Abu Hisham Saquafi

Official Website Of Hafiz Ilyas Saquafi Padaladka

Tuesday, July 12, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -27 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಇನ್ನು ನಾವು ಪ್ರವಾದಿಯವರ ﷺ ಬಳಿ ವಾಪಸು ಬರೋಣ. ಇಡೀ ಪ್ರಪಂಚದಲ್ಲಿ ವಿಶ್ವ ಸುಂದರಿಯನ್ನೇ ಲಭಿಸುವ ಅವಕಾಶವಿದ್ದರೂ ಯಾಕಾಗಿ ಖದೀಜರನ್ನು (ರ) ಆರಿಸಿಕೊಂಡರು. ಅಲ್ಲಾಹುವಿನ ವಿಶೇಷವಾದ ಆಯ್ಕೆ ಏನಾಗಿತ್ತು ಎನ್ನುವುದಕ್ಕೆ ಉತ್ತರ. ಪ್ರವಾದಿಯವರ ﷺ ಬಾಲ್ಯ ಹಾಗೂ ಹದಿಹರೆಯದ ಜೀವನವೆಲ್ಲವೂ ವಿಶೇಷವಾದ ಆಧ್ಯಾತ್ಮಿಕ ಶಿಕ್ಷಣದ ಮೂಲಕವಾಗಿತ್ತಲ್ಲವೇ ಕಳೆದು ಬಂದದ್ದು. ಅದರ ಮುಂದುವರಿದ ಭಾಗವಾಗಿತ್ತದು. ಖದೀಜರೊಂದಿಗಿನ (ರ) ವಿವಾಹ, ನಂತರದ ಜೀವನದಲ್ಲಿ ಅವರು ನೀಡಿದ ಬೆಂಬಲಗಳೆಲ್ಲವೂ, ಈ ವಿಷಯವನ್ನು ಸ್ಪಷ್ಟವಾಗಿ ಮನಿವರಿಕೆಯಾಗಿಸುತ್ತದೆ. 

   ಅಂತ್ಯದಿನದವರೆಗೆ ವಿವಾಹದ ಕುರಿತು ಬರುವ ಎಲ್ಲಾ ಆರೋಪಗಳಿಗೂ, ಉತ್ತರವಾಗಿಯಾಗಿತ್ತು ಈ ವಿವಾಹ ನಿಶ್ಚಯಿಸಿದ್ದು. ಇಪ್ಪತೈದು ವಯಸ್ಸಿನ ಪ್ರವಾದಿಯವರು ﷺ ನಲ್ವತ್ತು ವಯಸ್ಸಿನ ಖದೀಜರನ್ನು (ರ) ವರಿಸಿ, ಇಪ್ಪತ್ತೈದು ವರ್ಷಗಳ ಕಾಲ ಖದೀಜರ (ರ) ಮರಣದವರೆಗೂ ಸಂಪೂರ್ಣ ಸಂತೃಪ್ತಿಯೊಂದಿಗೆ ಜೀವಿಸಿದ್ದರು. ಬಹುಪತ್ನಿತ್ವ ಅಧಿಕವಾಗಿದ್ದ ಅರಬ್ ಜನತೆಯ ನಡುವೆ ಜೀವಿಸಿದ್ದರೂ ಕೂಡ, ಇನ್ನೊಂದು ವಿವಾಹದ ಕುರಿತು ಆಲೋಚಿಸಿಯೂ ಇರಲಿಲ್ಲ. ಒಬ್ಬ ಪುರುಷನು ತನ್ನ ಇಪ್ಪತೈದರಿಂದ ಐವತ್ತು ವರ್ಷಗಳ ವರೆಗಿನ ಪ್ರಾಯವನ್ನು, ನಲ್ವತ್ತರಿಂದ ಅರುವತ್ತೈದು ವರ್ಷದವರೆಗಿನ ಪತ್ನಿಯ ಜೊತೆಯಲ್ಲಿ, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಜೀವಿಸಿದ ವ್ಯಕ್ತಿಯ ಮೇಲೆ. ಅತಿಯಾದ ಸ್ತ್ರೀ ಆಸಕ್ತಿಯನ್ನು ಆರೋಪಿಸುವವರು, ಯಾವ ಲೋಕದಲ್ಲಾಗಿದೆ ಜೀವಿಸುತ್ತಿರುವುದು. 

    ಇಲ್ಲಿ ಓರಿಯಂಟಲಿಸ್ಟ್'ಗಳು ಹೇಳುವ ಆರೋಪ ವಿಚಿತ್ರವಾಗಿದೆ. ಖದೀಜರಿಗಿದ್ದ (ರ) ಸಂಪತ್ತನ್ನು ಬಯಸಿಯಾಗಿತ್ತು ಪ್ರವಾದಿಯವರು ﷺ ವಿವಾಹವಾಗಿದ್ದೆಂದು. ಈ ಆರೋಪಕ್ಕೆ ಇತಿಹಾಸದಲ್ಲಿ ಯಾವುದೇ ಅಸ್ತಿತ್ವವಿಲ್ಲ. ಯಾಕೆಂದರೆ ಪ್ರವಾದಿಯವರ ﷺ ಜೀವನದಲ್ಲಿ ಒಮ್ಮೆಯೂ ಕೂಡ, ಹಣಕ್ಕಾಗಿ ಆಸೆಪಡುವ ಯಾವುದೇ ಘಟನೆಯನ್ನು ಉಲ್ಲೇಖಿಸಲು ಸಾಧ್ಯವಿಲ್ಲ. ಖದೀಜರ (ರ) ಸಂಪತ್ತು ಕೂಡ ಪ್ರಬೋಧನೆಯ ದಾರಿಯಲ್ಲೇ ಖರ್ಚಾಗಿತ್ತು. ಆದರೆ ಪ್ರವಾದಿಯವರು ﷺ ಯಾವತ್ತೂ ಐಷಾರಾಮಿ ಜೀವನ ಕಳೆಯಲೋ, ಖದೀಜರ ವ್ಯಾಪಾರ ಸಾಮ್ರಾಜ್ಯವನ್ನು ಸ್ವಾಧೀನ ಪಡಿಸಿಕೊಳ್ಳಲೋ ಪ್ರಯತ್ನಿಸಿರಲಿಲ್ಲ. ಅರಮನೆಯನ್ನು, ಸಿಂಹಾಸನವನ್ನು ಬಯಸುತ್ತಿದ್ದ ಕಾಲದಲ್ಲಿ ಗುಡಿಸಲನ್ನು, ಸರಳತೆಯ ಜೀವನವನ್ನಾಗಿತ್ತು ಬಯಸಿದ್ದು. ಸಿಕ್ಕಿದ್ದೆಲ್ಲವನ್ನೂ ಕಷ್ಟದಲ್ಲಿರುವವರಿಗೆ ಕೊಟ್ಟು ಉದಾರತೆಯ ಜೀವನವನ್ನು ಪ್ರೋತ್ಸಾಹಿಸಿದ್ದರು. ಯುವಕನಾಗಿದ್ದಾಗ ಅವರು ಸ್ವತಃ ಆಯ್ಕೆಮಾಡಿದ್ದು ಸರಳವಾದ ಪಶುಪಾಲನೆ ಉದ್ಯೋಗವನ್ನಾಗಿತ್ತು. ನಂತರ ದೊಡ್ಡಪ್ಪ ಹೇಳಿದ ಕಾರಣಕ್ಕಾಗಿತ್ತು ವ್ಯಾಪಾರಕ್ಕೆ ಇಳಿದದ್ದು ಕೂಡ. ಅದರ ಮೂಲಕ ಲಭಿಸಿದ ಎಲ್ಲಾ ಸಂಪತ್ತನ್ನು ದೊಡ್ಡಪ್ಪನ ಕುಟುಂಬಕ್ಕೆ ನೀಡಿದ್ದರು

    ಖದೀಜರೊಂದಿಗಿನ (ರ) ವಿವಾಹವು ಪ್ರವಾದಿಯವರ ﷺ ಕಡೆಯಿಂದ ಬಂದ ಅನ್ವೇಷಣೆಯಾಗಿರಲಿಲ್ಲ. ಇದನ್ನು ಉಲ್ಲೇಖಿಸಿದ ಯಾವುದೇ ಪುರಾವೆಯೂ ಇಲ್ಲ, ಇದು ಸಂಪೂರ್ಣವಾಗಿ ಖದೀಜರ (ರ) ಭಾಗದಿಂದ ಬಂದ ವಿವಾಹನ್ವೇಷಣೆಯಾಗಿತ್ತಷ್ಟೇ.
      ಸಂಪತ್ತನ್ನು, ಶರೀರವನ್ನು, ಎಲ್ಲಾ ಆಸಕ್ತಿಗಳನ್ನು ಕೇವಲ ಜವಾಬ್ದಾರಿ ನಿರ್ವಹಿಸಲು ಮಾತ್ರ ಉಪಯೋಗಿಸಿದ್ದರು. ಇತಿಹಾಸವನ್ನು ಸರಿಯಾಗಿ ತಿಳಿದರೆ ಅಂತಹ ಒಂದು ತ್ಯಾಗಿಯನ್ನಾಗಿದೆ ಕಾಣಲು ಸಾಧ್ಯವಾಗುವುದು. 

    ಯಾವುದೇ ಕನ್ಯೆಯನ್ನು ಮದುವೆಯಾಗಬಹುದಾಗಿದ್ದ ಕಾಲದಲ್ಲಿ, ತನ್ನ ಜವಾಬ್ದಾರಿಯನ್ನು ಸಂಪೂರ್ಣಗೊಳಿಸುವಲ್ಲಿ ಸಹಕರಿಸುವ ಪ್ರಬುದ್ಧರಾದ ಮಹಿಳೆಯನ್ನಾಗಿತ್ತು ಆಯ್ಕೆಮಾಡಿದ್ದು. ಎರಡು ಬಾರಿ ವಿದೆವೆಯಾಗಿದ್ದ, ಮೂರು ಮಕ್ಕಳ ತಾಯಿಯಾದ ನಲವತ್ತು ವಯ್ಯಸಿನ ಮಹಿಳೆಯನ್ನು ವಿವಾಹವಾದ ಈ ನಿರ್ಧಾರವನ್ನು ಇತಿಹಾಸ ಎಷ್ಟೊಂದು ಭವ್ಯತೆಯಿಂದಾಗಿದೆ ತಿಳಿಯಬೇಕಾದದ್ದು. 
     ಖದೀಜರ (ರ) ಸಂಪತ್ತನ್ನು ಆಸೆಪಟ್ಟರು ಎಂದು ತಾವೇ ಸ್ವತಃ ಬರೆದ ದಾಖಲೆಗಳಲ್ಲಿ ಕೆಲವು ಸಂಗತಿಗಳನ್ನು ಮರೆತಿದ್ದಾರೆ. ಯಾವುದೆಂದರೆ ಬೀವಿಯವರ ಇತರ ಮಹತ್ವಗಳು, ಬುದ್ಧಿವಂತಿಕೆ, ಸೌಂದರ್ಯ, ದಕ್ಷತೆ, ಸ್ವೀಕಾರತೆ, ಹಾಗೂ ಇತರ ಜೀವನದ ಅನುಭವಗಳು ಹೀಗೆ ಅದರ ಪಟ್ಟಿ ಮುಂದುವರಿಯುತ್ತದೆ. 

     ಇನ್ನು ಮದುವೆಯ ದಿನದ ಕಡೆಗೆ. ನಿಶ್ಚಯಿಸಿದ ವಿವಾಹದ ನಿರ್ವಹಣೆಯ ಕುರಿತಿರುವ ಚರ್ಚೆಗಳಾಗಿದೆ. ಪ್ರವಾದಿಯವರ ﷺ ಕಡೆಯಿಂದ ಎಲ್ಲವನ್ನು ಅಬೂತ್ವಾಲಿಬ್ ವ್ಯವಸ್ಥೆ ಮಾಡಿದರು. ವಧುವಿನ ಮನೆಯಲ್ಲಾಗಿದೆ ವಿವಾಹ ನಡೆಯಲಿರುವುದು, ವರ ಹಾಗೂ ಅವರ ಕುಟುಂಬಸ್ಥರು ವಧುವಿನ ಮನೆಗೆ ಬಂದು ಪ್ರತಿಜ್ಞೆ ಸ್ವೀಕರಿಸುವುದು. ಎನ್ನುವುದಾಗಿತ್ತು ತೀರ್ಮಾನ.

(ಮುಂದುವರಿಯುವುದು)

No comments: