ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವಹಿಯ್, ಪ್ರವಾದಿತ್ವದ ಕುರಿತು ನಾವು ತಿಳಿದುಕೊಂಡೆವು. ಆದರೆ ಪ್ರವಾದಿಗಳನ್ನು ನಿಯೋಗಿಸುವುದರ ಹಿಂದಿನ ಉದ್ದೇಶವಾದರು ಏನು.? ಎನ್ನುವ ಪ್ರಶ್ನೆಗಳು ಸಾಮಾನ್ಯವಾಗಿ ಉದ್ಭವಿಸಬಹುದು, ಅದರ ಉತ್ತರವು ಬಹಳ ಸರಳವಾಗಿದೆ. ಮನುಷ್ಯನ್ನು ಸೃಷ್ಟಿಸಿ, ಸಾಕಿ ಸಲಹಿದ ಜಗದೊಡೆಯನಾದ ಅಲ್ಲಾಹನು. ಅವನು ಉದ್ದೇಶಿಸುವ ಕೆಲವೊಂದು ವಿಷಯಗಳನ್ನು ಮನುಷರಿಗೆ ತಿಳಿಸಲು, ಮನುಷ್ಯರಿಂದಲೇ ಆಯ್ಕೆ ಮಾಡಿದ ಸಂದೇಶ ವಾಹಕರಾಗಿದ್ದಾರೆ ಈ ಪ್ರವಾದಿಗಳು. ತನ್ನ ಸೃಷ್ಟಿಗಳಾದ ಮನುಷ್ಯರಿಗೆ ಯಾವ ರೀತಿ ಉಪದೇಶ ನೀಡಬೇಕೆಂದು ತೀರ್ಮಾನಿಸುವ ಅಧಿಕಾರ ಇರುವುದು ಅಲ್ಲಾಹನಿಗೆ ಮಾತ್ರವಾಗಿದೆ. ಹಾಗಾಗಿ ಅವನು ಮನುಷ್ಯರಿಂದಲೇ ಉತ್ತಮರಾದ ಪುಣ್ಯ ಪುರುಷರನ್ನು ಆಯ್ಕೆ ಮಾಡಿ, ಅವರನ್ನು ಸಂದೇಶವಾಹಕರಾಗಿ ಆಯ್ಕೆ ಮಾಡಿಕೊಂಡನು. ಪ್ರಪಂಚದ ಎಲ್ಲಾ ಸೃಷ್ಟಿಗಳಲ್ಲೂ ಮನುಷ್ಯನನ್ನು ಮಾತ್ರ ಅತ್ಯುತ್ತಮವಾದ ಸ್ವಾಭಾವ ನೀಡಿ ಅನುಗ್ರಹಿಸಿದ್ದು ಕೂಡ ಅವನೇ ಆಗಿರುವನು. ಅದಕ್ಕನುಗುಣವಾದ ಜೀವನವನ್ನಾಗಿದೆ ಅವನು ಮನುಷ್ಯನಿಗೆ ನೀಡಿದ್ದು.
ಸರಿ ಹಾಗಿದ್ದರೆ ಮುಹಮ್ಮದ್'ರವರು ﷺ ಅಲ್ಲಾಹನು ನಿಯೋಗಿಸಿದ ಪ್ರವಾದಿಯಾಗಿರುವವರು ಎನ್ನುವುದನ್ನು ತಾರ್ಕಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಮುಹಮ್ಮದರು ﷺ ಮಕ್ಕಾದ ಉನ್ನತ ಮನೆತನದಲ್ಲಾಗಿದೆ ಜನಿಸಿದ್ದು, ತಂದೆ, ತಾಯಿಯೂ ಕೂಡ ಅತ್ಯುತ್ತಮ ಸ್ವಭಾವದ ವ್ಯಕ್ತಿಗಳಾಗಿದ್ದರು. ಮುಹಮ್ಮದರು ﷺ ಹುಟ್ಟಿದ ನಾಡಿನಲ್ಲೇ, ಸಮೂಹದ ನಡುವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿಯೇ ಬೆಳೆದರು. ತನ್ನ ಹದಿಹರೆಯದ ಪ್ರಾಯ ಹಾಗೂ ಯೌವನವನ್ನು ಮಾದರಿಯೋಗ್ಯವಾಗಿ ಕಳೆದರು. ತಮ್ಮ ಸುತ್ತಮುತ್ತಲಿನ ಜನತೆ ಮುಹಮ್ಮದರನ್ನು ﷺ ಸತ್ಯವಂತನೆಂದೂ, ನೀತಿವಂತನೆಂದೂ ಕರೆಯುತ್ತಿದ್ದರು. ಯಾವುದೇ ಕಾರಣಕ್ಕೂ, ತಮಾಷೆಗೂ ಕೂಡ ಸುಳ್ಳು ಹೇಳುತ್ತಿರಲಿಲ್ಲ. ತನ್ನ ಜೀವನದಲ್ಲಿ ಯಾರೊಬ್ಬರಿಗೂ ಮೋಸ ಮಾಡದೇ, ಯಾವುದೇ ದುಷ್'ಕೃತ್ಯವನ್ನೂ ಮಾಡದೆ, ಉತ್ತಮ ಸ್ವಾಭಾವದ ವ್ಯಕ್ತಿಯಾಗಿ, ನಲ್ವತ್ತು ವರ್ಷಗಳ ಕಾಲ ತನ್ನ ತಾಯ್ನಾಡಿನಲ್ಲೇ ಜೀವನ ಕಳೆದರು. ಮಕ್ಕಾ ಜನತೆಯ ಗಣ್ಯರ ಅತ್ಯಮೂಲ್ಯ ವಸ್ತುಗಳನ್ನು ಭದ್ರವಾಗಿ ನೋಡಿಕೊಳ್ಳುವ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರು ಅವರು. ಸಮಸ್ಯೆಯ ಸಂದರ್ಭಗಳಲ್ಲಿ ಜನರ ನಡುವೆ ಮಧ್ಯಸ್ಥಿಕೆ ವಹಿಸುವ ಕಾರ್ಯವನ್ನು ಮಾಡುತಿದ್ದರು. ಈ ರೀತಿಯಾಗಿ ಬಹಳ ಸೂಕ್ಷ್ಮತೆಯಿಂದ ಬೆಳೆದು ಬಂದ ವ್ಯಕ್ತಿಯಾಗಿರುತ್ತಾರೆ, ತನ್ನೊಬ್ಬ ಅಂತ್ಯ ಪ್ರವಾದಿಯಾಗಿರುವೆನು ಎಂದು ಘೋಷಣೆ ಮಾಡುವುದು. ನಲ್ವತ್ತು ವರ್ಷಗಳ ಕಾಲ ಒಂದೇ ಒಂದು ಕಾರಣಕ್ಕೂ ಕೂಡ ಸುಳ್ಳು ಹೇಳದ ವ್ಯಕ್ತಿ ಇಂತಹ ವಿಷಯದಲ್ಲಿ ಸುಳ್ಳು ಹೇಳಲು ಸಾಧ್ಯವೇ.? ಸಾಮಾನ್ಯವಾಗಿಯೇ ಅದನ್ನು ವಿಶ್ವಾಸವಿರಿಸಲು ಸಾಧ್ಯವೇ.? ಇಲ್ಲ ಯಾವತ್ತೂ ಸಾಧ್ಯವಿಲ್ಲ, ಹಾಗಾದರೆ ಆ ವಾದವೇ ತಪ್ಪು ಅಲ್ಲವೇ.?
ಇಂದೂ ಕೂಡ ನಮಗೆ ಆಲೋಚನೆ ಮಾಡಬಹುದು. ನಾನು ಅಲ್ಲಾಹನ ಸಂದೇಶವಾಹಕನಾಗಿರುವೆನು (ಪ್ರವಾದಿ) ಎಂದು ಹೇಳುವಾಗ ಏನಾದರೂ ಸಾಕ್ಷಿ ನೀಡಿರಬಹುದಲ್ಲವೇ?. ಹೌದು ಖುರ್'ಆನ್ ಎಂಬ ಪವಿತ್ರವಾದ ಗ್ರಂಥವನ್ನು ಪ್ರಸ್ತುತಪಡಿಸಿದ್ದರು. ಅದು ಜಗದೊಡೆಯನ ವಾಕ್ಯಗಳಾಗಿವೆ ಎಂದೂ ಕೂಡ ಹೇಳಿದ್ದರು. ಅವರೇ ಸ್ವಂತವಾಗಿ ಒಂದು ಗ್ರಂಥವನ್ನು ಬರೆದು ಅದು ಅಲ್ಲಾಹನಿಂದ ಬಂದ ಗ್ರಂಥವಾಗಿದೆ ಎಂದು ಹೇಳಬಹುದಲ್ಲವೇ.? ಎಂದು ಯಾರಾದರೂ ಕೇಳಿದರೆ ಆ ಮಾತಿಗೆ ಅರ್ಥವೇ ಇಲ್ಲ. ಕಾರಣ ಒಂದೇ ಒಂದು ಅಕ್ಷರವನ್ನೂ ಕಲಿಯದ ಒಬ್ಬ ವ್ಯಕ್ತಿ ಅದು ಹೇಗೆ ತಾನೇ ಬರೆಯಲು ಸಾಧ್ಯ.? ಇನ್ನೂ ವಿದ್ಯೆ ಕಲಿತಿದ್ದರೂ ಕೊನೆಯ ಪಕ್ಷ ಕಲಿಸಿದ ಗುರುವಾದರೂ ಬೇಕಲ್ಲವೆ? ಹಾಗಾದರೆ ಎಲ್ಲಿಂದಲೋ ನಕಲು ಮಾಡಿರಬಹುದಲ್ಲವೇ.? ಎಂದು ಹೇಳಿದರೆ, ಅದಕ್ಕೂ ಯಾವುದೇ ಸಾಧ್ಯತೆ ಇಲ್ಲ. ಕಾರಣ, ಪ್ರಪಂಚದ ಯಾವುದೇ ಭಾಗದಲ್ಲೂ ಕೂಡ ಖುರ್'ಆನಿನ ಶೈಲಿಯನ್ನಾಗಲಿ, ರೀತಿಯನ್ನಾಗಲಿ, ಅಥವಾ ಅದರ ಭಾಷೆಯನ್ನಾಗಲಿ ಹೋಲಿಕೆಯಾಗುವ ಯಾವುದೇ ವೇದ ಗ್ರಂಥವನ್ನೂ ಕಾಣಲು ಸಾಧ್ಯವಿಲ್ಲ. ಇನ್ನೂ ವರ್ತಮಾನ ಕಾಲದ ಬಗ್ಗೆ ಹೇಳುವುದಾದರೆ, ಒಂದೂವರೆ ಸಹಸ್ರಮಾನ ಕಳೆದರೂ, ಕೋಟ್ಯಾಂತರ ಜನರು ತಮ್ಮ ದೈನಂದಿನ ಜೀವನದಲ್ಲಿ ಎಲ್ಲಾ ದಿನವೂ ಕೂಡ ಪಠಿಸುತ್ತಿರುವ, ಚರ್ಚಿಸುತ್ತಿರುವ ಒಂದು ಗ್ರಂಥವಾಗಿದೆ ಖುರ್'ಆನ್. ಇಂಥಹ ಒಂದು ಗ್ರಂಥವನ್ನು ವಿಷೇವಾದ ಗ್ರಂಥ ಅನ್ನದೆ ಇನ್ನೇನು ಹೇಳಬೇಕು.? ಈ ರೀತಿಯ ಏನೇ ಪ್ರಶ್ನೆಗಳನ್ನು ಕೇಳಿದರೂ ಉತ್ತರ ಮಾತ್ರ ಅವರನ್ನು ಈ ಗ್ರಂಥದ ದೈವಿಕ ಚಿಂತನೆಯತ್ತ ಕೊಂಡೊಯ್ಯುತ್ತದೆ. ಅಷ್ಟೇ ಅಲ್ಲ ಇವತ್ತಿನ ವರೆಗೂ ಈ ಗ್ರಂಥಕೆ ಸಮಾನವಾದ ಒಂದೇ ಒಂದು ಗ್ರಂಥವನ್ನು ಕೂಡ ಪ್ರಸ್ತುತಪಡಿಸಲು ವಿಮರ್ಶಕರಿಗೆ ಸಾಧ್ಯವಾಗಿಲ್ಲ ಎನ್ನುವುದು ಮಾತ್ರ ಅಕ್ಷರಶಃ ಸತ್ಯ.
ಬೇರೆ ಯಾವುದಾದರೂ ಪುರಾವೆ ಇರಬಹುದೇ.? ಸರಿ ಹಾಗೆಯೂ ಕೂಡ ಒಮ್ಮೆ ನೋಡೋಣ. ಪ್ರವಾದಿಯವರ ﷺ ಭವಿಷ್ಯವಾಣಿಯು ಕೂಡ ಒಂದು ದಾಖಲಾಗಿದೆ. ಭೌತಿಕವಾದ ಯಾವುದೇ ತೀರ್ಮಾನಗಳಿಂದ ವಿವರಿಸಲಾಗದ ಅನೇಕ ವಿಷಯಗಳ ಕುರಿತು ಭವಿಷ್ಯವಾಣಿ ಹೇಳಿದ್ದರು. ಅದೆಲ್ಲವೂ ಸೂರ್ಯ ಪ್ರಕಾಶದಂತೆ ವಾಸ್ತವಾಗಿತ್ತು ಕೂಡ. ಅವುಗಳ ಪಟ್ಟಿಯನ್ನೇ ಸಿದ್ಧಪಡಿಸಬಹುದು.
ಇನ್ನೂ ಯಾರಾದರೂ ಬಂದು, ಸಾವಿರದ ನಾನೂರು ವರ್ಷಗಳ ಹಿಂದೆ ಮುಹಮ್ಮದ್ ﷺ ಎನ್ನುವ ವ್ಯಕ್ತಿ ನಿಜವಾಗಿಯೂ ಬದುಕಿದ್ದರೆ? ಅಥವಾ ಅದೊಂದು ಕೇವಲ ಕಾಲ್ಪನಿಕ ಕಥೆ ಮಾತ್ರವಾಗಿತ್ತೆ.? ಎಂದೂ ಕೇಳಬಹುದು. ಅದಕ್ಕು ಉತ್ತರ ಬಹಳ ಸರಳವಾಗಿದೆ. ಇತಿಹಾಸದಲ್ಲಿ ಒಬ್ಬರು ವ್ಯಕ್ತಿ ಬದುಕಿದ್ದರು ಎಂಬುದಕ್ಕೆ ತೋರಿಸಲಾಗುವ ಪ್ರಬಲ ಪುರಾವೆ ಪ್ರವಾದಿ ಮುಹಮ್ಮದರಿಗೆ ﷺ ಮಾತ್ರವೇ ಇರುವುದು. ಮುಹಮ್ಮದ್ ﷺ ಪ್ರವಾದಿಯವರಿಂದ ಬರುವ ಎಲ್ಲಾ ವೈಜ್ಞಾನಿಕ ಪರಂಪರೆಯನ್ನೂ, ಸಂತಾನ ಪರಂಪರೆಯನ್ನೂ ನಡುವೆ ಒಬ್ಬರೂ ಕೂಡ ತಪ್ಪದ ರೀತಿಯಲ್ಲಿ ಎಲ್ಲವನ್ನು ದಾಖಲಿಸಿಲಾಗಿದೆ. ಅದನ್ನು ದಾಖಲಿಸಿದವರ ಇತಿಹಾಸವನ್ನೂ ಕೂಡ ದಾಖಲಿಸಲಾಗಿದೆ. ಇತಿಹಾಸದ ವಿಜ್ಞಾನವು ತಿಳಿಸುವ ಮಾನದಂಡಗಳ ಮೂಲಕ ಇವೆಲ್ಲವನ್ನೂ ಪರಿಶೀಲಿಸಲು ಸಾಧ್ಯವಿದೆ.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment