ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರವಾದಿಯವರ ﷺ ಚಿಕ್ಕಪರಾದ ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್'ರವರು ಈ ರೀತಿ ಹೇಳುತ್ತಾರೆ. ನಾವು ವ್ಯಾಪಾರಕ್ಕಾಗಿ ಯಮನಿಗೆ ಹೋಗಿದ್ದೆವು. ಖುರೈಷಿಗಳ ನಾಯಕನಾಗಿದ್ದ ಅಬೂ ಸೂಫಿಯಾನ್ ಕೂಡ ಜೊತೆಯಲ್ಲಿದ್ದರು. ಅವರಿಗೆ ಮಕ್ಕಾದಿಂದ ಒಂದು ಪತ್ರ ಬಂದಿತು. ಮಗನು ಹನ್'ಳಲ ಮನೆಯಿಂದ ಕಳಿಸಿದ ಪಾತ್ರವಾಗಿತ್ತದು. ಪತ್ರದಲ್ಲಿ ಬರೆದ ವಿಷಯವು ಈ ರೀತಿಯಾಗಿತ್ತು. ಮಕ್ಕಾದ ಕಣಿವೆಯಲ್ಲಿ ಮುಹಮ್ಮದ್ ﷺ ಪ್ರವಾದಿಯಾಗಿ ಆಗಮಿಸಿದ್ದಾರೆ, ಮುಹಮ್ಮದ್'ರವರು ﷺ ಅಲ್ಲಾಹನ ಸಂದೇಶವಾಹಕರೆಂದು ಹೇಳಿಕೊಳ್ಳುತ್ತಿದ್ದಾರೆ, ಹಾಗೂ ನಮ್ಮೆಲ್ಲರನ್ನೂ ಅವರ ಆದರ್ಶಕ್ಕೆ ಆಹ್ವಾನಿಸುತ್ತಿದ್ದಾರೆ.
ಪತ್ರದ ವಿಷಯವನ್ನು ಅಬೂ ಸುಫಿಯಾನ್ ಇತರರಲ್ಲಿ ಹಂಚಿಕೊಂಡರು. ಹೀಗೆ ಯಮನಿನಲ್ಲಿ ಆ ವಿಷಯವು ಸಂಪೂರ್ಣವಾಗಿ ಹರಡಿತು. ವಿಷಯ ತಿಳಿದ ಯಮನಿನ ಪ್ರತಿಷ್ಠಿತ ಪುರೋಹಿತರೊಬ್ಬರು ನಮ್ಮನ್ನು ಹುಡುಕಿ ಬಂದರು. ಮಕ್ಕಾದಲ್ಲಿ ಆಗಮಿಸಿದ ಪ್ರವಾದಿಯವರ ﷺ ಚಿಕ್ಕಪ್ಪ ನಿಮ್ಮ ಜೊತೆಯಲ್ಲಿ ಇರುವುದಾಗಿ ತಿಳಿಯಿತು ಅದು ಸತ್ಯವೇ.? ಎಂದು ಕೇಳಿದಾಗ, ಹೌದು ನಾನಾಗಿದ್ದೇನೆ ಅವರು ಎಂದು ಹೇಳಿದೆನು. ಸರಿ ಹಾಗಾದರೆ ಕೆಲವೊಂದು ವಿಷಯವನ್ನು ಕೇಳುತ್ತಾನೆ ನೀವು ಸರಿಯಾಗಿ ಉತ್ತರಿಸಬೇಕು ಎಂದು ಹೇಳಿದಾಗ, ನಾನು ಅನುಮತಿ ನೀಡಿದೆನು. ಅವರು ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ನಿಮ್ಮ ಅಣ್ಣನ ಮಗ ಯಾವತ್ತಾದರೂ ಸುಳ್ಳು ಹೇಳಿದ್ದಾರ.? ಇಲ್ಲ ಒಂದೇ ಒಂದು ಬಾರಿಯೂ ಕೂಡ ಸುಳ್ಳು ಹೇಳುವುದಾಗಲಿ, ವಂಚನೆ ಮಾಡುದಾಗಲಿ ಮಾಡಲಿಲ್ಲ. ಮಕ್ಕಾ ನಿವಾಸಿಗಳು ಅವರನ್ನು 'ಅಲ್ ಅಮೀನ್' ಅಥವಾ ನಂಬಿಕಸ್ಥ ಎಂದಾಗಿದೆ ಕರೆಯುವುದು. ಮಗನು ವಿದ್ಯಾರ್ಜನೆ ಮಾಡಿದ್ದಾರ.? ಎಂದು ಮತ್ತೊಂದು ಪ್ರಶ್ನೆ ಕೇಳಿದಾಗ, ಮಾಡಿದ್ದಾರೆ ಎಂದು ಹೇಳೋಣ ಅಂದು ಕೊಂಡೆ ಆದರೆ ಅಬೂ ಸುಫಿಯಾನ್ ಸತ್ಯ ಹೇಳಿದರೆ ಎಂದು ಇಲ್ಲಾ ಅವರಿಗೆ ಓದಲು, ಬರೆಯಲು ಬರುವುದಿಲ್ಲ ಎಂದು ಹೇಳಿದೆನು. ಅದನ್ನು ಕೇಳಿದ ತಕ್ಷಣವೇ ಒಮ್ಮೆಲೇ ಜಿಗಿದು ಎಂದು ನಿಂತು, ತನ್ನ ಮೇಲ್ಮೈ ಉಡುಪುವನ್ನು ತೆಗೆದು, 'ಯುಹೂದಿಗಳ ಕಥೆ ಮುಗಿದ ಹಾಗೆ' ಎನ್ನುತ್ತಾ ನಗತೊಡಗಿದರು.
ನಾವು ಸ್ವವಸತಿಗೆ ಮರಳಿ ಬಂದೆವು. ತಕ್ಷಣವೇ ಅಬೂ ಸುಫಿಯಾನ್ ನಿಮ್ಮ ಅಣ್ಣನ ಮಗನ ವಿಷಯವು ಯಹೂದಿಗಳಿಗೂ ಕೂಡ ಭಯ ಹುಟ್ಟಿಸಿತು ಅಲ್ಲವೇ.? ಎಂದು ಹೇಳಿದರು. ಅದಕ್ಕೆ ಹೌದು ನಾನು ಕೂಡ ಅದನ್ನು ಗಮನಿಸಿದೆನು, ಓ ಅಬೂ ಸುಫಿಯಾನರೇ ತಮಗೂ ಕೂಡ ಆ ಪ್ರವಾದಿತ್ವವನ್ನು ಅಂಗೀಕರಿಸಬಹುದಲ್ವಾ.? ಎಂದು ಕೇಳಿದಾಗ. ಇಲ್ಲ ಆ ಪ್ರವಾದಿಯವರ ﷺ ಸೈನ್ಯವು ಕುದಾಯ್ ಕಣಿವೆಯಿಂದ ಮಕ್ಕಾವನ್ನು ವಶಪಡಿಸಿಕೊಳ್ಳುವವರೆಗೂ ನಾನು ಅಂಗೀಕರಿಸುವುದಿಲ್ಲ ಎಂದು ಹೇಳಿದರು. ನೀವು ಏನು ಹೇಳುತ್ತಿದ್ದೀರ.? ಎಂದು ಕೇಳಿದಾಗ. ಕುದಾಯಿ ಮೂಲಕ ಅಶ್ವದಳ ಬರುತ್ತೋ ಇಲ್ವೋ ನನಗೆ ಗೊತ್ತಿಲ್ಲ ತಕ್ಷಣ ನಾಳಗೆಯಲ್ಲಿ ಬಂದದ್ದನ್ನು ಹೇಳಿ ಬಿಟ್ಟೆ ಎಂದರು.
(ಸುಮಾರು ಎರಡು ದಶಕದ ನಂತರ ಮಕ್ಕಾ ವಿಜಯ ನಡೆಯಿತು. ಕುದಾಯ್ ಕಣಿವೆಯ ಮೂಲಕ ಇಸ್ಲಾಮಿನ ಅಶ್ವದಳ ಮಕ್ಕಾ ನಗರಕ್ಕೆ ಪ್ರವೇಶಿಸಿತು. ಅದನ್ನು ನೋಡಿ ನಿಂತಿದ್ದ ಅಬ್ಬಾಸ್, ಅಬೂ ಸುಫಿಯಾನ್'ರಲ್ಲಿ ನೀವು ಅಂದು ಹೇಳಿದ್ದ ಆ ಸೈನ್ಯವು ಬಂದು ನಿಂತಿದೆ. ನಿಮ್ಮ ಸರದಿ ಹತ್ತಿರವಾಯಿತು ಎಂದು ಹೇಳಿದಾಗ. ಹೌದು ನನಗೆ ಚೆನ್ನಾಗಿ ನೆನಪಿದೆ, ಅಂದು ಹೇಳಿದ ಮಾತುಗಳನ್ನು ನಾನು ಮರೆಯಲಿಲ್ಲ. ನಾನು ಇಸ್ಲಾಮ್ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿ, ಮಕ್ಕಾ ವಿಜಯದ ದಿವಸ ಅವರು ಇಸ್ಲಾಮ್ ಸ್ವೀಕರಿಸಿದರು.)
ಮತ್ತೊಂದು ಘಟನೆಯನ್ನು ಇಬ್'ನು ಅಸಾಕಿರ್'ರವರು ಈ ರೀತಿ ವಿವರಿಸುತ್ತಾರೆ. ಪ್ರವಾದಿ ಮುಹಮ್ಮದರ ﷺ ಪ್ರವಾದಿತ್ವದ ಘೋಷಣೆಯ ಸ್ವಲ್ಪ ದಿನದ ಮುಂಚೆ ನಾವು ಯಮನಿಗೆ ತೆರಳಿದ್ದೆವು. ನಾವು ರಾಜಮನೆತನದಲ್ಲಾಗಿತ್ತು ತಂಗುತ್ತಿದ್ದದ್ದು. ಅಸ್'ಕಲಾನ್ ಅಲ್ ಹಿಂಯರಿ ಎಂಬ ರಾಜಮನೆತನದ ಹಿರಿಯ ವ್ಯಕ್ತಿಯಾಗಿದ್ದರು ನಮ್ಮಗೆ ಅತಿಥಿ ಸತ್ಕಾರ ನೀಡುತ್ತಿದ್ದದ್ದು. ನಾವು ಯಾವಾಗ ಹೋದರೂ ಅವರ ಜೊತೆಯಲ್ಲಿಯೇ ತಂಗುತ್ತಿದ್ದದ್ದೆವು. ಅವರು ಮಕ್ಕಾದ ಸಮಾಚಾರಗಳನ್ನು ಕೇಳಿ ತಿಳಿಯುತ್ತಿದ್ದರು. ಸುದೀರ್ಘವಾದ ಮಾತುಕತೆಯ ನಂತರ ಏನಾದರೂ ವಿಶೇಷ ಸಮಾಚಾರದೊಂದಿಗೆ ಯಾರಾದರೂ ಆಗಮಿಸಿದ್ದಾರ ಎಂದು ಕೇಳುತ್ತಿದ್ದರು. ನಾವು ಇಲ್ಲ ಎಂದು ಉತ್ತರಿಸುತ್ತಿದ್ದೆವು.
ರೂಢಿಯಂತೆ ಈ ಬಾರಿಯೂ ಕೂಡ ನಾವು ಹಿಂಯರಿಯವರ ಬಳಿ ಹೋಗಿದ್ದೆವು. ಅವರಿಗೆ ದೃಷ್ಟಿ ದೋಷ ಹಾಗೂ ಅಲ್ಪ ಕಿವುಡುತನ ಬಾಧಿಸಿತ್ತು. ಮಕ್ಕಳು, ಮೊಮ್ಮಕ್ಕಳೊಂದಿಗೆ ಕುರ್ಚಿಯಲ್ಲಿ ಕುಳಿತಿದ್ದರು. ನಾವು ಅಲ್ಲಿಗೆ ತಲುಪಿದ್ದೇ ತಡ, ಓ ಖುರೈಷಿ ಸಹೋದರ ಹತ್ತಿರ ಬನ್ನಿ, ನಿಮ್ಮ ಹೆಸರು ಹಾಗೂ ಮನೆತನವನ್ನು ಸ್ಪಷ್ಟವಾಗಿ ತಿಳಿಸಿ ಎಂದು ಹೇಳಿದರು. ನಾನು ತಂದೆಯ ಪರಂಪರೆ ಸಮೇತವಾಗಿ ತಿಳಿಸಿದಾಗ, ತಕ್ಷಣವೇ ಸಾಕು ಸಾಕು ನೀವು ಬನೂ ಸಹ್'ರ್ ಜನಾಂಗದ ವ್ಯಕ್ತಿಯಲ್ಲವೇ.? ಹಾಗಾದರೆ ನಿಮಗೊಂದು ವಿಚಾರ ತಿಳಿಸಲಿದೆ, ವ್ಯಾಪಾರಕ್ಕಿಂತಲೂ ಅಧಿಕ ಸಂತೋಷ ತರುವ ವಿಷಯವಾಗಿದೆ ಎಂದು ಹೇಳಿದರು. ಅದೇನು ಅಂತಹ ವಿಷಯ ಎಂದು ಕೇಳಿದಾಗ...
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment