ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಎಷ್ಟೇ ಸಮಸ್ಯೆಗಳು ಎದುರಾದರೂ, ಪ್ರವಾದಿಯವರು ﷺ ಪ್ರಭೋಧನೆಯನ್ನು ಮಾತ್ರ ನಿಲ್ಲಿಸಿರಲಿಲ್ಲ. ಪ್ರವಾದಿತ್ವದ ಘೋಷಣೆಯಾಗಿ ಮೊದಲ ಮೂರು ವರ್ಷ ರಹಸ್ಯವಾಗಿ ಆಗಿತ್ತು ಪ್ರಭೋಧನೆ ನಡೆಸಿದ್ದು. ನಂತರ ಸಾರ್ವಜನಿಕವಾಗಿ ಆರಂಭಿಸಿದ ಪ್ರಭೋಧನೆಗೆ ಈಗ ಹತ್ತು ವರ್ಷ ಪೂರ್ತಿಯಾಗುದರಲ್ಲಿತ್ತು. ಅದೆಷ್ಟೇ ಪ್ರತಿರೋಧ, ಪ್ರತಿಕ್ರಿಯೆ ಇದ್ದರೂ, ಸನ್ಮಾರ್ಗಕ್ಕಾಗಿ ನಡೆಸುತ್ತಿದ್ದ ಆಹ್ವಾನ ಮಾತ್ರ ಮುಂದುವರಿಯುತ್ತಲೇ ಇತ್ತು. ಪ್ರವಾದಿಯವರು ﷺ ಒಂದೊಂದೇ ಜನಾಂಗದ ಜನರನ್ನು ನೇರವಾಗಿ ಭೇಟಿಯಾಗಿ ಪ್ರಭೋಧನೆ ನಡೆಸಲು ತೀರ್ಮಾನಿಸಿ, ಅದಕ್ಕಾಗಿ ಮಕ್ಕಾ ನಗರಕ್ಕೆ ತೀರ್ಥಯಾತ್ರೆಗೆ ಬಂದು ತಲುಪುವ ಯಾತ್ರಿಕರಿಗಾಗಿ ಕಾಯುತ್ತಾ ನಿಂತರು. ಮಕ್ಕಾ ನಗರಕ್ಕೆ ಬಂದಿದ್ದ ಯಾತ್ರಿಕರು, ಅತೀ ಹೆಚ್ಚು ತಂಗುತಿದ್ದದ್ದು ಉಕ್ಕಾಳ್, ಮಜಿನ್ನ, ದುಲ್ 'ಮಜಾಸ್ ಎಂಬ ಅಂಗಡಿಗಳಿರುವ ಸ್ಥಳದಲ್ಲಾಗಿತ್ತು. ಕಅಬಾಲಯದಿಂದ ಹಿಂತಿರುಗಿ ಬರುತ್ತಿದ್ದ ಜನರನ್ನು, ಪ್ರವಾದಿಯವರು ﷺ ಹಿಂಬಾಲಿಸಿ, ಅವರು ತಂಗಿದ್ದ ಶಿಬಿರಕ್ಕೆ ಬಂದು, ಅವರ ಬಗ್ಗೆ ಎಲ್ಲವನ್ನೂ ತಿಳಿದು, ಇನ್ನುಳಿದವರ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದರು. ಹೀಗೆ ಒಂದೊಂದೇ ಮನೆತನದವರ ಬಳಿ ತೆರಳಿ, ಅವರಲ್ಲಿ "ಲಾಇಲಾಹ ಇಲ್ಲಲ್ಲಾಹ್" ಎಂದು ಹೇಳಿ ವಿಜಯ ಶಾಲಿಗಳಾಗಿರಿ, ನೀವು ಸತ್ಯ ವಿಶ್ವಾಸಿಗಳಾದರೆ ನಿಮಗೆ ಸ್ವರ್ಗ ಸಿಗಲಿದೆ ಎಂದು ಹೇಳುತ್ತಿದ್ದರು. ಅಷ್ಟೊತ್ತಿಗೆ ಅಬೂಲಹಬಿನ ನಾಯಕತ್ವದಲ್ಲಿ ಖುರೈಷಿಗಳು ಪ್ರವಾದಿಯವರು ﷺ ಇದ್ದ ಸ್ಥಳಕ್ಕೆ ಬಂದು, ಇವರನ್ನು ನಂಬಬೇಡಿ, ಇವರು ಸ್ವಾಬಿಯಿ ಆಗಿರುತ್ತಾರೆ. ಅವರು ಸುಳ್ಳನ್ನೇ ಹೇಳುವುದು, ಎಂದು ಹೇಳುತ್ತಿದ್ದರು. ಅದನ್ನು ಕೇಳುತ್ತಿದ್ದ ಜನಾಂಗದ ಜನರು, ಊರಿನ ಜನರು ಸುಳ್ಳು ಹೇಳಲ್ಲ ಅಲ್ವಾ.? ಅವರಿಗೆ ಅಲ್ವಾ ಅವರ ಊರಿನ ವ್ಯಕ್ತಿಯ ಬಗ್ಗೆ ಜಾಸ್ತಿ ಗೊತ್ತಿರುವುದು ಎಂದು ಹೇಳುತ್ತಾ, ಪ್ರವಾದಿಯವರನ್ನು ﷺ ಬಹಳ ಹೀನಾಯವಾಗಿ ಬೈದು ಕಳುಹಿಸುತಿದ್ದರು. ಪ್ರವಾದಿಯವರು ﷺ ಅದೆಲ್ಲವನ್ನೂ ಕೇಳಿ ಮುಂದಿನ ಅವಕಾಶಕ್ಕಾಗಿ ಕಾಯುತ್ತಿದ್ದರು.
ಇಮಾಮ್ ಬೈಹಕಿಯವರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ ರಬೀಅತ್ ಬಿನ್ ಇಬಾದ್ ಎಂಬ ವ್ಯಕ್ತಿಯು ಹೇಳುವುದು ಈ ರೀತಿಯಾಗಿದೆ. ನಾನು, ನನ್ನ ಬಾಲ್ಯದಲ್ಲಿ, ನನ್ನ ತಂದೆಯೊಂದಿಗೆ ಮಿನಾದಲ್ಲಿ ನಿಂತಿದ್ದ ಸಂದರ್ಭದಲ್ಲಿ, ಪ್ರವಾದಿಯವರು ﷺ ಅರಬ್ ಜನಾಂಗದ ಜನರನ್ನು ಇಸ್ಲಾಮಿಗೆ ಆಹ್ವಾನಿಸುತಿದ್ದದ್ದು ಕಾಣಲು ಸಾಧ್ಯವಾಯಿತು. ಅವರು ಅಲ್ಲಿ, ನಾನು ಅಲ್ಲಾಹನ ದೂತ (ಸಂದೇಶ ವಾಹಕ) ಆಗಿರುವೆನು, ಅವನನ್ನು ಮಾತ್ರವೇ ಆರಾಧಿಸಿರಿ, ಅವನ ಜೊತೆಯಲ್ಲಿ ಇನ್ಯಾರನ್ನು ಜೊತೆಯಾಗಿ ಸೇರಿಸಬೇಡಿರಿ, ನೀವು ಆರಾಧಿಸುತ್ತಿರುವ ಮೂರ್ತಿಗಳನ್ನು ದೂರ ಮಾಡಿರಿ, ನನ್ನನ್ನು ವಿಶ್ವಾಸವಿರಿಸಿ, ಅಂಗೀಕರಿಸಿರಿ, ಅಲ್ಲಾಹನು ನನಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಲು ನನ್ನ ಜೊತೆಯಲ್ಲಿ ನಿಂತು ಸಹಾಯ ಮಾಡಿರಿ ಎಂದು ಹೇಳುತ್ತಿದ್ದರು. ಅದನ್ನು ಕೇಳಿದ ಜನರೆಲ್ಲರೂ ಅವರನ್ನು ಸುತ್ತುವರಿದರು. ಅವರು ಅದೇನೇ ಕೇಳಿದರೂ ಪ್ರವಾದಿಯವರು ﷺ ಮಾತ್ರ ಮಾತಾಡುತ್ತಲೇ ಇದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಿಳಿ ವರ್ಣದ ವ್ಯಕ್ತಿಯೊಬ್ಬರು, ಅದನೀ ಶಿರವಸ್ತ್ರ ಧರಿಸಿ ಬಂದು, ಪ್ರವಾದಿಯವರು ﷺ
ಮಾತು ನಿಲ್ಲಿಸಿದ ಕೂಡಲೇ, ಅವರು ಮಾತು ಮುಂದುವರಿಸುತ್ತಾ, ಓ ಜನರೇ ಈ ವ್ಯಕ್ತಿ ಹೇಳುತ್ತಿರುವುದು, ನೀವು ಲಾತ, ಉಝ್ಝ, ಹಾಗೂ ನಾವು ಸೇವೆ ಮಾಡುತ್ತಿರುವ ಜಿನ್ನ್'ಗಳನ್ನು ದೂರ ಮಾಡಬೇಕೆಂದೂ, ಅಷ್ಟೇ ಅಲ್ಲ ಇವರ ನೂತನ ವಾದವನ್ನು ಅಂಗೀಕರಿಸಬೇಕೆಂದು ಆಗಿದೆ. ನೀವು ಯಾವುದೇ ಕಾರಣಕ್ಕೂ ಇವರನ್ನು ಮಾತ್ರ ಅಂಗೀಕರಿಸಿಬೇಡಿ ಎಂದು ಹೇಳಿದರು. ಅದನ್ನು ಕೇಳಿ ನಾನು, ನನ್ನ ತಂದೆಯಲ್ಲಿ, ಈ ಮಾತಾಡಿದ ವ್ಯಕ್ತಿ ಯಾರೆಂದು ಕೇಳಿದಾಗ.?, ಅದು ಈಗ ಮಾತಾಡಿದ ಆ ಪ್ರವಾದಿಯವರ ﷺ ದೊಡ್ಡಪ್ಪ ಅಬೂಲಹಬ್ ಆಗಿದ್ದಾರೆ ಎಂದು ಹೇಳಿದರು.
ಮುದಿರಿಕ್ ಬಿನ್ ಮುನೀಬ್ ಎಂಬ ವ್ಯಕ್ತಿಯು, ಅವರ ತಾತನಿಂದ ಕೇಳಿದ ವಿಷಯವನ್ನು ಅವರ ತಂದೆ, ಅವರಿಗೆ ಹೇಳಿದ್ದಾಗಿ, ಹೇಳುವುದು ಕಾಣಬಹುದು. ಅಂಧಕಾರದ (ಜಾಹಿಲೀಯ) ಸಮಯದಲ್ಲಿ ನನಗೆ ಪ್ರವಾದಿಯವರನ್ನು ﷺ ಕಾಣಲು ಸಾಧ್ಯವಾಗಿತ್ತು. ಅವರು ಜನರಲ್ಲಿ, ಲಾಇಲಾಹ ಇಲ್ಲಲ್ಲಾಹ್ ಹೇಳಿ ವಿಜಯ ಶಾಲಿಯಾಗಿರಿ ಎಂದು ಹೇಳುತ್ತಿದ್ದರು. ಅದನ್ನು ಕೇಳಿದ ಕೆಲವು ಜನರಲ್ಲಿ, ಕೆಲವರು ಮುಖ ತಿರುಗಿಸಿ ಹೋದರೇ, ಕೆಲವರು ಅವರ ಮೇಲೆ ಮಣ್ಣು ಬಿಸಾಡಿದರು, ಕೆಲವರಂತೂ ಅವಾಚ್ಯ ಶಬ್ದಗಳಿಂದ ನಿಂದಿಸುತಿದ್ದರು. ಇದು ಹೀಗೆ ಮಧ್ಯಾಹ್ನದ ವರೆಗೆ ಮುಂದುವರಿಯುತ್ತಲೇ ಇತ್ತು. ಅಷ್ಟೊತ್ತಿಗೆ ಹದಿಹರೆಯದ ಹೆಣ್ಣು ಮಗಳೊಬ್ಬಳು ಅಲ್ಲಿಗೆ ಬಂದಳು, ಅವಳು ತಂದಿದ್ದ ಪಾತ್ರೆಯಲಿದ್ದ ನೀರಿನಿಂದ ಪ್ರವಾದಿಯವರು ﷺ ಕೈ, ಕಾಲು, ಮುಖ ತೊಳೆದರು. ನಂತರ ಅವಳಲ್ಲಿ, ನಿನ್ನ ತಂದೆಗೆ ಆಗುತ್ತಿರುವ ನಿಂದನೆ, ಸೋಲನ್ನು ಕಂಡು ನೀನು ಕುಗ್ಗದಿರು ಮಗಳೇ ಎಂದು ಹೇಳಿದರು. ನಾನು ಇತರರಲ್ಲಿ ಅದು ಯಾರೆಂದು ಕೇಳಿದಾಗ, ಅದು ಪ್ರವಾದಿಯವರ ﷺ ಮಗಳಾದ ಝೈನಬ್ ಎಂದು ಹೇಳಿದರು.
ಪ್ರವಾದಿಯವರ ﷺ ಪ್ರತಿ ಹೆಜ್ಜೆಯಲ್ಲೂ ಹಿಂದೆ ಹೋಗಿ, ಪ್ರವಾದಿಯವರಿಗೆ ﷺ ತೊಂದರೆ ನೀಡುವುದು ಅಬೂಲಹಬಿಗೆ ಅದೇನೋ ಒಂದು ಸಂತೋಷ ನೀಡುತ್ತಿತ್ತು, ಅಬೂಲಹಬ್ ಎಲ್ಲೇ ಹೋದರು ಅವರ ಜೊತೆಯಲ್ಲಿ ಅಬೂಜಹಲ್ ಕೂಡ ಇರುತ್ತಿದ್ದರು. ಕಿನ್'ದ, ಕಲ್'ಬ್, ಬನೂ ಆಮಿರ್, ಬನೂ ಹನೀಫ, ಎನ್ನುವ ಜನಾಂಗದವರಲ್ಲಿ ಪ್ರವಾದಿಯವರು ﷺ ಮಾತಾಡಿದಾಗ, ಅವರು ಬಹಳ ಕ್ರೂರವಾಗಿ ಆಗಿತ್ತು ವರ್ತಿಸುತ್ತಿದ್ದದ್ದು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment