ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ತ್ವಲ್'ಹ: ಮಾತು ಮುಂದುವರಿಸಿದರು. ನಾನು ಊರಿಗೆ ತಲುಪಿದ ನಂತರ ಊರವರಲ್ಲಿ ಏನಿದೆ ಸಮಾಚಾರ ಎಂದು ಕೇಳಿದೆನು. ಅದಕ್ಕೆ ಅವರು ಒಳ್ಳೆಯ ಸಮಾಚಾರವೇ ಇದೆ, ನಮ್ಮ ಅಬ್ದುಲ್ಲಾಹ್'ರ ಮಗನಾದ ಮುಹಮ್ಮದ್ ﷺ ಅಥವಾ 'ಅಲ್ ಅಮೀನ್' ಪ್ರವಾದಿತ್ವದ ಘೋಷಣೆ ಮಾಡಿರುವರು. ಅಬೂಖುಹಾಫರ ಮಗನಾದ ಅಬೂಬಕ್ಕರ್ (ರ) ಅವರ ಮೊದಲ ಅನುಯಾಯಿ ಆಗಿದ್ದಾರೆ ಎಂದು ಹೇಳಿದರು. ನಾನು ನೇರವಾಗಿ ಅಬೂಬಕ್ಕರ್'ರವರನ್ನು ಭೇಟಿಯಾಗಲು ಹೋಗಿ ಬಸ್ವ್'ರಾದಲ್ಲಿ ನಡೆದ ಎಲ್ಲಾ ಘಟನೆಯ ಬಗ್ಗೆ ತಿಳಿಸಿದೆನು.
ನಾವು ಇಬ್ಬರೂ ಸೇರಿ ಮುಹಮ್ಮದ್ ﷺ ಪ್ರವಾದಿಯವರ ಸನ್ನಿಧಿಗೆ ತೆರಳಿದೆವು. ಅಬೂಬಕ್ಕರ್ (ರ) ನಾನು ತಿಳಿಸಿದ ಎಲ್ಲಾ ಘಟನೆಯನ್ನು ಪ್ರವಾದಿಯವರಿಗೆ ﷺ ತಿಳಿಸಿದಾಗ ಅವರಿಗೆ ಬಹಳ ಸಂತೋಷವಾಯಿತು. ತ್ವಲ್'ಹಃ (ರ) ಅದೇ ಕ್ಷಣದಲ್ಲಿ ಇಸ್ಲಾಮ್ ಸ್ವೀಕರಿಸಿ ನಂತರ ಸ್ವರ್ಗ ಸಿಗುವ, ಸಂತೋಷ ವಾರ್ತೆ ಲಭಿಸಿದ ಹತ್ತು ಅನುಯಾಯಿಗಳಲ್ಲಿ ಒಬ್ಬರಾದರು.
ನಜ್'ರಾನಿನಲ್ಲಿ ನಡೆದ ಘಟನೆಯನ್ನು ಕೂಡ ತಿಳಿಯೋಣ. ಪರಂಪರಾಗತವಾಗಿ ವೇದ ಜ್ಞಾನಿಗಳು ಕಳೆದ ಬಂದ ಊರಾಗಿದೆ ನಜ್'ರಾನ್. ಪ್ರತಿಯೊಂದು ಪುರೋಹಿತರು ಕೂಡ ತಮ್ಮ ಕಾಲದ ನಂತರ ಮುದ್ರೆಹಾಕಿ ಹಸ್ತಾಂತರಿಸಲಾಗುತ್ತಿದ್ದ ದಾಖಲೆಗಳನ್ನು ಭದ್ರವಾಗಿ ಇರಿಸಲಾಗಿತ್ತು. ಪ್ರವಾದಿತ್ವದ ನಿಯೋಗದ ಸಂದರ್ಭದಲ್ಲಿ ಅಲ್ಲಿದ್ದ ಪ್ರಧಾನ ಪಾದ್ರಿಯು ಒಂದು ದಿನ ಕಾಲು ಜಾರಿ ಬಿದ್ದರು. ತಕ್ಷಣವೇ ಅವರ ಮಗ "ದೂರದಿಂದ ಉದಯಿಸಿ ಬರುವವನಿಗೆ ನಾಶ ಉಂಟಾಗಲಿ" ಎಂದು ಹೇಳಿದರು. ಅದಕ್ಕೆ ತಂದೆಯು ಹಾಗೆ ಹೇಳಬಾರದು ಮಗನೇ, ಬರಲಿರುವುದು ಸತ್ಯ ಪ್ರವಾದಿಯಾಗಿರುತ್ತಾರೆ. ಆ ಪುಣ್ಯ ಪುರುಷರ ಕುರಿತು ನಮ್ಮ ವೇದ ಗ್ರಂಥಗಳಲ್ಲಿ ಬಹಳಷ್ಟು ಉಲ್ಲೇಖವಿದೆ.
ದಿವಸಗಳ ನಂತರ ತಂದೆಯು ಮರಣ ಹೊಂದಿದರು. ಮಗನು ವೇದ ಗ್ರಂಥಗಳನ್ನೂ, ಪ್ರಾಚೀನ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು, ಪ್ರವಾದಿ ಮುಹಮ್ಮದರ ﷺ ಕುರಿತು ಬಹಳಷ್ಟು ಮಾಹಿತಿಗಳು ಆಧಾರ ಸಮೇತವಾಗಿ ಲಭಿಸಿದವು. ಅವರು ಪ್ರವಾದಿಯವರನ್ನು ﷺ ಅಂಗೀಕರಿಸಿ, ಮಕ್ಕಾ ನಗರಕ್ಕೆ ಹಜ್ಜ್ ಮಾಡಲು ಹೊರಟರು. ಕವಿತೆಗಳನ್ನು ಹಾಡುತ್ತಾ ಪ್ರವಾದಿಯವರನ್ನು ﷺ ಸ್ವೀಕರಿಸಲು ಹೋದರು.
ಮಕ್ಕಾದಲ್ಲಿ ಪ್ರವಾದಿತ್ವದ ಘೋಷಣೆಯಾದಾಗ, ಪ್ರಪಂಚದ ಇತರ ಭಾಗಗಳಲ್ಲಿ ನಡೆದ ಘೋಷಣೆಗಳು, ಹಾಗೂ ಪ್ರವಾದಿಯವರ ﷺ ಕುರಿತು ಇದ್ದ ಪರಿಚಯದ ಕುರಿತಾಗಿದೆ. ನಾವು ಇಷ್ಟೊತ್ತು ತಿಳಿದದ್ದು, ಇನ್ನೂ ನಾವು ಮಕ್ಕಾ ನಗರಕ್ಕೆ ತಿರುಗಿ ಬರೋಣ.
ಪ್ರವಾದಿತ್ವದ ಘೋಷಣೆ ಕಳೆದು ಒಂದು ತಿಂಗಳವರೆಗೆ ಮನೆಯಲ್ಲೇ ಇದ್ದರು. ನಿರಂತರವಾಗಿ ಆರಾಧನೆಯಲ್ಲಿ ಮುಳುಗಿದ್ದರು. ಜವಾಬ್ದಾರಿ ನಿರ್ವಹಿಸಲು ಬೇಕಾದ ಸ್ವಯಂ ತಯಾರಿ ನಡೆಸುವ ಹಾಗೆ. ಪ್ರವಾದಿಯವರ ﷺ ಏಕಾಂತ ವಾಸದ ಕುರಿತು ಎಲ್ಲಾ ಕಡೆಯೂ ಚರ್ಚೆಯಾಯಿತು. ಸಾಮಾನ್ಯವಾಗಿ ಕಅಬಾದ ಪರಿಸರದಲ್ಲಿ ಇರುತ್ತಿದ್ದ ಅಲ್ ಅಮೀನ್ ಈಗ ಅವರನ್ನು ಕಾಣುತ್ತಿಲ್ಲವಲ್ಲ.? ಎಂದು ಕೆಲವರು ಹೇಳಿದರೇ, ಊರಿನಲ್ಲಿ ಜೀವ ಕಾರುಣ್ಯ ಸೇವೆಯನ್ನು ಮಾಡುತಿದ್ದ ನಾಯಕನನ್ನು ಈಗ ಕಾಣುತ್ತಿಲ್ಲವಲ್ಲ ಎಂದು ಇನ್ನೂ ಕೆಲವರು ಹೇಳಿದರು. ಅವರವರೇ ಪರಸ್ಪರ ಏನೇನೋ ಕಾರಣಗಳನ್ನು ಕೊಟ್ಟು ಚರ್ಚೆ ನಡೆಸುತ್ತಿದ್ದರು. ಪ್ರವಾದಿಯವರ ﷺ ಮನೆಯಲ್ಲಿ ಚಿಕ್ಕಪ್ಪ ಹಾಗೂ ಚಿಕ್ಕಮ್ಮಂದಿರು ಕೂಡ ಚರ್ಚೆ ಮಾಡತೊಡಗಿದರು. ಅಷ್ಟೊತ್ತಿಗಾಗಲೇ ಅಲ್ಲಾಹನ ಆಜ್ಞೆಯು ಬಂದು ಬಿಟ್ಟಿತು. "ವ ಅನ್'ದಿರ್...." ನಿಮ್ಮ ಆತ್ಮೀಯ ಗೆಳೆಯರಿಗೆ ಎಚ್ಚರಿಕೆ ನೀಡಿರಿ, ಪ್ರಭೋಧನೆ ಹೇಗೆ ಆರಂಭಿಸಬೇಕು, ಎಲ್ಲಿಂದ ಆರಂಭಿಸಬೇಕು, ಎಂದು ಸ್ಪಷ್ಟಪಡಿಸುವ ಸೂಕ್ತವಾಗಿತ್ತು ಅದು. ಪ್ರವಾದಿಯವರು ﷺ ಈ ಘೋಷಣೆಯನ್ನು ಪಾಲಿಸಿ, ಕುಟುಂಬದ ಗಣ್ಯರನ್ನು ಕರೆಸಿದರು. ಉತ್ತಮವಾದ ಔತಣವನ್ನು ಆಯೋಜಿಸಿದರು. ನಲ್ವತ್ತರಿಂದ ನಲ್ವತೈದರ ಒಳಗೆ ಅತಿಥಿಗಳು ಸೇರಿದ್ದರು. ಸಫಾ ಬೆಟ್ಟದ ಮೇಲೆ ನಿಂತು ಪ್ರತಿಯೊಂದು ವಿಭಾಗದ ಪ್ರತಿನಿಧಿಗಳನ್ನು ಕೂಗಿ ಕರೆದರು. ಓ ಅಬ್ದು ಮನಾಫಿನ ಸಂತತಿಗಳೇ.. ಹಾಶಿಮಿನ ಮಕ್ಕಳೇ, ಮುಹಮ್ಮದ್ ﷺ ಪ್ರವಾದಿಯವರ ಚಿಕ್ಕಪ್ಪರಾದ ಅಬ್ಬಾಸ್'ರವರೇ.. ಚಿಕ್ಕಮ್ಮ ಸ್ವಫೀಯರವರೇ.. ಅಬ್ದುಲ್ ಮುತ್ತಲಿಬರ ಕುಟುಂಬಸ್ಥರೇ.. ಮಗಳೇ ಫಾತಿಮಾ.. ನಾನು ನಿಮಗಾಗಿ ಅಲ್ಲಾಹುವಿನಿಂದ ಏನನ್ನೂ ಸಂಪಾದಿಸಿಲ್ಲ, ನನ್ನ ಸಂಪತ್ತಿನಿಂದ ನಿಮಗೆ ಏನೂ ಬೇಕಾದರೂ ಕೇಳಬಹುದು.
ಒಂದು ವಿಷಯ ಕೇಳಲೇ.. ಈ ಬೆಟ್ಟದ ಹಿಂದಿನಿಂದ ಒಂದು ಅಶ್ವಸೇನೆ ಬರುತ್ತಿದೆ ಎಂದು ನಾನು ಹೇಳಿದರೆ ನೀವು ನಂಬುತ್ತೀರೆ.? ಎಂದು ಕೇಳಿದಾಗ. ಹೌದು ನಾವು ನಂಬುತ್ತೇವೆ, ಇವತ್ತಿನವರೆಗೂ ಮುಹಮ್ಮದ್ ﷺ ಸುಳ್ಳು ಹೇಳಿದ್ದನ್ನು ನಾವು ಕಂಡಿಲ್ಲ ಎಂದು ಹೇಳಿದರು. ಹಾಗಾದರೆ ನಾನು ಘೋಷಿಸುತ್ತಿದ್ದೇನೆ. ಅಲ್ಲಾಹನು ನಿಮಗಾಗಿ ನಿಯೋಗಿಸಿದ ಎಚ್ಚರಿಕೆಗಾರಾನಾಗಿದ್ದೇನೆ ನಾನು....
(ಮುಂದುವರಿಯುತ್ತದೆ...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment