ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಐದು: ಜಿಬ್'ರೀಲ್'ರವರು (ಅ) ಜಿಬ್'ರೀಲರ ನಿಜವಾದ ರೂಪದಲ್ಲಿ ಪ್ರತ್ಯಕ್ಷರಾಗಿ ಸಂದೇಶ ತಿಳಿಸುವುದು. ಈ ವಿಧಾನವು ಬಹಳ ಅಪರೂಪವಾಗಿಯೇ ಕಾಣಲು ಸಿಗುವುದು. ಪ್ರವಾದಿಯರುಗಳಲ್ಲೇ ಜಿಬ್'ರೀಲ್'ರವರ ನಿಜವಾದ ರೂಪವನ್ನು ಕಂಡದ್ದು ಮುಹಮ್ಮದ್ ﷺ ಪ್ರವಾದಿಯವರು ಮಾತ್ರವಾಗಿದ್ದರು. ಅದು ಕೂಡ ಎರಡು ಬಾರಿ ಮಾತ್ರವಾಗಿತ್ತು ಎನ್ನುವ ಅಭಿಪ್ರಾಯಗಳನ್ನು ಹದೀಸ್'ಗಳಲ್ಲಿ ಉಲ್ಲೇಖಿಸಿದ್ದು ಕಾಣಬಹುದು.
ಆರು: ಯಾವುದೇ ಮಧ್ಯವರ್ತಿಗಳಿಲ್ಲದೆ ಅಲ್ಲಾಹನು ನೇರವಾಗಿ ಸಂದೇಶ ನೀಡುವುದಾಗಿದೆ. ಆದರೆ ಪ್ರವಾದಿಯವರು ﷺ ಹಾಗೂ ಅಲ್ಲಾಹನ ನಡುವೆ ಒಂದು ಪರದೆ ಇರುತ್ತಿತ್ತು. ಪ್ರವಾದಿ ಮೂಸ'ರೊಂದಿಗೆ (ಅ) ಅಲ್ಲಾಹುವಿನ ಸಂದೇಶ ಈ ರೀತಿಯಲ್ಲಾಗಿತ್ತು.
ಏಳು: ಮಧ್ಯವರ್ತಿಗಳಾಗಲಿ, ನಡುವೆ ಪರದೆಯಾಗಲಿ ಇಲ್ಲದೆ ಅಲ್ಲಾಹನೊಂದಿಗೆ ನೇರವಾದ ಸಂಭಾಷಣೆ. ಮಿಅರಾಜಿನ ಸಂದರ್ಭದಲ್ಲಿ ಅಲ್ಲಾಹನು ಹಾಗೂ ಪ್ರವಾದಿಯವರು ﷺ ಸಂಭಾಷಣೆ ನಡೆದದ್ದು ಈ ರೀತಿಯಲ್ಲಾಗಿತ್ತು. ಪ್ರಸ್ತುತ ರಾತ್ರಿಯಲ್ಲಿ ಪ್ರವಾದಿಯವರು ﷺ ಅಲ್ಲಾಹನನ್ನು ನೆರವಾಗಿ ಕಂಡು, ಸಂದೇಶ ಸ್ವೀಕರಿಸಿದ್ದರು. ಈ ಘಟನೆಯನ್ನು ಅನ್ನಜ್'ಮ್ ಅಧ್ಯಾಯದಲ್ಲಿ ಖುರ್'ಆನ್ ವಿವರಿಸಿದ್ದು ಈ ರೀತಿಯಾಗಿತ್ತು. "ಹೀಗೆ ಅವನ ದಾಸರಿಗೆ ವಹಿಯ್ ನೀಡಬೇಕಾದ್ದನ್ನು ನೀಡಿದ್ದರು ಎಂದು".
ಎಂಟು: ನಿದ್ದೆಯಲ್ಲಿ ಅಲ್ಲಾಹನು ಪ್ರವಾದಿಯವರಿಗೆ ﷺ ಸಂದೇಶ ನೀಡುವ ರೀತಿ. ಕನಸಿನ ಮೂಲಕವಲ್ಲದ ವಿಶೇಷವಾದ ಒಂದು ದಾರಿಯಾಗಿದೆ ಅದು. ಇಮಾಮ್ ಅಹ್'ಮದ್'ರವರು ಉಲ್ಲೇಖಿಸಿದ ಈ ರೀತಿಯ ಬಹಳಷ್ಟು ಹದೀಸ್'ಗಳನ್ನು ಕಾಣಬಹುದು. ಇಮಾಮ್ ಇಬ್'ನು ಅಬ್ಬಾಸ್'ರವರು ಉಲ್ಲೇಖಿಸಿದ ಮತ್ತೊಂದು ಹದೀಸಿನಲ್ಲಿ ಕಾಣಬಹುದು. ಪ್ರವಾದಿಯವರು ﷺ ಈ ರೀತಿ ವಿವರಿಸುತ್ತಾರೆ. ನನ್ನ ಸೃಷ್ಟಿಕರ್ತನು ಬಹಳ ಸುಂದರವಾಗಿ ನನ್ನ ಬಳಿ ಬಂದನು. (ಕನಸಿನಲ್ಲಿ ಆಗಿತ್ತು ಎಂದು ಪ್ರವಾದಿಯವರು ﷺ ಹೇಳಿರಬಹುದು ಎಂದು ನನ್ನ ಅನಿಸಿಕೆ) ಓ ಮುಹಮ್ಮದ್ ﷺ ಎಂದು ನನ್ನನ್ನು ಕರೆದು.
ಅತ್ಯುತ್ತಮ ವಸ್ತುಗಳಲ್ಲಿ ಯಾವುದರ ಬಗ್ಗೆ ಚರ್ಚೆಯಾಗುತ್ತದೆ ಎಂದು ನಿಮಗೆ ಗೊತ್ತೇ.? ಎಂದು ನನ್ನಲ್ಲಿ ಕೇಳಿದಾಗ. ನನಗೆ ಗೊತ್ತಿಲ್ಲ ಪ್ರಭು ಎಂದು ಹೇಳಿದೆನು. ಅಷ್ಟರಲ್ಲೇ ಕೆಲವೊಂದು ಅನುಗ್ರಹಗಳನ್ನು ನನಗೆ ನೀಡಿದನು. ಅದರ ನಂತರ ಉದಯಾಸ್ತಮಾನದ ನಡುವಿನ ಎಲ್ಲಾ ವಿಷಯಗಳನ್ನು ನಾನು ತಿಳಿಯಲು ಸಾಧ್ಯವಾಯಿತು ಎಂದು.
ಒಂಬತ್ತು: ಜೇನುನೊಣಗಳ ಝೇಂಕಾರದ ಶಬ್ದಗಳನ್ನು ಕೇಳುವ ಹಾಗೆ ದಿವ್ಯ ಸಂದೇಶವನ್ನು ಪಡೆಯುವ ರೀತಿ. ಈ ರೀತಿಯ ಅನುಭವವನ್ನು ಉಮರ್'ರವರು (ರ) ವಿವರಿಸಿದ್ದನ್ನು, ಇಮಾಮ್ ಅಹ್'ಮದ್'ರವರು ಉಲ್ಲೇಖಿಸಿದ್ದು ಕಾಣಬಹುದು.
ಹತ್ತು: ಸಂಶೋಧನೆಯ ವಿಷಯಗಳು ಹತ್ತಿರವಾಗುವಾಗ ಪ್ರವಾದಿಯವರ ﷺ ಹೃದಯದಲ್ಲಿ ಉಂಟಾಗುವ ತೀರ್ಮಾನಗಳು. ಇಜ್'ತಿಹಾದನ್ನು ವಹಿಯ ಸಾಲಿನಲ್ಲಿ ಸೇರಿಸಬಹುದೋ ಎನ್ನುವುದರಲ್ಲಿ ಚರ್ಚೆಗಳಿವೆ. ಆದರೆ ಅವರು ಹೇಳುವುದೆಲ್ಲವು ವಹಿಯ ಆಧಾರದ ಮೇಲೆ ಎನ್ನುವುದರಲ್ಲಿ ಇದು ಕೂಡ ಸೇರುತ್ತದೆ. ದಿವ್ಯ ಸಂದೇಶಗಳಿಗೆ ಇನ್ನು ಕೂಡ ಬೇರೆ ರೀತಿಗಳಿವೆ. ವಹಿಯನ್ನು ತಲುಪಿಸುವ ಭಾವಗಳಿಗುಣವಾಗಿ ಆಗಿದೆ ಅದನ್ನು ವಿವರಿಸುವುದು. ವಹಿಯ್'ಗೆ (ದಿವ್ಯ ಸಂದೇಶಕ್ಕೆ) ನಾಲ್ವತ್ತಾರು ವಿಧಗಳಿವೆ ಎಂದು ಹದೀಸಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರವಾದಿಯವರಿಗೆ ﷺ ಲಭಿಸುತ್ತಿದ್ದ ದಿವ್ಯ ಸಂದೇಶಗಳ ಮಹತ್ವದ ಕುರಿತು 53 ನೇ ಅಧ್ಯಾಯವಾದ ಅನ್ನಜ್'ಮುನಲ್ಲಿ ಒಂದರಿಂದ ಐದರ ವರೆಗಿನ ಸೂಕ್ತಗಳಲ್ಲಿ ವಿವರಿಸುವುದು ಈ ರೀತಿಯಾಗಿದೆ. "ಅಸ್ತಮಿಸಿದ ನಕ್ಷತ್ರದ ಮೇಲಾಣೆ, ನಿಮ್ಮ ಸ್ನೇಹಿತನು (ಪ್ರವಾದಿಯವರು ﷺ) ದಾರಿಯೂ ತಪ್ಪಲಿಲ್ಲ. (ಸತ್ಯದಿಂದ) ದೂರ ಸರಿದೂ ಇಲ್ಲ. ಅವರು ತನ್ನಿಚ್ಛೆಯಂತೆ ಮಾತಾಡುವುದು ಇಲ್ಲ. (ಅವರಾಡುವ ಮಾತು) ಅವರಿಗೆ ಲಭಿಸುವ ದಿವ್ಯ ಸಂದೇಶದಿಂದ ಮಾತ್ರವಾಗಿದೆ. ಮಹಾಶಕ್ತಿಶಾಲಿಯಾದ ಒಬ್ಬರು ಅವರಿಗೆ ಅದನ್ನು ಕಲಿಸಿರುತ್ತಾರೆ" ಎಂದು.
ಪ್ರವಾದಿಯವರ ﷺ ಜ್ಞಾನದ ಹೇಳಿಕೆಗಳು ಕೂಡ ವಹಿಯ್ ಮೂಲಕ ಮಾತ್ರವಾಗಿತ್ತು. ಎಂಬುದನ್ನು ವಿವರಿಸುವ ಒಂದು ಹದೀಸನ್ನು ಇಮಾಮ್ ಅಬೂದಾವೂದ್'ರವರು (ರ) ಉಲ್ಲೇಖಿಸಿದ್ದು ಕಾಣಬಹುದು. ಅಬ್ದುಲ್ಲಾಹಿ ಬಿನ್ ಅಂರ್'ರವರು ಈ ರೀತಿ ವಿವರಿಸುತ್ತಾರೆ. ಪ್ರವಾದಿಯವರಿಂದ ﷺ ಕೇಳಿದ ಎಲ್ಲಾ ವಿಷಯಗಳನ್ನೂ ನಾನು ಬರೆದು ಇಡುತ್ತಿದ್ದೆ. ಕಂಠಪಾಠ ಮಾಡುವ ಉದ್ದೇಶದಿಂದಾಗಿತ್ತು ಹಾಗೆ ಮಾಡುತಿದ್ದದ್ದು. ಅದನ್ನು ಕೆಲವು ಖುರೈಷಿಗಳು ವಿರೋಧಿಸಿದರು. ಪ್ರವಾದಿಯವರು ﷺ ಕೋಪ ಬಂದಾಗಲೂ ಇಲ್ಲದಿದ್ದರೂ ಮಾತಾಡುವ ವ್ಯಕ್ತಿಯಲ್ಲವೇ.? ಹಾಗಾಗಿ ಎಲ್ಲವನ್ನು ಬರೆದಿಡುವ ಅಗತ್ಯವಿದೆಯೇ.? ಎಂದು ಹೇಳಿದಾಗ ನಾನು ಬರೆಯುವುದನ್ನು ನಿಲ್ಲಿಸಿದೆನು. ಈ ವಿಷಯವನ್ನು ನಂತರ ಪ್ರವಾದಿಯವರಲ್ಲಿ ﷺ ಹಂಚಿಕೊಂಡಾಗ, ನೀವು ಬರೆಯಿರಿ ನನ್ನ ಆತ್ಮವನ್ನು ನಿಯಂತ್ರಿಸುವ ಒಡೆಯ ಮೇಲಾಣೆ, ನನ್ನಿಂದ ಸತ್ಯವಲ್ಲದ ಒಂದು ಮಾತು ಕೂಡ ಬರುವುದಿಲ್ಲ ಎಂದು ಹೇಳಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment