗೀಕರಿಸಿದರು. 

    ಈ ಘಟನೆಯನ್ನು ಪವಿತ್ರ ಖುರ್'ಆನಿನ ನಲ್ವತ್ತಾರನೇ ಅಧ್ಯಾಯ ಅಲ್ ಅಹ್'ಖಾಫಿನ ಇಪ್ಪತ್ತೊಂಬತ್ತರಿಂದ ಮೂವತ್ತೊಂದರ ವರೆಗಿನ ಸೂಕ್ತಗಳಲ್ಲಿ ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ, "ಜಿನ್ನ್'ಗಳಿಂದ ಒಂದು ಗುಂಪನ್ನು ನಿಮ್ಮ ಖುರ್'ಆನ್ ಪಠನೆಯನ್ನು ಕೇಳಲು ಕಳುಹಿಸಿದ ಸಂದರ್ಭ ಬಹಳ ಗಮನಾರ್ಹವಾಗಿದೆ. ನೀವು ಖುರ್'ಆನ್ ಓದುತ್ತಿದ್ದ ಸಂದರ್ಭದಲ್ಲಿ ಅವರು ನಿಶಬ್ಧವಾಗಿ ಕುಳಿತುಕೊಳ್ಳಲು ಪರಸ್ಪರ ಅವರಲ್ಲೇ ಹೇಳಿಕೊಂಡರು. ಖುರ್'ಆನ್ ಓದಿ ಮುಗಿದ ನಂತರ ಅವರು, ಅವರ ಗುಂಪಿಗೆ ಮರಳಿ ಹೋಗಿ, ಅವರ ಗುಂಪಿನ ಜನತೆಯನ್ನು ಕೂಗಿ, ಪ್ರವಾದಿ ಮೂಸರವರ (ಅ) ನಂತರ ನಾವು ಒಂದು ವೇದ ಗ್ರಂಥವನ್ನು ಕೇಳಿದ್ದೇವೆ. ಅದು ಸತ್ಯಕ್ಕೂ, ಒಳಿತಿಗಳಿಗೂ ಆಹ್ವಾನ ನೀಡುವುದು ಮಾತ್ರವಲ್ಲದೆ, ಪೂರ್ವ ಕಾಲ ವೇದಗಳಿಗೆ ಹೊಂದಾಣಿಕೆಯೂ ಆಗುತ್ತಿದೆ ಎಂದು ಹೇಳಿದರು."

      ಜಿನ್ನ್ ವರ್ಗದಿಂದ ಬಂದ ಪ್ರತಿನಿಧಿಗಳು ಒಂಬತ್ತು ಮಂದಿ ಇದ್ದರು. ಎಂದೂ, ಅವರಲ್ಲಿ ಒಬ್ಬರ ಹೆಸರು ಸೌಬಿಯಃ ಎಂದೂ ಅಭಿಪ್ರಾಯವಿದೆ. ಜಿನ್ನ್ ವರ್ಗದಿಂದ ಮೂರು ಮಂದಿಯ ಜೊತೆಯಲ್ಲಿ ಪ್ರವಾದಿಯವರು ﷺ, ಹುಜೂನ್ ಎಂಬ ಸ್ಥಳಕ್ಕೆ ತಲುಪಿದರು. ಪ್ರವಾದಿಯವರು ﷺ ಅವರಿಗಾಗಿ ಸಮಯ ನೀಡಿದರು, ಆ ಸಂದರ್ಭದಲ್ಲಿ ಪ್ರವಾದಿಯವರ ﷺ ಜೊತೆಯಲ್ಲಿ ಇತರ ಯಾವುದೇ ಅನುಯಾಯಿಗಳು ಇರಲಿಲ್ಲ. ಮತ್ತೊಂದು ಸಂದರ್ಭದಲ್ಲಿ ಇಬ್'ನು ಮಸ್'ವೂದ್'ರವರು ◌ؓ ಜೊತೆಯಲ್ಲಿದ್ದರು. 

    (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: