Abu Hisham Saquafi

Official Website Of Hafiz Ilyas Saquafi Padaladka

Friday, October 7, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -111 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

     ಪ್ರವಾದಿಯವರಿಗೆ ﷺ ಮಾಡುತಿದ್ದ ಪರಿಹಾಸ್ಯ, ನಿಂದನೆಗಳನ್ನು ಕಂಡು ಪ್ರವಾದಿಯವರು ﷺ ಬಹಳಷ್ಟು ಬೇಸರ ಪಟ್ಟಿದ್ದರೂ, ಎಲ್ಲವನ್ನೂ ಅಲ್ಲಾಹನಿಗಾಗಿ ಕ್ಷಮಿಸಿ ಎದುರಿಸ ತೊಡಗಿದರು. ಅಷ್ಟರಲ್ಲಿ ಪ್ರವಾದಿಯವರನ್ನು ﷺ ಸಮಾಧಾನ ಪಡಿಸಲು ಖುರ್'ಆನಿನ ಸೂಕ್ತಗಳು ಅವತರಿಸಿತು. "ನಿಮ್ಮಕಿಂತ ಮುಂಚೆಯೂ ಕೂಡ ದೂತರು (ಪ್ರವಾದಿಗಳು) ಅಪಹಾಸ್ಯಗಳನ್ನು ಎದುರಿಸಿದ್ದರು. ಆಗ ಸತ್ಯ ವಿರೋಧಿಗಳಿಗೆ  ಬಹಳಷ್ಟು ಸಮಯವಕಾಶ ನೀಡಿದ್ದೆವು, ಕೊನೆಗೆ ನಾವರಿಗೆ ಪಾಠ ಕಲಿಸಿದೆವು, ಅವರಿಗೆ ನೀಡಿದ್ದ ಶಿಕ್ಷೆ ಎಷ್ಟೊಂದು ಭಯಾನಕವಾಗಿತ್ತು.!" (ಅಲ್ ರಅದ್/32) "ಖಂಡಿತವಾಗಿಯೂ ಅಪಹಾಸ್ಯ ಮಾಡುವವರಿಂದ ನಿಮ್ಮನ್ನು ರಕ್ಷಿಸಲು ನಾವು ಮಾತ್ರ ಸಾಕು." (ಅಲ್'ಹಿಜ್'ರ್/95) "ಈ ಜನತೆ ನಿಮ್ಮ ಬಗ್ಗೆ ಮಾಡುತ್ತಿರುವ ಅಪಹಾಸ್ಯಗಳಿಗೆ, ನಿಮಗೆ ಬಹಳಷ್ಟು ತೊಂದರೆ ಆಗಿದೆ ಎಂದು ನಮಗೆ ತಿಳಿದಿದೆ. ಅಲ್ಲಾಹನನ್ನು ಸ್ತುತಿಸಿ, ಅವನಿಗಾಗಿ ಸಾಷ್ಟಾಂಗ ಮಾಡಿರಿ, ಕೊನೆಯ ನಿಮಿಷದ ವರೆಗೂ ಅಲ್ಲಾಹುವಿನ ಆರಾಧನೆಯಲ್ಲಿ ಕಳೆಯಿರಿ" (ಅಲ್ ಹಿಜ್'ರ್/ 95-99)

     ಪ್ರವಾದಿಯವರಿಗೆ ﷺ ಸಂಪೂರ್ಣವಾಗಿ ಅಲ್ಲಾಹನ ಸಂರಕ್ಷಣೆ ಲಭಿಸಿತು. ಇನ್ನಷ್ಟು ಹುಮ್ಮಸ್ಸಿನಲ್ಲಿ ಕಾರ್ಯಾಚರಣೆಯಲ್ಲಿ, ಬಹಳ ಎಚ್ಚರಿಕೆಯಿಂದ ಮುಂದುವರೆದರು. ಇದರ ನಡುವೆ ಪ್ರವಾದಿಯವರನ್ನು ಅಪಹಾಸ್ಯ ಮಾಡುತ್ತಿರುವ ಜನರೇ ಅಪಹಾಸ್ಯಕ್ಕೆ ಗುರಿಯಾದರು. ಅವುಗಳಲ್ಲಿ ಕೆಲವೊಂದನ್ನು ನೋಡೋಣ. 

    1. ಅಲ್ ಅಸ್'ವದ್ ಬಿನ್ ಅಬ್ದು ಯಗೂಸ್:
ಬಲಾದುರಿ ವಿವರಿಸುವುದು ಕಾಣಬಹುದು. ಇವರು ಸತ್ಯವಿಶ್ವಾಸಿಗಳನ್ನು ಕಂಡರೆ, ಅದೋ ಕಿಸ್'ರಾ ಕೈಸರನ್ನು ವಶಪಡಿಸಿಕೊಳ್ಳುವ ರಾಜರು ಬರುತ್ತಿದ್ದಾರೆ ಎಂದು ತಮಾಷೆ ಮಾಡುತಿದ್ದರು. ಪ್ರವಾದಿಯವರನ್ನು ﷺ ಕಂಡರೆ, ಇವತ್ತು ಆಕಾಶದಿಂದ ಏನಾದರೂ ಸುದ್ದಿ ಬಂದಿದೆಯಾ.? ಎಂದು ಆಗಾಗ ಕೇಳುತ್ತಲೇ ಇದ್ದರು. ಹೀಗೆ ಒಂದು ದಿನ ಆ ವ್ಯಕ್ತಿ ಹೊರಗೆ ಹೋದಾಗ, ಅವರ ಶರೀರಕ್ಕೆ ವಿಷ ತಾಗಿ, ಶ್ವೇತ ವರ್ಣದ ಸುಂದರ ವ್ಯಕ್ತಿಯಾಗಿದ್ದ ಅವರು ಹಬ್'ಶಾದ ಕಪ್ಪು ವರ್ಣದ ಜನರ ಹಾಗೆ ಬದಲಾದರು. ಅದನ್ನು ಕಂಡ ಅವರ ಮನೆಯವರೂ ಕೂಡ ಅವರನ್ನು ದೂರ ಮಾಡಿದರು. ಅವರು ಹುಚ್ಚರ ಹಾಗೆ ಬೀದಿ ಬೀದಿಯಲ್ಲಿ ಅಲೆಯುತ್ತಾ ಕೊನೆಗೆ ಅವರ ಕರ್ಮದ ಫಲವಾಗಿ ಒಂದು ತೊಟ್ಟು ನೀರೂ ಸಿಗದೆ, ಬಹಳ ಹೀನಾಯವಾಗಿ ಸತ್ತು ಹೋದರು.

   2. ಹಾರಿಸ್ ಬಿನ್ ಖೈಸ್ ಅಸ್ಸಹ್'ಮಿ: ಅಂದಿಲ ತಾಯಿಯ ಮಗ ಎಂದೇ ಅರಿಯಲ್ಪಟ್ಟಿದ್ದ ಅವರು, ಕಲ್ಲುಗಳಾನ್ನಾಗಿತ್ತು ಆರಾಧನೆ ಮಾಡುತ್ತಿದ್ದದ್ದು. ಸುಂದರವಾದ ಕಲ್ಲನ್ನು ಕಂಡರೆ ಅವರು ಅದನ್ನು ಪೂಜಿಸುತ್ತಿದ್ದರು, ಅದಕ್ಕಿಂತ ಸುಂದರವಾದ ಬೇರೆ ಕಲ್ಲು ಸಿಕ್ಕರೆ ಹಿಂದಿನದನ್ನು ಬಿಟ್ಟು ಆ ಕಲ್ಲು ಪೂಜಿಸುತ್ತಿದ್ದರು. ಇದಾಗಿತ್ತು ಅವರು ಮಾಡುತ್ತಿದ್ದದ್ದು. ಖುರ್'ಆನಿನ ಅಲ್ ಫುರ್'ಖಾನ್ ಅಧ್ಯಾಯದ ನಲ್ವತ್'ಮೂರನೇ ಸೂಕ್ತದಲ್ಲಿ ಈ ವ್ಯಕ್ತಿಯ ಕುರಿತು ಹೇಳುವುದು ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ. ಸ್ವಂತ ಇಚ್ಛೆಯನ್ನು ದೇವರು ಮಾಡುತಿದ್ದ ವ್ಯಕ್ತಿಯ ಬಗ್ಗೆ ನೀವು ಆಲೋಚಿಸಿದ್ದೀರ.? ಅವರನ್ನು ಸನ್ಮಾರ್ಗಕ್ಕೆ ಕೊಂಡು ಬರಲು ನಿಮಗೆ ಸಾಧ್ಯವಿದೆಯೇ.? ಎಂದು. ಆ ವ್ಯಕ್ತಿ ಪ್ರವಾದಿಯವರ ﷺ ಬಗ್ಗೆ, ಮುಹಮ್ಮದ್ ಸ್ವಯಂ ವಂಚಿತರಾಗಿ, ತನ್ನ ಅನುಯಾಯಿಗಳನ್ನು ವಂಚಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಮರಣದ ನಂತರ ಒಂದು ಜೀವನ ಇದೆಯಂತೆ.? ಕಾಲವಾಗಿದೆ ಎಲ್ಲವನ್ನೂ ನಾಶ ಮಾಡುವುದು. ಕಾಲವಾಗಿದೆ ಎಲ್ಲವನ್ನೂ ಬದಲಾವಣೆ ಮಾಡುವುದು ಎಂದು ಹೇಳುತ್ತಾ, ಪ್ರವಾದಿಯವರನ್ನೂ ﷺ, ಅವರ ಧರ್ಮವನ್ನು ತಮಾಷೆ ಮಾಡುತಿದ್ದರು. ಹೀಗೆ ಒಂದು ದಿನ ಆ ವ್ಯಕ್ತಿ ಉಪ್ಪಿನಲ್ಲಿ ಹಾಕಿದ್ದ ಮೀನನ್ನು ತಿಂದರು. ಆಗ ಅವರಿಗೆ ವಿಪರೀತ ದಾಹ ಉಂಟಾಯಿತು,  ದಾಹದಿಂದ ಎಷ್ಟೇ ನೀರು ಕುಡಿದರೂ ಅವರ ದಾಹ ಮಾತ್ರ ಕಮ್ಮಿ ಆಗುತ್ತಿರಲಿಲ್ಲ. ಬಹಳಷ್ಟು ನೀರು ಕುಡಿದ ಕಾರಣ ಹೊಟ್ಟೆಗೆ ಸಂಬಂಧಿಸಿದ ರೋಗ ಬಂದು ಬಹಳ ಹೀನಾಯವಾಗಿ ಸಾವನ್ನಪ್ಪಿದರು. ಆತನ ಸಾವಿನ ಬಗ್ಗೆ ಇನ್ನೂ ಇತರ ಅಭಿಪ್ರಾಯಗಳು ನಮಗೆ ಕಾಣಬಹುದು. 

   3. ಅಸ್'ವದ್ ಬಿನ್ ಅಲ್ ಮುತ್ವಲಿಬ್ : ಪ್ರವಾದಿಯವರನ್ನೂ ﷺ, ಅವರ ಅನುಯಾಯಿಗಳನ್ನು, ಓ ಅತೀ ದೊಡ್ಡ ರಾಜ್ಯದ ರಾಜರೇ, ಕಿಸ್'ರಾ ಕೈಸರನ್ನು ವಶಪಡಿಸಿಕೊಳ್ಳುವವರೇ.! ಎಂದೆಲ್ಲಾ ಹೀಗೆ, ಬಹಳಷ್ಟು ತಮಾಷೆ ಮಾಡುತಿದ್ದರು. ಪ್ರವಾದಿಯವರನ್ನು ﷺ ನಿಂದಿಸುವ ಮಾತುಗಳನ್ನೂ ಕೂಡ ಆಡುತಿದ್ದರು. ಕೊನೆಗೆ ಆತನೂ ಕೂಡ ದೊಡ್ಡ ಬೆಲೆಯನ್ನೇ ತೆರೆಯಬೇಕಾಗಿ ಬಂದಿತು. ಒಂದು ದಿನ ಶಾಮಿನಿಂದ ಬರುತ್ತಿದ್ದ ಅವರ ಮಗನನ್ನು ಸ್ವಾಗತಿಸಲು ಹೋದಾಗ, ಅವರು ಮಗನಿಂದ ಮುಖಕ್ಕೆ ಹೊಡಿಸಿಕೊಂಡು ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಕುರುಡರಾದರು. ಆತನ ಮಕ್ಕಳಾದ ಸಂಅ ಹಾಗೂ ಅಖೀಲ್ ಬದರ್ ಯುದ್ಧದಲ್ಲಿ ಅಬೂದುಜಾನ ◌ؓ ಹಾಗೂ ಅಲಿಯವರ ◌ؓ ಕೈಯಿಂದ ಕೊಲ್ಲಲ್ಪಟ್ಟರು. 

    (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: