ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ನಾವು ಮಕ್ಕಾದ ಇತಿಹಾಸಕ್ಕೆ ಮರಳಿ ಬರೋಣ. ಪ್ರವಾದಿಯವರ ﷺ ಪ್ರಭೋಧನೆಯ ಆರಂಭದ ದಿನಗಳಾಗಿತ್ತು ಅದು. ತಮ್ಮ ಕುಟುಂಬಸ್ಥರನ್ನು ಇಸ್ಲಾಮಿಗೆ ಆಹ್ವಾನಿಸಿದರು. ಕುಟುಂಬಸ್ಥರೊಂದಿಗೆ ನಡೆಸಿದ ಮಾತುಕತೆಯು ಈ ರೀತಿಯಾಗಿತ್ತು. "ಪ್ರಪಂಚದಲ್ಲಿ ಯಾವುದೇ ನಾಯಕನೂ ಕೂಡ ತನ್ನ ಕುಟುಂಬಸ್ಥರಲ್ಲಿ ಯಾವತ್ತೂ ಸುಳ್ಳು ಹೇಳುವುದಿಲ್ಲ. ನಾನು ಜಗತ್ತಿನ ಯಾರೊಂದಿಗೆ ಸುಳ್ಳು ಹೇಳಿದರೂ ನಿಮ್ಮೊಂದಿಗೆ ಸುಳ್ಳು ಹೇಳಲು ಸಾಧ್ಯವೇ ಇಲ್ಲ.? ನಾನು ಈ ಲೋಕದಲ್ಲಿ ಯಾರನ್ನು ವಂಚಿಸಿದರೂ ನಿಮ್ಮನ್ನು ವಂಚಿಸಲು ಸಾಧ್ಯವೇ ಇಲ್ಲ.? ಸೃಷ್ಟಿಕರ್ತನಾದ ಅಲ್ಲಾಹನಾಣೆಗೂ ನಾನು ನಿಮಗಾಗಿ, ಪ್ರತ್ಯೇಕವಾಗಿ ಈ ಸಂಪೂರ್ಣ ಸಮೂಹಕ್ಕಾಗಿ ನಿಯೋಗಿಸಿದ ಅಲ್ಲಾಹನ ಸಂದೇಶ ವಾಹಕನಾಗಿರುವೆನು. ಅಲ್ಲಾಹನಾಣೆಗೂ ನೀವು ನಿದ್ರಿಸುವ ಹಾಗೆ ಮರಣ ಹೊಂದುವಿರಿ, ಎಚ್ಚರ ಆಗುವ ಹಾಗೆ ಪುನಃ ಜನಿಸುವಿರಿ. ನೀವು ಮಾಡಿದ ಸತ್ಕರ್ಮಗಳಿಗೆ ಪ್ರತಿಫಲವಾಗಿ ಒಳಿತು ಸಿಗುವುದು. ಪಾಪಗಳಿಗೆ ಪ್ರತಿಫಲವಾಗಿ ಶಿಕ್ಷೆ ಲಭಿಸುವುದು. ಒಂದೋ ಶಾಶ್ವತವಾದ ಸ್ವರ್ಗ ಅಥವಾ ಶಾಶ್ವತವಾದ ನರಕ.." ಎಂದು ಪ್ರವಾದಿಯವರು ﷺ ಹೇಳಿದರು.
ನಾಲ್ಕು ದಿಕ್ಕುಗಳಿಂದಲೂ ವಿಮರ್ಶೆಗಳು ಅಧಿಕವಾಯಿತು. ಅದರ ನಡುವೆ ಭಾಗ್ಯವಂತರಾದ ಕೆಲವು ಜನರು ಪ್ರವಾದಿಯವರ ﷺ ಬಳಿ ಬಂದು ಸನ್ಮಾರ್ಗದ ದಾರಿಯಲ್ಲಿ ಸೇರಿಕೊಂಡರು. ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದ ವಿಶ್ವಾಸಿಗಳಿಗೆ ಖುರ್'ಆನ್ ಪ್ರತ್ಯೇಕವಾದ ಅಭಿನಂದನೆ ತಿಳಿಸಿದ್ದವು. ಪವಿತ್ರ ಖುರ್'ಆನಿನ ತೌಬಾದ ಅಧ್ಯಾಯದಲ್ಲಿ, ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದ ಮುಹಾಜಿರ್ ಹಾಗೂ ಅನ್ಸಾರ್'ಗಳ ಕುರಿತು ಹೇಳುವುದು ಕಾಣಬಹುದು. "ಅವರು ಒಳಿತನ್ನು ಸ್ವೀಕರಿಸಿದವರಾಗಿದ್ದಾರೆ. ಅವರನ್ನು ಅಲ್ಲಾಹನೂ, ಅಲ್ಲಾಹನನ್ನೂ ಅವರೂ ಕೂಡ ಪರಸ್ಪರ ಇಷ್ಟಪಟ್ಟವರಾಗಿರುತ್ತಾರೆ. ಅಲ್ಲಾಹನು ಅವರಿಗಾಗಿ ಕಣಿವೆಯಲ್ಲಿ ತೊರೆಗಳು ಹರಿಯುವ, ತೋಟಗಳನ್ನು ನಿರ್ಮಿಸಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ಇರುವರು, ಅದಾಗಿದೆ ಮಹತ್ವವಾದ ಗೆಲುವು" ಎಂದು.
ಆರಂಭಿಕ ಹಂತದಲ್ಲಿ ಇಸ್ಲಾಮ್ ಸ್ವೀಕರಿಸಿದವರ ಪಟ್ಟಿಯನ್ನು ಕ್ರಮನುಸಾರವಾಗಿ ತಯಾರು ಮಾಡುವುದು ಕಷ್ಟಕರವಾಗಿದೆ. ಅದೆಷ್ಟೋ ಸಹಾಬಿಗಳು (ಪ್ರವಾದಿಯವರನ್ನು ﷺ ನೇರವಾಗಿ ಕಂಡ ಅನುಯಾಯಿಗಳು) ಸ್ವತಃ ತಮ್ಮನ್ನು ಪರಿಚಯಿಸುವಾಗ, ನಾನು ಆರಂಭದಲ್ಲಿ ವಿಶ್ವಾಸವಿರಿಸಿದ ಇಷ್ಟನೇ ವ್ಯಕ್ತಿಯಾಗಿದ್ದೇನೆ ಎಂದು ಪರಿಚಯಿಸುದವರೂ ಇದ್ದಾರೆ. ಆದರೆ ಅವರು ಹೇಳಿದ ಆ ಕ್ರಮ ವಾಸ್ತವ ಆಗಬೇಕೆಂದಿಲ್ಲ. ಕಾರಣ ಅವರಿಗೆ ತಿಳಿದ ಜ್ಞಾನದ ಆಧಾರದ ಮೇಲೆ ಹೇಳಿರಲೂಬಹುದು. ಉದಾಹರಣೆಗೆ ಸಅದ್ ಬಿನ್ ಅಬೀ ವಖಾಸ್'ರವರನ್ನು (ರ) ತೆಗೆಯೋಣ. ಮಹಾನರು ನಾನು ಇಸ್ಲಾಮಿನ ಮೂರು ಸದಸ್ಯನಲ್ಲಿ ಒಬ್ಬನಾಗಿದ್ದೆ ಎಂದು ಹೇಳಿದ್ದರು. ಇಮಾಮ್ ಬುಖಾರಿಯವರಾಗಿದೆ ಈ ಹದೀಸನ್ನು ಉಲ್ಲೇಖಿಸಿದ್ದು. ಆದರೆ ಐತಿಹಾಸಿಕವಾಗಿ ಹೇಳುವುದಾದರೆ ಮೊದಲ ನಾಲ್ಕು ಜನರಲ್ಲಿ ಸಅದ್ (ರ) ಸೇರುವುದಿಲ್ಲ ಎಂಬುವುದು ಮಾತ್ರ ಖಚಿತ. ಹಾಗಾದರೆ ಪುರುಷರಲ್ಲಿ ಮೂರನೇ ವ್ಯಕ್ತಿ ಎನ್ನುವ ವೀಕ್ಷಣೆಯಲ್ಲಾಗಿರಬಹುದು ಅವರು ಹೇಳಿದ್ದು. ಅಥವಾ ಸ್ತ್ರೀಯರನ್ನು, ಮಕ್ಕಳನ್ನು, ಸೇವಕರನ್ನು ಸೇರಿಸದೆ ಹೇಳಿದ್ದು ಆಗಿರಬಹುದು. ಅದೂ ಅಲ್ಲದಿದ್ದರೆ ಅವರಿಗೆ ಸಿಕ್ಕಿದ ಮಾಹಿತಿಗೆ ಅನುಗುಣವಾಗಿಯೂ ಆಗಿರಬಹುದು.
ಆರಂಭದಲ್ಲಿ ಮೊದಲು ಇಸ್ಲಾಮ್ ಸ್ವೀಕರಿಸಿದ ನಾಲ್ಕು ಜನ ಅನುಯಾಯಿಗಳು, ಬೀವಿ ಖದೀಜ, ಅಬೂಬಕ್ಕರ್ ಸಿದ್ದೀಕ್, ಅಲಿ ಬಿನ್ ಅಬೀತ್ವಾಲಿಬ್, ಝೈದ್ ಬಿನ್ ಹಾರಿಸ್ (ರ) ಎಂಬುವವರಾಗಿದ್ದರು. ಇದರಲ್ಲಿ ಮಹಿಳೆಯರು, ಪುರುಷರು, ಮಕ್ಕಳು, ಸೇವಕರು ಎಂದು ವಿಂಗಡಿಸಿದರೆ ಪ್ರತಿ ವಿಭಾಗದಲ್ಲೂ ಮೊದಲ ಸ್ಥಾನದಲ್ಲಿ ನಿಲ್ಲುವುದು ಈ ನಾಲ್ಕು ಜನರಾಗಿರುತ್ತಾರೆ. ಉಮರ್'ರವರನ್ನು (ರ) ಇಸ್ಲಾಮ್ ಸ್ವೀಕರಿಸಿದವರ ಸಾಲಿನಲ್ಲಿ ನಲ್ವತ್ತನೇ ವ್ಯಕ್ತಿಯಾಗಿ ಆಗಿದೆ ಎಣಿಸಲ್ಪಡುವುದು.
ಆರಂಭಿಕ ಹಂತದಲ್ಲಿ ಇಸ್ಲಾಂ ಸ್ವೀಕರಿಸಿದ ಎಪ್ಪತ್ತಮೂರು ಜನರ ಸಂಖ್ಯೆಗಳು ಈ ರೀತಿಯಾಗಿದೆ. 1 ಅಬೂಬಕರ್ 2 ಖದೀಜಾ 3 ಅಲಿ 4 ಸೈದ್ ಬಿನ್ ಹಾರಿಸ 5 ಬಿಲಾಲ್ 6 ಆಮೀರ್ ಬಿನ್ ಫುಹೈರಾ 7 ಅಬೂ ಫುಕೈಹಾ 8 ಶಕ್'ರಾನ್ 9 ಅಮ್ಮಾರ್ ಬಿನ್ ಯಾಸಿರ್ 10 ಸುಮಯ್ಯ 11 ಯಾಸಿರ್ 12 ಉಮ್ಮು ಐಮನ್ 13 ಖಾಲಿದ್ ಬಿನ್ ಸಯೀದ್ ಬಿನ್ ಅಲ್ ಆಸ್ 14 ಉಸ್ಮಾನ್ ಬಿನ್ ಅಫ್ಫಾನ್ 15 ಆಮಿನ ಬಿಂತ್ ಖಲಫ್ 16 ಸಅದ್ ಬಿನ್ ಅಬೀ ವಖಾಸ್ 17 ತ್ವಲ್'ಹತ್ ಬಿನ್ ಉಬೈದಿಲ್ಲಾಹ್ 18 ಝುಬೈರ್ ಬಿನ್ ಅಲ್ ಅವಾಮ್ 19 ಅಬ್ದುರ್ರಹ್ಮಾನ್ ಬಿನ್ ಔಫ್ 20 ಅಯ್ಯಾಶ್ ಬಿನ್ ರಬಿಅಃ 21 ಮಿಸ್ಅಬ್ ಬಿನ್ ಉಮೈರ್ 22 ಸುಹೈಲ್ ಬಿನ್ ಸಿನಾನ್ 23 ಉಸ್ಮಾನ್ ಬಿನ್ ಮಳ್'ಗೂನ್ 24 ಮಿಖ್'ದಾದ್ 25 ಅಲ್'ಖಂ ಬಿನ್ ಅಲ್ ಅಲ್'ಖಂ 26 ಉಮ್ಮುಲ್ ಫಳ್'ಲ್ 27 ಅಬೂ ರಾಫಿಅ್ 28 ಅಬೂಸಲಮಃ 29 ಉಮ್ಮುಸಲಮ (ಹಿಂದ್) 30 ಅಬೂ ಉಬೈದಃ 31 ಖಬ್ಬಾ ಬಿನ್ ಅಲ್ ಅರತ್ 32 ಖುದಾಮಃ ಬಿನ್ ಮಳ್'ಗೂನ್ 33 ಸಯೀದ್ ಬಿನ್ ಝೈದ್ 34 ಫಾತ್ವಿಮ ಬಿಂತ್ ಖತ್ತಾಬ್ 35 ಉತ್ಬತ್ ಬಿನ್ ಘಝ್'ವಾನ್ 36 ಅಬ್ದುಲ್ಲಾಹ್ ಬಿನ್ ಮಸ್'ವೂದ್ 37 ಉಮೈರ್ ಬಿನ್ ಅಬಿವಖಾಸ್ 38 ಉಬೈದತ್ ಬಿನ್ ಹಾರಿಸ್ 39 ಖುದಾಮತ್ ಬಿನ್ ಮಳ್'ಗೂನ್ 40 ಅಬ್ದುಲ್ಲಾಹ್ ಬಿನ್ ಮಳ್'ಗೂನ್ 41 ಅಬ್ದುಲ್ಲಾಹ್ ಬಿನ್ ಖೈಸ್ 42 ಖುನೈಸ್ ಬಿನ್ ಹುದಾಫ 43 ಅಸ್ಮಾ ಬಿಂತ್ ಸಿದ್ದೀಕ್ 44 ಸಲೀತ್ವ್ ಬಿನ್ ಅಮ್ರ್ 45 ಇಬ್ನ್ ಖುಸೈಮತುಲ್ ಖಾರ್ರ 46 ಉತ್ಬತ್ ಬಿನ್ ಮಸ್'ವೂದ್ 47 ಅಮ್ರ್ ಬಿನ್ ಅಬಸ 48 ಅಮೀರ್ ಬಿನ್ ರಬಿಅ ಅಲ್ ಅನಸಿ 49 ಅಬೂದರ್ ಅಲ್ ಗಿಫಾರಿ 50 ಮಾಸಿಲ್ ಬಿನ್ ಮಾಲಿಕ್ 51 ಹಾತ್ವಿಬ್ ಬಿನ್ ಅಲ್ ಹಾರಿಸ್ 52 ಜಅ್'ಫರ್ ಬಿನ್ ಅಬೀತ್ವಾಲಿಬ್ 53 ಅಸ್ಮಾ ಬಿಂತ್ ಉಮೈಸ್ 54 ಅಬ್ದುಲ್ಲಾಹ್ ಬಿನ್ ಜಹ್'ಶ್ 55 ಅನೀಸ್ ಬಿನ್ ಜುನಾದ ಅಲ್ ಗಿಫಾರಿ 56 ಅಲ್ ಮತ್ವಲಿಬ್ ಬಿನ್ ಅಝ್'ಹರ್ 57 ಸಾಇಬ್ ಬಿನ್ ಉಸ್ಮಾನ್ 58 ಖತ್ವಾಬ್ ಬಿನ್ ಅಲ್ ಹಾರಿಸ್ 59 ಮಅ್'ಮರ್ ಬಿನ್ ಅಲ್'ಹಾರಿಸ್ 60 ಫಾತ್ವಿಮ ಬಿಂತ್ ಮುಜಲ್ಲಲ್ 61 ಅಬೂ ಹುದೈಫತ್ ಬಿನ್ ಅಲ್ ಮುಗೀರ 62 ಹಾತ್ವಿಬ್ ಬಿನ್ ಉಮರ್ 63 ಇಬ್'ನು ಮುಲೈಹ್ 64 ನುಐಮ್ ಬಿನ್ ಅಬ್'ದಿಲ್ಲಾಹ್ 65 ರಂಲ ಬಿಂತ್ ಅಬೀ ಔಫ್ 66 ಖಾಲಿದ್ ಬಿನ್ ಬುಕೈರ್ 67 ಆಮಿರ್ ಬಿನ್ ಬುಕೈರ್ 68 ಮಸ್'ವೂದ್ ಬಿನ್ ಅಲ್ ಖಾರಿ 69 ಇಯಾಸ್ ಬಿನ್ ಅಬ್ದುಯಾಲಿಲ್ 70 ವಾಖಿದ್ ಬಿನ್ ಅಬ್'ದಿಲ್ಲಾಹ್ 71 ಆಖಿಲ್ ಬಿನ್ ಬುಕೈರ್ 72 ಅಸ್'ಮಾಅ್ ಬಿಂತ್ ಸಲಾಮಃ 73 ಫಕ್'ಹ ಬಿಂತು ಯಸಾರ್ ರಲಿಯಲ್ಲಾಹು ಅನ್'ಹುಂ....
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment