ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಸಂಧಿಗ್ದ ಪರಿಸ್ಥಿತಿಯಲ್ಲಿ ಖುರ್'ಆನ್ ಪ್ರವಾದಿಯವರಿಗೆ ﷺ ನೆರವಾಗಿ ಕೆಲವೊಂದು ಸೂಕ್ತಗಳು ಕೂಡ ಅವತರಿಸಿತು. ಕೆಲವು ಸಂದರ್ಭದಲ್ಲಿ ಮುಅ್'ಜಿಝತ್'ಗಳು ಕೂಡ ಉಂಟಾಯಿತು. ಈ ಸಂದರ್ಭದಲ್ಲಾಗಿತ್ತು ಚಂದ್ರನ ಇಬ್ಬಾಗದ ವಿಸ್ಮಯಕಾರಿ ಘಟನೆ ನಡೆದದ್ದು. ಪವಿತ್ರ ಖುರ್'ಆನಿನ 'ಅಲ್ ಮಖರ್' ಅಧ್ಯಾಯದ ಮೊದಲ ಎರಡು ಸೂಕ್ತದಲ್ಲಿ ಕಾಣಬಹುದು. 'ಲೋಕವಸಾನ ಸಮೀಪವಾಯಿತು, ಚಂದ್ರನ ಇಬ್ಬಾಗವಾಯಿತು' ಎಂದು. ಈ ಘಟನೆಯ ವಿವರಣೆಯ ಭಾಗವಾಗಿ, ಬಹಳಷ್ಟು ಹದೀಸ್'ಗಳನ್ನು ಉಲ್ಲೇಖಿಸಲಾಗಿದೆ. ವಿಜ್ಞಾನ ಶಾಸ್ತ್ರದ ಪ್ರಕಾರ ನಿಷೇಧಿಸಲಾಗದ ರೀತಿಯಲ್ಲಿ (ತವಾತುರ್) ಬಹಳಷ್ಟು ಜನರು ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. ಇಮಾಮ್ ಅಹ್ಮದ್'ರವರು ◌ؓ ಉಲ್ಲೇಖಿಸಿದ ಹದೀಸ್'ನಲ್ಲಿ ಅನಸ್'ರವರು ◌ؓ ಹೇಳುವುದು ಕಾಣಬಹುದು. ಮಕ್ಕಾ ನಿವಾಸಿಗಳು ಪ್ರವಾದಿಯವರಲ್ಲಿ ﷺ ಒಂದು ವಿಸ್ಮಯವನ್ನು ತೋರಿಸಬೆಕೆಂದು ಆಗ್ರಹ ವ್ಯಕ್ತಪಡಿಸಿದಾಗ, ಪ್ರವಾದಿಯವರು ﷺ ಚಂದ್ರನನ್ನು ಇಬ್ಬಾಗ ಮಾಡಿ ತೋರಿಸಿದರು. ಎರಡು ಬಾರಿಯಾಗಿತ್ತು ಈ ಘಟನೆ ನಡೆದದ್ದು ಎಂದು. ಇಮಾಮ್ ಬುಖಾರಿಯವರು ಉಲ್ಲೇಖಿಸಿದ ಹದೀಸ್'ನ ಪ್ರಕಾರ, ಮಕ್ಕಾ ನಿವಾಸಿಗಳು ಪ್ರವಾದಿಯವರಲ್ಲಿ ﷺ ಒಂದು ವಿಸ್ಮಯವನ್ನು ತೋರಿಸಬೇಕೆಂದು ಕೇಳಿಕೊಂಡಾಗ, ಪ್ರವಾದಿಯವರು ﷺ ಚಂದ್ರನನ್ನು ಇಬ್ಬಾಗ ಮಾಡಿ ತೋರಿಸಿದರು. ಇಬ್ಬಾಗವಾದ ಚಂದ್ರನ ನಡುವೆ ಅವರಿಗೆ ಹಿರಾ ಪರ್ವತ ಕಾಣುತಿತ್ತು ಎಂದು.
ಈ ಘಟನೆಯಿಂದ ಸತ್ಯವಿಶ್ವಾಸಿಗಳ ಉತ್ಸಾಹ ಇಮ್ಮಡಿಯಾಯಿತು. ಆದರೆ ವಿರೋಧಿಗಳು ಮಾತ್ರ ಇನ್ನೊಂದು ಅಪವಾದ ಹೊರಿಸಲು ಮುಂದಾದರು. ಇದು ಮುಹಮ್ಮದ್'ರ ﷺ ಪವಾಡ ಅಲ್ಲ ಇದು ವಾಮಾಚಾರ ಮಾತ್ರ ಎಂದು ಹೇಳಿದಾಗ, ಅವರಲ್ಲೇ ಕೆಲವರು, ಎಲ್ಲಾ ಜನರಿಗೂ ಒಂದೇ ಸಲ ಮಾಯವಿದ್ಯೆಯನ್ನು ತೋರಿಸಿ ವಂಚಿಸಲು ಸಾಧ್ಯವಿದೆಯ.? ಎಂದು ಕೇಳಿದರು.
ಈ ಘಟನೆಯ ಕುರಿತಾಗಿ ಬಹಳಷ್ಟು ಉಲ್ಲೇಖದಲ್ಲಿ ನೈಜವಾದ ರೀತಿಯಲ್ಲಿ ಸವಿಸ್ತಾರವಾಗಿ ತಿಳಿಯಲು ಸಾಧ್ಯವಿದೆ. ಚಂದ್ರನನ್ನು ಎರಡು ಭಾಗ ಮಾಡಿ, ಎರಡು ಪರ್ವತದ ಮೇಲೆ ಕೈ ಬೆರಳು ತೋರಿಸಿ, ಖುರೈಷಿಗಳಲ್ಲಿ ನೀವು ಅವುಗಳನ್ನು ಕಾಣುತಿಲ್ಲವೇ.? ಎಂದು ಕೇಳಿದರು. ಆಗ ಅಲ್ಲಿದ್ದ ಎಲ್ಲರಿಗೂ ಅರ್ಥವಾಗಿತ್ತು ಇದು ನೈಜವಾದ ವಾಸ್ತವ ಘಟನೆಯೇ ಆಗಿದೆ ಎಂದು.
ಪ್ರವಾದಿಗಳು ತೋರಿಸುವ ವಿಸ್ಮಯಕಾರಿ ಘಟನೆಗಳನ್ನು ಮುಅ್'ಜಿಝತ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ನಡೆಯಲ್ಪಡುವ ಘಟನೆಗಳಿಗಿಂತ ವಿಭಿನ್ನವಾಗಿ ನಡೆಯುವ ವಿಸ್ಮಯಕಾರಿ ಘಟನೆಗಳಾಗಿವೆ ಅವುಗಳು, ಹಾಗಾಗಿ ಅವುಗಳನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಬೇಕು ಎನ್ನುವ ವಾದವೇ ಅಪ್ರಸ್ತುತ. ಶಾಸ್ತ್ರಗಳ ಆಧಾರದ ಮೇಲೆ ವಿಷಯಗಳನ್ನು ತೀರ್ಮಾನಿಸುದಾದರೂ, ದೈವಿಕತೆ, ಪ್ರವಾದಿತ್ವ, ದಿವ್ಯ ಸಂದೇಶ ಮುಂತಾದ ವಿಷಯಗಳನ್ನು ಗ್ರಹಿಸುವ ಆಧಾರದ ಮೇಲೆಯೇ ಆಗಿದೆ ಮುಅ್'ಜಿಝತ್'ಗಳನ್ನೂ ಅರ್ಥ ಮಾಡಿಕೊಳ್ಳುವುದು.
ಅದರರ್ಥ ಇದೆಲ್ಲವೂ ಕೇವಲ ಸಂಕಲ್ಪವಾಗಿದೆ ಎಂದು ಅಲ್ಲ. ಬದಲಾಗಿ, ಕೆಲವೊಮ್ಮೆ ವಾಸ್ತವವಾಗಿ ನಡೆಯುವ ಕೆಲವೊಂದು ಘಟನೆಗಳಲ್ಲಿ, ನಮ್ಮ ಬುದ್ದಿಗೆಯಾಗಲಿ, ಕಲಿಕೆಗಾಗಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕೆಂದಿಲ್ಲ ಎಂದು ಮಾತ್ರ.
ಉದಾಹರಣೆಗೆ ಈ ಲೋಕವನ್ನು ನಿಯಂತ್ರಣ ಮಾಡುವ ರಕ್ಷಕನಿದ್ದಾನೆ (ಇರಬೇಕು) ಎಂಬುದನ್ನು, ಈ ಪ್ರಪಂಚದ ಪ್ರತಿಯೊಂದು ಚಲನವಲನಗಳನ್ನು ಗಮನಿಸುವ ಯಾವುದೇ ವ್ಯಕ್ತಿಗಳಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಯಾಕಾಗಿ ನನಗೆ ಆ ಜಗತ್ ರಕ್ಷಕನನ್ನು ಕಾಣಲು ಸಾಧ್ಯವಿಲ್ಲ, ಎಂದು ಹೇಳುತ್ತಾ, ಎಲ್ಲವೂ ನನ್ನ ಕಣ್ಣುಗಳಿಗೆ ಕಂಡು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳುವುದಾದರೆ, ಇಲ್ಲಿ ಸಮಸ್ಯೆ ಇರುವುದು ದೈವಿಕತೆಯಲ್ಲಿ ಅಲ್ಲ, ಬದಲಾಗಿ ನನ್ನ ಬುದ್ದಿಗೂ, ಕಣ್ಣಿಗೂ ಕಂಡು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳುವ ವ್ಯಕ್ತಿಯಲ್ಲಾಗಿದೆ.
ಇನ್ನೂ ಚರಿತ್ರೆಯ ಕಡೆಗೆ ಬಂದರೆ, ಮಕ್ಕಾ ನಿವಾಸಿಗಳು ಪ್ರವಾದಿಯವರಲ್ಲಿ ﷺ ಸಾಕ್ಷಿಯನ್ನು ಕೇಳಿದಾಗ, ಪ್ರವಾದಿಯವರು ﷺ ಚಂದ್ರನನ್ನು ನೋಡಲು ಹೇಳಿದರು. ಎಲ್ಲರೂ ಚಂದ್ರನನ್ನು ನೋಡಿದಾಗ, ಅದೋ ಅಲ್ಲಿ ಚಂದ್ರನು ಎರಡು ಇಬ್ಬಾಗವಾಗಿ, ಎರಡು ಕಡೆಗಳಲ್ಲಿ ನಿಂತಿರುವನು. ಇದನ್ನು ಕಂಡು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಅವತ್ತಿನ ಜನರು, ಇದನ್ನು ಮಾಯ ವಿದ್ಯೆ ಎಂದು ಹೇಳಿದರು. ಆದರೆ ಇವತ್ತಿಗೂ ಒಬ್ಬನೇ ಒಬ್ಬ ವಾಮಾಚಾರಿಯಾಗಲಿ, ಮಾಯ ವಿದ್ಯೆ ಮಾಡುವವನಾಗಲಿ, ಅದೇ ರೀತಿ ಮಾಡುವುದಾಗಲಿ, ಅಥವಾ ಅದೊಂದು ಮಾಯ ವಿದ್ಯೆ ಎಂದು ಅಪವಾದ ಹೊರಿಸುವುದಾಗಲಿ ಮಾಡಲಿಲ್ಲ. ಆದರೆ ಈ ಘಟನೆಯನ್ನು ಯಾರಿಗೂ ವಿರೋಧಿಸಲಾಗದ ರೀತಿಯಲ್ಲಿ ಬಹಳಷ್ಟು ಗ್ರಂಥಗಳಲ್ಲಿ ಉಲ್ಲೇಖಿಸಿಲಾಗಿದೆ. ಇನ್ನೂ ಕೂಡ ಅದನ್ನು ಸಾಬಿತುಪಡಿಸಲು ಇದಕ್ಕಿಂತ ಬೇರೆ ಏನು ಬೇಕು.?
ಚಂದ್ರನು ಇಬ್ಬಾಗವಾಯಿತು ಎಂಬುವುದು ಸರಿ, ಆದರೆ ಅದನ್ನು ಯಾರಿಗೂ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹೇಗೆ ಮಾಡಲು ಸಾಧ್ಯವಾಯಿತು ಎಂಬುದರಲ್ಲಾಗಿದೆ ಪ್ರವಾದಿಯವರ ﷺ ಮಹತ್ವವು ಎದ್ದು ಕಾಣುವುದು. ಆ ಸಂದರ್ಭದಲ್ಲಾಗಿದೆ ಅದೊಂದು ಮುಅ್'ಜಿಝತ್ತಾಗಿ ಬದಲಾಗುವುದು ಕೂಡ.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
No comments:
Post a Comment