Abu Hisham Saquafi

Official Website Of Hafiz Ilyas Saquafi Padaladka

Wednesday, August 3, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -50 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ನಾನು ನಿಮಗೆ ನೀಡುತ್ತಿರುವಷ್ಟು ಒಳಿತನ್ನು ಅರಬಿಗಳಲ್ಲಿ ಯಾರೂ ಕೂಡ ಅವರ ಕುಟುಂಬಕ್ಕೆ ನೀಡಲಿಲ್ಲ. ಎರಡು ಲೋಕದಲ್ಲೂ ನಿಮಗೆ ಒಳಿತು ಮಾತ್ರವಾಗಿದೆ ನಾನು ನೀಡುತ್ತಿರುವುದು. ನಾನು ನಿಮ್ಮನ್ನು ವಿಜಯದ ಕಡೆಗೆ ಆಹ್ವಾನಿಸುತ್ತಿದ್ದೇನೆ. ಈ ವಿಷಯದಲ್ಲಿ ನೀವು ನನ್ನ ಜೊತೆ ಇರಬೇಕು ಎಂದು ಪ್ರವಾದಿಯವರು ﷺ ಹೇಳಿದರು.  ಜೊತೆ ಸೇರಿದ್ದ ಪ್ರತಿಯೊಬ್ಬರೂ ಕೂಡ ಬಹಳ ಗಂಭೀರವಾಗಿಯೇ ಪ್ರವಾದಿಯವರ ﷺ ಮಾತನ್ನು ಕೇಳುತ್ತಿದ್ದರು. ಆದರೆ ಅಬೂಲಹಬ್ ಎನ್ನುವ ವ್ಯಕ್ತಿಗೆ ಮಾತ್ರ ಅದು ಇಷ್ಟವಾಗಲಿಲ್ಲ. ಇದನ್ನು ಹೇಳಲಾಗಿತ್ತೋ ನಮ್ಮನ್ನು ಇಲ್ಲಿಗೆ ಕರಿಸಿದ್ದು ಮುಹಮ್ಮದರೇ ﷺ ನಿಮಗೆ ನಾಶ ಎಂದು ಹೇಳುತ್ತಾ 'ತಬ್ಬಲ್ಲಕ ಯಾ....' ಎನ್ನುವ ಪದವನ್ನು ಬಳಸಿದರು. ಪ್ರವಾದಿಯವರಿಗೆ ﷺ ಆ ಪದವು ಬಹಳ ನೋವುಂಟು ಮಾಡಿತು. ತಕ್ಷಣವೇ ಅಲ್ಲಾಹನು ಪ್ರವಾದಿಯವರನ್ನು ﷺ ಸಮಾಧಾನ ಪಡಿಸಲು ಅಬೂಲಹಬಿಗೆ ಅದೇ ದಾಟಿಯಲ್ಲಿ ಕುರ್'ಆನ್ ಸೂಕ್ತವನ್ನು ಅವತರಿಸಿ ಉತ್ತರ ನೀಡಿದನು. ತಬ್ಬತ್ ಯದಾ - ಎನ್ನುವ ಖುರ್'ಆನಿನ ನೂರಾ ಹನ್ನೊಂದನೇ ಅಧ್ಯಾಯವು ಅವತರಿಸಿತು. ಅದರ ಅನುವಾದ ಈ ರೀತಿಯಾಗಿದೆ. "ಅಬೂಲಹಬಿನ ಎರಡು ಕೈಗಳಿಗಾಗಿದೆ ನಾಶ, ಅವನು ಗಳಿಸಿದ ಹೆಸರಾಗಲಿ, ಅವನ ಸಂಪತ್ತಾಗಲಿ ಅವನಿಗೆ ಪ್ರಯೋಜನವಾಗುವುದಿಲ್ಲ. ಅವನು ಸುಡುವ ನರಕವನ್ನು ಪ್ರವೇಶಿಸುವನು, ಅವನ ಜೊತೆಯಲ್ಲಿದ್ದ ಪತ್ನಿಯ ಕತ್ತಿನಲ್ಲಿ ತಾಳೆ ನಾರಿನ ಹಗ್ಗ ಇರುತ್ತದೆ." (ಇದೆಲ್ಲವೂ ನಂತದ ಕಾಲದಲ್ಲಿ ವಾಸ್ತವವಾಗಿ ನಡೆಯಿತು) ಆದರೆ ಅದೇ ಸಭೆಯಲ್ಲಿದ್ದ ಕುಟುಂಬದ ಸದಸ್ಯನಾಗಿದ್ದ ಅಲಿ ತಮ್ಮ ಸತ್ಯ ವಿಶ್ವಾಸವನ್ನು ಧೈರ್ಯದಿಂದ ಘೋಷಣೆ ಮಾಡಿದರು. ಯಾವುದೇ ಸಂದರ್ಭದಲ್ಲಿಯೂ ನಾನು ನಿಮ್ಮ ಜೊತೆಯಲ್ಲೇ ಇರುತ್ತೇನೆ ಎಂದೂ ಕೂಡ ಹೇಳಿದರು. 
     ಪ್ರವಾದಿಯವರು ﷺ ತಮ್ಮ ಮನೆಗೆ ಮರಳಿದರು. ತಮ್ಮ ಸಮಯವನ್ನು ಆರಾಧನೆಯಲ್ಲಿಯೂ, ಆಲೋಚನೆಯಲ್ಲಿಯೂ ಉಪಯೋಗಿಸಿದರು. ಪ್ರಭೋಧನೆಯ ಫಲವು ಕಾಣಲು ಆರಂಭಿಸಿತು. ಮಕ್ಕಾದ ಎಲ್ಲಾ ಭಾಗಗಳಲ್ಲೂ ಪ್ರವಾದಿಯವರ ﷺ ಆದರ್ಶದ ಕುರಿತು ಚರ್ಚೆಗಳು ಆರಂಭವಾಯಿತು. ಪ್ರವಾದಿ, ರಸೂಲ್, ದಿವ್ಯಸಂದೇಶ ಅಥವಾ ವಹಿಯ್ ಎಂದು.

     ವಹಿಯ್ ಅಂದರೆ ಏನು.? ಪ್ರವಾದಿ ಅಂದರೆ ಯಾರು.? ಎಂಬುದನ್ನು ನಾವು ತಿಳಿಯೋಣ. 
    ವಹಿಯ್ ಎನ್ನುವ ಅರಬಿಕ್ ಪದದ ಪ್ರಾಥಮಿಕ ಅರ್ಥ ದಿವ್ಯಸಂದೇಶ ಎಂದಾಗಿದೆ. ಆದರೆ ಪರೋಕ್ಷವಾಗಿ ಮಾಹಿತಿ ನೀಡುವುದು ಎಂದಾಗಿದೆ ಅದರ ಸಾಮಾನ್ಯ ಅರ್ಥ. ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಎಲ್ಲಾ ಪ್ರವಾದಿಯರಿಗೆ ಸಂದೇಶಗಳನ್ನು ತಲುಪಿಸುವ ವಿಶೇಷವಾದ ರೀತಿಯಾಗಿದೆ ವಹಿಯ್ ಎನ್ನುವ ಪದದ ಸಂಕೇತವಾದ ಅರ್ಥ. ಸ್ಪಷ್ಟವಾಗಿ ಹೇಳಬೇಕಾದರೆ ವಹಿಯ್'ಯನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಜನರಿಗೆ ಪರಿಮಿತಿಗಳಿವೆ. ಅನುಭವಿಸಿ ತಿಳಿಯಲೋ, ಅನುಭವಿಸಿದವರಿಂದ ನೇರವಾಗಿ ಅರ್ಥ ಮಾಡಿಕೊಳ್ಳಲೋ, ಜನರಿಗೆ ಅವಕಾಶವಿಲ್ಲ ಎಂಬುದಾಗಿದೆ ಅದರ ಒಂದು ಕಾರಣ.
    ವಹಿಯ್'ಗೆ ವಿಭಿನ್ನವಾದ ರೀತಿಗಳಿವೆ
ಒಂದು: ಕನಸಿನ ಮೂಲಕ ತಿಳಿಯುವ ವಿಶೇಷ ಸಂದೇಶಗಳು. ಪ್ರವಾದಿಯವರ ﷺ ಪ್ರತಿಯೊಂದು ಕನಸುಗಳೂ ಕೂಡ ಸೂರ್ಯ ಪ್ರಕಾಶದಂತೆ ಸತ್ಯವಾಗುತ್ತಿತ್ತು. ಪ್ರವಾದಿ ಇಬ್ರಾಹಿಂರವರಿಗೆ (ಅ) ಮಗನನ್ನು ಬಲಿ ಕೊಡಲು ಲಭಿಸಿದ ಸಂದೇಶವು ಕನಸಿನ ಮೂಲಕವಾಗಿತ್ತು. 

       ಎರಡು: ಮಲಕ್'ಗಳ ಮೂಲಕ ಪ್ರವಾದಿಯವರ ﷺ ಮನಸ್ಸಿಗೆ ಅಥವಾ, ಸ್ಮೃತಿಗೆ ಸಂದೇಶವನ್ನು ಹಾಕಿ ಕೊಡುವುದು. ಆ ಸಂದರ್ಭದಲ್ಲಿ ಮಲಕ್'ಗಳು ಪ್ರತ್ಯಕ್ಷವಾಗಿ ಇರಬೇಕೆಂದಿಲ್ಲ. ಹದೀಸ್'ಗಳಲ್ಲಿ ಈ ರೀತಿಯ ಪದ ಪ್ರಯೋಗದ ಕುರಿತು ಕಾಣಬಹುದು. ಪ್ರವಾದಿಯವರು ﷺ ಈ ರೀತಿ ವಿವರಿಸುತ್ತಾರೆ. ಒಮ್ಮೆ ನನ್ನ ಹೃದಯಕ್ಕೆ ಪವಿತ್ರಾತ್ಮವು ಬಂದು ಸಂದೇಶ ಹಾಕಿತು, ಯಾವುದೇ ಶರೀರವೂ ಕೂಡ ಅದಕ್ಕೆ ನಿಶ್ಚಯಿಸಿದ ಆಹಾರವನ್ನು ಸೇವಿಸದೆ ಮರಣ ಹೊಂದುದಿಲ್ಲ, ಹಾಗಾಗಿ ನೀವ ಭಕ್ತಿ ಉಳ್ಳವರಾಗಿರಿ, ಸಂಪತ್ತನ್ನು ಒಳ್ಳೆಯ ರೀತಿಯಲ್ಲಿ ಸಂಪಾದನೆ ಮಾಡಿರಿ. ಆಹಾರದ ಕೊರತೆ ಬಂದಾಗ ಸೃಷ್ಟಿಕರ್ತನು ಅನುಮತಿಸದ ದಾರಿಯನ್ನು ಆಯ್ಕೆ ಮಾಡಬೇಡಿರಿ, ಅಲ್ಲಾಹನನ್ನು ಅನುಸರಿಸುವ ಮೂಲಕ ಅವನಿಂದ ಎಲ್ಲವನ್ನು ಪಡೆಯಲು ಸಾಧ್ಯವಿದೆ ಎಂದು. 
         ಮೂರು: ಮಲಕ್ ಮಲಕಿನ ರೂಪದಲ್ಲೇ ಬಂದು ಸಂದೇಶ ತಿಳಿಸಿ ಹೋಗುವುದು. ಅದು ಕೆಲವೊಮ್ಮೆ ಗಂಟೆಯ ಶಬ್ದದ ರೂಪದಲ್ಲಾಗಿರುತ್ತದೆ. ಸಂದೇಶ ಪಡೆಯುವಾಗ ಬಹಳ ಕಷ್ಟಕರವಾಗುವುದು ಈ ವಿಧಾನದ ಮೂಲಕ ಪಡೆಯುವಾಗ ಆಗಿದೆಯೆಂದು ಹದೀಸ್'ಗಳಲ್ಲಿ ಕಾಣಬಹುದು. ಗಂಟೆಯ ಶಬ್ದ ಎನ್ನುವುದು ಕೇವಲ ಅದರ ಅನುವಾದ ಮಾತ್ರ, ಅದರ ಸರಿಯಾದ ರೂಪವನ್ನು ಅರ್ಥ ಮಾಡಿಕೊಳ್ಳಲು ಸಾದ್ಯವಿಲ್ಲ. ಹಾಗಾಗಿ ಇಂತಹ ವಿಷಯದಲ್ಲಿ ಉಲ್ಲೇಖಗಳನ್ನು ಅಂಗೀಕರಿಸದೇ ಬೇರೆ ದಾರಿಯೇ ಇಲ್ಲ. 

     ನಾಲ್ಕು: ಮಲಕ್ ಮನುಷ್ಯನ ರೂಪದಲ್ಲಿ ಬಂದು ಸಂದೇಶ ತಿಳಿಸುವ ರೀತಿ. ಹೀಗೆ ಬರುವಾಗ ಸಭೆಯಲ್ಲಿರುವವರಿಗೆ ಜಿಬ್'ರೀಲರನ್ನು (ಅ) ಕಾಣಲು ಸಾಧ್ಯವಾಗುತ್ತದೆ ಆದರೆ ಈ ಬಂದಿದ್ದ ವ್ಯಕ್ತಿ ಜಿಬ್'ರೀಲ್ (ಅ) ಆಗಿದ್ದರು ಎಂದು ಪ್ರವಾದಿಯವರೇ ﷺ ತಿಳಿಸಬೇಕಾಗಿತ್ತು. ಈಮಾನ್, ಇಸ್ಲಾಮಿನ ಕುರಿತು ವಿವರಿಸುವ ಪ್ರಸಿದ್ಧವಾದ ಹದೀಸಿನ ಉಲ್ಲೇಖದಲ್ಲಿ ಜಿಬ್'ರೀಲ್ (ಅ) ಮನುಷ್ಯನ ರೂಪದಲ್ಲಿ ಬಂದದ್ದು ಕಾಣಬಹುದು. ಪ್ರಸ್ತುತ ಹದೀಸನ್ನು ಹದೀಸುಜಿಬ್'ರೀಲ್ (ಜಿಬ್'ರೀಲರ (ಅ) ಹದೀಸ್) ಎನ್ನುವ ಹೆಸರಿನಿಂದ ಅರಿಯಲ್ಪಟ್ಟಿದೆ. ಬಹಳಷ್ಟು ಬಾರಿ ಜಿಬ್'ರೀಲರು (ಅ) ಪ್ರಮುಖ ಸ್ವಾಹಾಬಿಯಾದ ದಿಹ್ಯತುಲ್ ಕಲ್'ಬಿ ಎಂಬವರ ರೂಪದಲ್ಲಿ ಬರುತ್ತಿದ್ದರು. 

           (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: