ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
4. ಆಸ್ವ್ ಬಿನ್ ವಾಯಿಲ್: ಪ್ರವಾದಿಯವರನ್ನು ﷺ ಹಾಗೂ ಅವರ ಅನುಯಾಯಿಗಳನ್ನು ಅಪಹಾಸ್ಯ ಮಾಡುವುದರಲ್ಲಿ ಯಾವಾಗಲೂ ಮುಂದೆ ಇರುತ್ತಿದ್ದ ವ್ಯಕ್ತಿ ಆಗಿದ್ದರು ಇವರು. ಖಬ್ಬಾಬ್ ಬಿನ್ ಅಲ್ ಅರತ್ತ್'ರವರು ಹೇಳುವ ಮಾತನ್ನು ಹದೀಸ್'ನಲ್ಲಿ ಕಾಣಬಹುದು. ಅಂಧಕರಾದ ಕಾಲದಲ್ಲಿ ನಾನು ಶಸ್ತ್ರಾಸ್ತ್ರಗಳ ಕೆಲಸ ಮಾಡುತ್ತಿದ್ದೆ. ಆಸ್ವ್ ಬಿನ್ ವಾಯಿಲ್'ಗಾಗಿ ನಾನೊಂದು ಖಡ್ಗ ನಿರ್ಮಿಸಿ ಕೊಟ್ಟಿದ್ದೆ, ಹಾಗಾಗಿ ಅದರ ಬೆಲೆಯನ್ನು ಪಡೆಯಲು ಅವರ ಬಳಿ ಹೋಗಿದ್ದಾಗ, ಅವರು ನೀನು ಮುಹಮ್ಮದ್'ರನ್ನು ﷺ ವಿರೋಧಿಸುವ ವರೆಗೂ ನಾನು ನಿನಗೆ ನೀಡಬೇಕಾದ ಹಣವನ್ನು ನೀಡುವುದಿಲ್ಲ ಎಂದು ಹೇಳಿದರು. ಅದಕ್ಕೆ ನಾನು, ನೀವು ಮರಣ ಹೊಂದಿ, ಪುನರ್ಜೀವ ಪಡೆದು ಬರುವರುವ ವರೆಗೂ ಮುಹಮ್ಮದ್'ರನ್ನು ﷺ ವಿರೋಧಿಸಲಾರೆನು ಎಂದು ಹೇಳಿದೆನು. ಅದಕ್ಕೆ ಅವರು ಆಶ್ಚರ್ಯದಿಂದ, ನಾನು ಮರಣ ಹೊಂದಿದ ನಂತರ ನಿಯೋಗಿಸಲ್ಪಡುವುದ.? ಎಂದು ಕೇಳಿದಾಗ, ನಾನು ಹೌದು ಎಂದು ಹೇಳಿದೆನು. ಅದಕ್ಕೆ ಅವರು ಹಾಗಾದರೆ ಸರಿ, ನಾನು ಕೂಡ ಅವತ್ತೇ ನಿನಗೆ ಕೊಡಬೇಕಾದ ಬಾಕಿ ಹಣವನ್ನು ಕೊಡುತ್ತೇನೆ. ನೀನೂ ನಿನ್ನ ನಾಯಕರೂ ಅಲ್ಲಾಹನ ಬಳಿ ನನಗಿಂತ ಪ್ರಭಾವ ಇರುವವರು ಅಲ್ಲವೇ.? ಎಂದು ಹೇಳಿದರು. ಈ ಘಟನೆಯ ಭಾಗವಾಗಿ ಪವಿತ್ರ ಖುರ್'ಆನಿನ ಮರ್'ಯಂ ಅಧ್ಯಾಯದ ಎಪ್ಪತ್ತೇಳರಿಂದ ಎಂಭತ್ತರವರೆಗಿನ ಸೂಕ್ತಗಳಲ್ಲಿ ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ. "ನಮ್ಮ ಸೂಕ್ತಗಳನ್ನು ವಿರೋಧಿಸಿ, ನನಗೆ ಈಗಲೂ ಸಂಪತ್ತು ಹಾಗೂ ಸಂತಾನ ಭಾಗ್ಯ ಸಿಗುತ್ತಲೇ ಇದೆ ಎಂದು ಅಹಂಕಾರದ ಮಾತುಗಳನ್ನು ಆಡುವ ವ್ಯಕ್ತಿಯನ್ನು ನೀವು ನೋಡಿರಬಹುದು. ಅವನೇನಾದರೂ, ನಮ್ಮಿಂದ ಒಪ್ಪಂದ ಮಾಡಿಕೊಂಡಿದ್ದಾನ.? ಅಥವಾ ಅವನಿಗೆ ಏನಾದರೂ ರಹಸ್ಯ ತಿಳಿಯುತ್ತದೋ.? ಇಲ್ಲ ಖಂಡಿತ ಇಲ್ಲ, ಅವನು ಹೇಳಿದ ಎಲ್ಲಾ ಮಾತುಗಳನ್ನು ನಾವು ಬರೆದಿಟ್ಟಿದ್ದೇವೆ, ಅವನ ಶಿಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸುತ್ತೇವೆ" ಎಂದು.
ಇವರ ಅಂತ್ಯದ ಬಗ್ಗೆ ಚರಿತ್ರೆ ಗ್ರಂಥಗಳಲ್ಲಿ ಬರೆದಿರುವ ಉಲ್ಲೇಖಗಳು ಈ ರೀತಿಯಾಗಿದೆ. ಕತ್ತೆಯ ಮೇಲೆ ಕುಳಿತು ತ್ವಾಹಿಫ್'ಗೆ ಹೋಗುತ್ತಿದ್ದ ಸಂದರ್ಭದಲ್ಲಿ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಅವರಿಗೆ ತುಂಬಾ ಗಾಯಗಳಾದವು. ಗಾಯಗಳು ಗಂಭೀರವಾಗಿದ್ದ ಕಾರಣ ಅಂರ್ ವೈದ್ಯರನ್ನು ಹುಡುಕುತ್ತಾ ಹೋದರು. ಆದರೆ ಅಷ್ಟೊತ್ತಿಗಾಗಲೇ ಆಸ್ವ್ ಬಿನ್ ವಾಯಿಲ್'ನ ಪ್ರಾಣ ಪಕ್ಷಿಯು ಹಾರಿ ಹೋಗಿತ್ತು.
5. ಅಬೂಲಹಬ್: ಪ್ರವಾದಿಯವರನ್ನು ﷺ ಬಹಳಷ್ಟು ನಿಂದಿಸಿ, ಅಪಹಾಸ್ಯ ಮಾಡುತಿದ್ದ ವ್ಯಕ್ತಿಯಾಗಿದ್ದರು ಅಬೂಲಹಬ್. ಪ್ರವಾದಿಯವರ ﷺ ಬಾಗಿಲ ಬಳಿ ಮಾಲಿನ್ಯಗಳನ್ನು ಹಾಕುವುದರಿಂದ, ಪ್ರವಾದಿಯವರು ﷺ ಹಿಂದೆಯೇ ಹೋಗಿ ಅವರನ್ನು ನಿಂದಿಸುವಷ್ಟರ ಮಟ್ಟಿಗೆ ತೊಂದರೆ ನೀಡಿದ್ದರು. ಅವರು ಮಾಡುತಿದ್ದ ದುಷ್'ಕೃತ್ಯಗಳ ಬಗ್ಗೆ ಈಗಾಗಲೇ ನಾವು ತಿಳಿದುಕೊಂಡಿದ್ದೇವೆ. ಅಷ್ಟೇ ಅಲ್ಲ ಅವರ ದಾರುಣ ಅಂತ್ಯದ ಬಗ್ಗೆಯೂ ಕೂಡ ಖುರ್'ಆನ್ ಸ್ಪಷ್ಟವಾಗಿ ತಿಳಿಸಿದೆ.
ಈಗಾಗಲೇ ತಿಳಿಸಿದ ಜನರು ಮಾತ್ರವಲ್ಲದೆ, ವಲೀದ್ ಬಿನ್ ಅಲ್ ಮುಗೀರ, ಹಕಮ್ ಬಿನ್ ಅಬುಲ್ ಆಸ್ವ್, ಮಾಲಿಕ್ ಬಿನ್ ತ್ವಲಾತ್ವಿಲಃ, ಮುಂತಾದ ವ್ಯಕ್ತಿಗಳ ಬಗ್ಗೆಯೂ ಕೂಡ, ಚರಿತ್ರೆ ಗ್ರಂಥಗಳಲ್ಲಿ ತಿಳಿಸಿದ್ದು ಕಾಣಬಹುದು.
ಇದೆಲ್ಲವೂ ಅಂಧಕರಾದಲ್ಲಿ ಇದ್ದುಕೊಂಡು, ದುಷ್'ಕೃತ್ಯಗಳನ್ನು ಮಾಡುತಿದ್ದ ವ್ಯಕ್ತಿಗಳಿಗೆ ಅವರ ಕರ್ಮದ ಫಲವಾಗಿ ಸಿಕ್ಕಿದ ಶಿಕ್ಷೆಯಾಗಿತ್ತು. ಅಲ್ಲದೆ ಪ್ರವಾದಿಯವರು ﷺ ಯಾರಿಗೂ ಕೇಡು ಬಯಸುದಾಗಲಿ, ದುಷ್ಕರ್ಮಿಗಳ ವಿರುದ್ಧವಾಗಿ ಪ್ರಾರ್ಥನೆ ನಡೆಸುವುದಾಗಲಿ ಮಾಡಿರಲಿಲ್ಲ. ಆದರೆ ಜಗದೊಡೆಯನ ಇಚ್ಛೆಯಂತೆ ಒಳಿತು ಮಾಡಿದವರಿಗೆ ಪ್ರತಿಫಲ, ಕೆಡುಕು ಮಾಡಿದವರಿಗೆ ಶಿಕ್ಷೆ ಇರುವ ಕಾರಣದಿಂದಲೇ ಆಗಿರಬಹುದು. ಬಹುಶಃ ಅದೆಷ್ಟೋ ಜನರು ಕೆಡುಕುಗಳಿಂದ ದೂರ ಸರಿದು ನಿಂತಿರುವುದು. ನಗರ ವ್ಯವಸ್ಥೆಗಳು ಮತ್ತು ಸಂಚಾರ ಕಾನೂನುಗಳು, ಸಾಮಾನ್ಯವಾಗಿ ನಿಯಮಗಳಿಂದ ರಕ್ಷಿಸಲ್ಪಡುವುದು, ಉಲ್ಲಂಘನೆಗಾಗಿ ಪಾವತಿಸಬೇಕಾದ ದಂಡವನ್ನು ಅಥವಾ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರಬಹುದು ಎನ್ನುವ ಭಯದಿಂದಲೇ ಆಗಿರುತ್ತದೆ. ನಮ್ಮ ಊರಿನಲ್ಲಿ ಕೆಲವೊಂದು ತಪ್ಪುಗಳು ವ್ಯಾಪಕವಾಗಿ ನಡೆಯಲು ಕಾರಣ, ಅಪರಾಧಿಗಳ ಮಾಡಿದ ತಪ್ಪಿಗೆ ಅರ್ಹವಾದ ಶಿಕ್ಷೆ ಲಭಿಸದೆ ಇರುವ ಕಾರಣದಿಂದಲೇ ಆಗಿರುತ್ತದೆ.
ಏನೇ ಇರಲಿ, ಒಳಿತಿನ ಬೋಧಕರಾದ ಪ್ರವಾದಿಯವರ ﷺ ನಿಂದಕರಿಗೆ ಲಭಿಸಿದ ಶಿಕ್ಷೆಗಳು, ಭವಿಷ್ಯದಲ್ಲಿ ಯಾರೂ ಕೂಡ ಇಂಥಹ ಒಂದು ಸಾಹಸಕ್ಕೆ ಹೋಗಬಾರದು ಎನ್ನುವ ಎಚ್ಚರಿಕೆ ನೀಡುವ ಉದ್ದೇಶದಿಂದಲೂ ಆಗಿದೆ.
ವಿರೋಧಗಳ ನಡುವೆಯೂ, ಆದರ್ಶದ ಸಂರಕ್ಷಣೆಗಾಗಿ, ಸಹಿಷ್ಣುತೆಯೊಂದಿಗೆ ಜೀವನ ಸಾಗಿಸಿದ ಪ್ರವಾದಿಯವರ ﷺ ಮುಂದಿನ ಜೀವನ ಶೈಲಿಯನ್ನು ತಿಳಿಯೋಣ.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
No comments:
Post a Comment