ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಹಿಂಯರಿ ಮಾತು ಮುಂದುವರಿಸಿದರು. ಬಹಳಷ್ಟು ಅಚ್ಚರಿ ಮೂಡಿಸುವ ವಿಷಯವಾಗಿದೆ ಇದು. ಒಂದು ತಿಂಗಳ ಹಿಂದೆ ನಿಮ್ಮ ಊರಿನಲ್ಲಿ ಒಬ್ಬರು ಪವಿತ್ರ ವ್ಯಕ್ತಿಯನ್ನು ಅಲ್ಲಾಹುವಿನ ಸಂದೇಶವಾಹಕರಾಗಿ ನಿಯೋಜಿಸಲಾಗಿದೆ. ಅಲ್ಲಾಹುವಿನ ಪ್ರೀತಿಯ ದಾಸನಾಗಿದ್ದಾರೆ ಅವರು. ಒಂದು ಪವಿತ್ರವಾದ ಗ್ರಂಥವೂ ಕೂಡ ಅವರಿಗೆ ಲಭಿಸಿದೆ. ವಿಗ್ರಹಾರಾಧನೆಯನ್ನು ಅವರು ತಡೆಯಲಿದ್ದಾರೆ, ಸತ್ಯ ಪ್ರಭೋಧನೆ ನೀಡುವರು. ನೀತಿಯನ್ನು ಪಾಲಿಸುವರು, ಕೆಡುಕಿನಿಂದ ದೂರ ಸರಿದು, ಕೆಡುಕಿನ ವಿರುದ್ಧ ಹೋರಾಟ ಕೂಡ ಮಾಡುವರು. ಇಸ್ಲಾಮಿಗೆ ಜನರನ್ನು ಆಹ್ವಾನಿಸುವರು. ಎಂದು ಹಿಂಯರಿ ಹೇಳಿದಾಗ. ಯಾರಾಗಿದ್ದಾರೆ ಅವರು.? ಯಾವ ಮನೆತನೆಯಿಂದ ಬಂದವರಾಗಿದ್ದಾರೆ ಆ ಪ್ರವಾದಿಯವರು.? ಎಂದು ಪುನಃ ಕೇಳಿದೆನು. ಅದಕ್ಕೆ ಹಿಂಯರಿ ಅಸದ್, ಸುಮಾಲ, ಸರ್ವ, ತಬಾಲ ಇದ್ಯಾವ ಜನಾಂಗದಿಂದ ಅಲ್ಲವೇ ಅಲ್ಲ. ಹಾಷಿಂ ಪರಂಪರೆಯಿಂದಾಗಿದೆ ಆ ಪ್ರವಾದಿಯವರು ﷺ ಜನಿಸಿದ್ದು. ಹಾಗಾದರೆ ನೀವು ಅವರ ಚಿಕ್ಕಪರ ಸಾಲಿನಲ್ಲಿ ಸೇರುತ್ತೀರ. ಓ ಅಬ್ದುಲ್ ರಹ್ಮಾನ್ ತಕ್ಷಣವೇ ಊರಿಗೆ ಮರಳಿರಿ. ಒಳ್ಳೆಯ ರೀತಿಯಲ್ಲಿ ಆ ವ್ಯಕ್ತಿಯನ್ನು ಭೇಟಿಯಾಗಿರಿ. ಅವರ ಜೊತೆಯಲ್ಲಿ ಸೇರಿ ಅವರಿಗೆ ಬೇಕಾದ ಸಹಾಯ ನೀಡಿರಿ. ನೀವು ಅವರನ್ನು ಭೇಟಿಯಾದರೆ ನನ್ನ ಒಂದು ಶುಭಾಶಯವನ್ನು ಕೂಡ ಅವರಿಗೆ ತಿಳಿಸಿರಿ ಎಂದು ಹೇಳಿದರು. ನಂತರ ಪ್ರವಾದಿಯವರಿಗೆ ﷺ ವಂದಿಸುವ ಕವಿತೆಯನ್ನು ಹಾಡಿದರು.
ಅಬ್ದುರಹ್ಮಾನ್ ಬಿನ್ ಔಫ್ ಈ ರೀತಿ ವಿವರಿಸುತ್ತಾರೆ, ನಾನು ಆ ಕವಿತೆಯನ್ನು ಮರೆಯದ ಹಾಗೆ ನೆನಪಿನಲ್ಲಿ ಇರಿಸಿಕೊಂಡೆನು. ನನ್ನ ವ್ಯಾಪಾರಗಳನ್ನು ವೇಗವಾಗಿ ಪೂರ್ತಿಕರಿಸಿ ತಕ್ಷಣವೇ ಊರಿಗೆ ಮರಳಿದೆವು. ಊರಿಗೆ ತಲುಪಿದ ಕೂಡಲೇ ಆಪ್ತಮಿತ್ರ ಅಬೂಬಕ್ಕರ್'ರವರನ್ನು (ರ) ಭೇಟಿಯಾಗಿ ಎಲ್ಲಾ ವಿಷಯಗಳನ್ನು ಅವರಲ್ಲಿ ಹಂಚಿಕೊಂಡನು. ಅದಕ್ಕೆ ಅಬೂಬಕ್ಕರ್ (ರ) ಈ ರೀತಿ ಹೇಳಿದರು ನಮ್ಮ ಆತ್ಮೀಯರಾದ ಮುಹಮ್ಮದ್ ﷺ ಬಿನ್ ಅಬ್ದುಲ್ಲಾಹ್ ಆಗಿದ್ದಾರೆ, ಪ್ರವಾದಿತ್ವವನ್ನು ಘೋಷಣೆ ಮಾಡಿದ್ದು. ನಾನು ಖದೀಜರನ್ನು(ರ) ಹುಡುಕಿ ಅವರ ಮನೆಗೆ ತೆರಳಿದೆನು. ಕೆಲವು ಗೆಳೆಯರೊಂದಿಗೆ ಮುಹಮ್ಮದ್ ﷺ ಕುಳಿತಿದ್ದರು. ಮುಹಮ್ಮದ್ ﷺ ನನ್ನನ್ನು ಕಂಡ ತಕ್ಷಣ ಮುಗುಳ್ನಗೆಯೊಂದಿಗೆ ಸ್ವೀಕರಿಸಿ. ಸತ್ಯವನ್ನು ಸ್ವೀಕರಿಸುವ ವ್ಯಕ್ತಿಯನ್ನು ನಿಮ್ಮ ಮುಖದಲ್ಲಿ ಕಾಣುತಿದ್ದೇನೆ, ನಿಮ್ಮ ಬಳಿ ಏನಿದೆ ವಿಶೇಷ ಎಂದು ಕೇಳಿದರು.
ನಾನು ಆಶ್ಚರ್ಯದಿಂದ ನೀವು ಯಾಕೆ ಹೀಗೆ ಕೇಳುತ್ತಿದ್ದೀರಿ ಎಂದು ಪುನಃ ಕೇಳಿದೆನು. ನನಗೆ ತಿಳಿಸಿರುವ ಒಂದು ಒಳ್ಳೆಯ ಸಂದೇಶದ ಜೊತೆಯಲ್ಲಿಯಲ್ಲವೇ.? ನೀವು ನನ್ನ ಬಳಿ ಬಂದದ್ದು ಎಂದು ಅವರು ಹೇಳಿದರು. ಇದನ್ನು ಕೇಳಿದ ತಕ್ಷಣ ನಾನು ಬಹಳ ಆವೇಶದಿಂದ ಎಲ್ಲಾ ವಿಷಯಗಳನ್ನು ತಿಳಿಸಿದೆನು. ಅದಕ್ಕೆ ಅವರು ಅಲ್ ಹಿಂಯರಿ ಒಬ್ಬರು ವಿಶೇಷವಾದ ವ್ಯಕ್ತಿಯಾಗಿರುತ್ತಾರೆ, ನನಗೆ ತಿಳಿಯದೆ ನನ್ನನ್ನು ವಿಶ್ವಾಸವಿರಿಸುವ ಅದೆಷ್ಟೋ ಜನರಿದ್ದಾರೆ. ನನ್ನನ್ನು ಒಮ್ಮೆಯೂ ಕೂಡ ಕಾಣದ ಅದೆಷ್ಟೋ ವ್ಯಕ್ತಿಗಳು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಅವರಾಗಿದ್ದರೆ ನಿಜವಾಗಿಯೂ ನನ್ನ ಸಹೋದರರು ಎಂದು ಹೇಳಿದರು.
ಇಬ್'ನು ಹೌಫ್ ಕೂಡ ಪ್ರವಾದಿಯವರ ﷺ ಅನುಯಾಯಿಯಾದರು. ಬುಸ್'ರ ಪಟ್ಟಣದಲ್ಲಿ ನಡೆದ ಘಟನೆಯನ್ನು ಕೂಡ ನಾವು ತಿಳಿಯೋಣ. ಮಕ್ಕಾದ ಹೆಸರಾಂತ ವ್ಯಾಪರಿಯಾಗಿದ್ದ ತ್ವಲ್'ಹತ್ ಬಿನ್ ಉಬೈದಿಲ್ಲಾಹ್ ಈ ರೀತಿ ವಿವರಿಸುತ್ತಾರೆ. ಪ್ರವಾದಿತ್ವದ ನಿಯೋಗದ ಸಂದರ್ಭದಲ್ಲಿ ನಾನು ಬುಸ್'ರ ಪಟ್ಟಣದಲ್ಲಿದ್ದೆ. ಅಲ್ಲಿಯ ಯಹೂದಿ ದೇವಾಲಯದಿಂದ ಒಂದು ಘೋಷಣೆ ಕೇಳಿ ಬಂತು. ವ್ಯಾಪಾರ ಉತ್ಸವದಲ್ಲಿ ಸೇರಿದವರೆ, ಇತ್ತ ಗಮನಿಸಿ. ಹರಮ್ ಪ್ರದೇಶದ ಯಾರಾದರೂ ಇಲ್ಲಿ ಉಪಸ್ಥಿತರಿದ್ದಾರ.? ಎಂದು ಕೇಳಿದಾಗ ನಾನು ಅತ್ತ ಕಡೆ ತೆರಳಿ ನಾನು ಹರಮ್ ಪ್ರದೇಶದ ವ್ಯಕ್ತಿಯಾಗಿದ್ದೇನೆ, ಯಾಕೆ ಹೀಗೆ ಕೇಳಿದ್ದು.? ಎಂದು ಕೇಳಿದೆನು. ಅದಕ್ಕೆ ಪುರೋಹಿತರು ಅಹ್ಮದ್ ﷺ ಪ್ರವಾದಿಯವರು ಪ್ರವಾದಿತ್ವದ ಘೋಷಣೆ ಮಾಡಿದರೆ.? ಎಂದು ಕೇಳಿದಾಗ ಅಹ್ಮದ್.? ಅದು ಯಾರೆಂದು ನಾನು ಪುನಃ ಅವರಲ್ಲೇ ಕೇಳಿದೆನು.
ಅಬ್ದುಲ್ ಮುತ್ತಲಿಬರ ಮಗನಾದ ಅಬ್ದುಲ್ಲಾಹ್'ರ ಮಗನಾದ ಅಹ್'ಮದ್ ﷺ. ಆ ಪ್ರವಾದಿಯವರು ಘೋಷಣೆ ಮಾಡುವ ಮಾಸವಾಗಿದೆ ಇದು. ಅಂತ್ಯ ಪ್ರವಾದಿಯಾಗಿದ್ದಾರೆ ಅವರು. ಹರಮ್ ಪ್ರದೇಶದಲ್ಲಾಗಿದೆ ಅವರು ಜನನ. ಖರ್ಜೂರ ತುಂಬಿದ ಊರಿಗೆ ಅವರು ಪಲಾಯನ ಮಾಡುವರು. ನೀವು ತಕ್ಷಣವೇ ಮಕ್ಕಾ ಪಟ್ಟಣಕ್ಕೆ ಹಿಂತಿರುಗಿ ಹೋಗಿ ಇತರರಿಗಿಂತ ಮುಂಚೆ ನೀವೆ ಅವರ ಅನುಯಾಯಿಯಾಗಿರಿ ಎಂದು ಹೇಳಿದರು.
ತ್ವಲ್'ಹತ್ ಮಾತು ಮುಂದುವರಿಸಿದರು. ಆ ಮಾತುಗಳು ನನ್ನ ಹೃದಯದಲ್ಲಿ ಆಳವಾಗಿ ಬೇರೂರಿತು. ನಾನು ಬಹಳ ವೇಗವಾಗಿ ವ್ಯಾಪಾರವನ್ನು ಮುಗಿಸಿ ಊರಿಗೆ ಮರಳಿದೆನು. ಯಾತ್ರೆಯುದ್ದಕ್ಕೂ ಆ ಪುರೋಹಿತನ ಮಾತುಗಳು ನನ್ನನ್ನು ಕಾಡುತ್ತಿದ್ದವು.
(ಮುಂದುವರಿಯುತ್ತದೆ...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment