Abu Hisham Saquafi

Official Website Of Hafiz Ilyas Saquafi Padaladka

Thursday, August 11, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -58 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

    ಪ್ರವಾದಿಯವರು ﷺ ಹಾಗೂ ಅಲಿಯವರು (ರ) ಆರಂಭಿಕ ಹಂತದಲ್ಲಿ ಮಾಡಿದ್ದ ಆರಾಧನೆಯ ಕುರಿತು ತಿಳಿಯೋಣ. ಆ ಘಟನೆಯನ್ನು ಉದ್ದೇಶಿಸಿ ಯಮನಿನಿಂದ ವ್ಯಾಪಾರಕ್ಕಾಗಿ ಮಕ್ಕಾ ನಗರಕ್ಕೆ ಬಂದಿದ್ದ, ಅಫೀಫ್ ಅಲ್ ಕಿಂದಿಯವರು ಈ ರೀತಿ ವಿವರಿಸುತ್ತಾರೆ. ನಾನು ಒಮ್ಮೆ ಪವಿತ್ರವಾದ ಹಜ್ಜ್ ಸಂದರ್ಭದಲ್ಲಿ ಮಕ್ಕಾ ನಗರಕ್ಕೆ ತಲುಪಿದ್ದೆನು. ಅಬ್ಬಾಸ್'ರವರ ಜೊತೆಯಲ್ಲಿ ವ್ಯಾಪಾರ ವಹಿವಾಟು ಮಾಡುತಿದ್ದ ಕಾರಣ ಅವರ ಜೊತೆಯಲ್ಲೇ ಇರುತಿದ್ದನು. ಅವರು ಕೂಡ ವ್ಯಾಪಾರಕ್ಕಾಗಿ ಯಮನಿಗೆ ಬಂದಾಗ ನನ್ನ ಜೊತೆಯಲ್ಲೇ ಇರುತಿದ್ದರು. ಒಂದು ದಿನ ನಾವು ಮಿನ ಎನ್ನುವ ಸ್ಥಳದಲ್ಲಿ ಕುಳಿತಿದ್ದೆವು. ಅಷ್ಟೊತ್ತಿಗೆ ಒಬ್ಬ ಯುವಕ ತಮ್ಮ ಡೇರೆಯಿಂದ ಹೊರಗೆ ಬಂದು ಮಧ್ಯಾಹ್ನ ಆಗಿದ್ದನ್ನು ಖಚಿತ ಪಡಿಸಿ ನಮಾಝ್ ಆರಂಭಿಸಿದರು. ಸ್ವಲ್ಪ ಸಮಯದ ನಂತರ ಒಂದು ಯುವತಿ ಬಂದು, ಅವರ ಹಿಂದೆ ನಿಂತು ನಮಾಝ್ ಮುಂದುವರಿಸಿದರು. ತಕ್ಷಣವೇ ಒಬ್ಬ ಹದಿಹರೆಯದ ಬಾಲಕ ಕೂಡ ಬಂದು ಅವರ ಜೊತೆಯಲ್ಲಿ ಸೇರಿ ಕೊಂಡನು. ನಾನು ಅಬ್ಬಾಸನ್ನು ಕರೆದು, ಆ ಕಾಣುವ ವ್ಯಕ್ತಿ ಯಾರು.? ಅವರು ಮಾಡುತ್ತಿರುವುದು ಏನು.? ಎಂದು ಕೇಳಿದೆನು. ಅದಕ್ಕೆ ಅಬ್ಬಾಸ್, ಮೊದಲು ಹೊರಗೆ ಬಂದದ್ದು ನನ್ನ ಅಣ್ಣ ಅಬ್ದುಲ್ಲಾಹ್'ರ ಮಗನಾದ ಮುಹಮ್ಮದ್ ﷺ ಆಗಿರುವರು. ನಂತರ ಬಂದದ್ದು ಖುವೈಲಿದ್'ರ ಮಗಳಾದ, ಮುಹಮ್ಮದರ ﷺ ಪತ್ನಿ ಖದೀಜ (ರ) ಎಂದು ಹೇಳಿದಾಗ, ಆ ಹುಡುಗ ಯಾರು.? ಎಂದು ಕೇಳಿದೆನು. ಅದು ನನ್ನನ್ನು ಅಣ್ಣ ಅಬೂತ್ವಾಲಿಬರ ಮಗನಾದ ಅಲಿ (ರ), ಅವರು ಮಾಡುತ್ತಿರುವುದು ನಮಾಝ್ ಆಗಿದೆ. ಹಾಗೂ ಮುಹಮ್ಮದ್ ﷺ ತಾನೊಬ್ಬ ಪ್ರವಾದಿ ಆಗಿರುವೆನು ಎಂದಾಗಿದೆ ಹೇಳುತ್ತಿರುವುದು, ಸದ್ಯಕ್ಕೆ ಅವರನ್ನು ಒಪ್ಪಿಕೊಂಡಿರುವುದು ಅವರಿಬ್ಬರು ಮಾತ್ರ. ಆದರೆ ಈಗ, ಭವಿಷ್ಯದಲ್ಲಿ ಕಿಸ್ರಾ, ಕೈಸರಿನ ನಿಧಿಗಳನ್ನೂ ಕೂಡ ವಶಪಡಿಸಿಕೊಳ್ಳುವೆವು ಎಂದಾಗಿದೆ ಹೇಳುತ್ತಿರುವುದು. 

     ನಂತರದ ದಿನಗಳಲ್ಲಿ ಅಫೀಫ್ ಇಸ್ಲಾಮ್ ಸ್ವೀಕರಿಸಿದ್ದರು. ಅಂದು ಅವರೊಂದು ಮಾತನ್ನು ಹೇಳಿದ್ದರು, ನಾನು ನತದೃಷ್ಟ ಅಲ್ಲದೆ ಇನ್ನೇನು. ಅಂದೇ ನಾನೂ ಕೂಡ ಇಸ್ಲಾಮ್ ಸ್ವೀಕರಿಸಿದಿದ್ದರೆ ಅಲಿಯ (ರ) ನಂತರ ಸ್ವೀಕರಿಸಿದ ವ್ಯಕ್ತಿ ನಾನಾಗುತ್ತಿದ್ದೆ. 
       ಅಲಿಯವರು (ರ) ಇಸ್ಲಾಮ್ ಸ್ವೀಕರಿಸಿದ ವಿಶೇಷತೆಯನ್ನು ತಿಳಿಸುವ ಮತ್ತೊಂದು ಘಟನೆಯನ್ನು ತಿಳಿಯೋಣ. ಆ ಘಟನೆಯನ್ನು ಉಮರ್'ರವರು (ರ) ಈ ರೀತಿ ವಿವರಿಸುತ್ತಾರೆ. ನಾನೂ ಅಬೂಬಕ್ಕರ್, ಅಬೂ ಉಬೈದ (ರ) ಹಾಗೂ ಮುಂತಾದ ಹಲವಾರು ಜನರ ಒಂದು ಗುಂಪು ಪ್ರವಾದಿಯವರ ಬಳಿ ಕುಳಿತಿದ್ದೆವು. ಅಷ್ಟರಲ್ಲಿ ಅಲಿಯವರು (ರ) ಅಲ್ಲಿಗೆ ಆಗಮಿಸಿದಾಗ, ಪ್ರವಾದಿಯವರು ﷺ ಅಲಿಯವರ ಹೆಗಲನ್ನು ತಟ್ಟುತ್ತಾ ಈ ರೀತಿ ಹೇಳಿದರು. ಓ ಅಲೀ.. ನೀವಾಗಿರುತ್ತೀರಿ, ವಿಶ್ವಾಸಿಗಳಲ್ಲಿ ಮೊದಲನೇ ವ್ಯಕ್ತಿ. ನೀವು ಮಾತ್ರ ಆಗಿರುತ್ತೀರಿ ಮುಸ್ಲಿಮರಲ್ಲಿ ಒಂದನೇ ವ್ಯಕ್ತಿ, ಮೂಸ (ಅ) ಪ್ರವಾದಿಯವರಿಗೆ ಹಾರೂನ್'ರವರು (ಅ) ಇದ್ದ ಹಾಗೆ ಆಗಿದೆ, ನೀವು ಕೂಡ ನನಗೆ ಇರುವುದು. 

      ನಾಳೆ ಪರಲೋಕದಲ್ಲಿ ಪ್ರವಾದಿಯವರ ﷺ ಜೊತೆಯಲ್ಲಿ ಕೌಸರ್ ಪಾನೀಯದ ಬಳಿ ಮೊದಲು ತಲುಪುವುದು, ಮೊದಲು ವಿಶ್ವಾಸವಿರಿಸಿದ ವ್ಯಕ್ತಿಗಳಾಗಿರುವರು. ಈ ಭಾಗ್ಯವಿರುವ ವ್ಯಕ್ತಿ ಅಲಿಯಾಗಿದ್ದಾರೆ (ರ) ಎಂದು ಸಲ್ಮಾನುಲ್ ಫಾರಿಸ್'ರವರು (ರ) ಹೇಳುತ್ತಿದ್ದರು. ಇಬ್'ನು ಅಬ್ಬಾಸ್ ಉಲ್ಲೇಖಿಸಿದ ಹದೀಸಿನಲ್ಲಿ ಈ ರೀತಿ ಕಾಣಬಹುದು. ಒಮ್ಮೆ ಪ್ರವಾದಿಯವರು ﷺ ಇತಿಹಾಸದಲ್ಲಿ ಮೊದಲು ಒಪ್ಪಿಕೊಂಡದ್ದು ಮೂರು ಜನ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಿದ್ದರು. ಅವರು ಯಾರೆಂದರೆ, ಪ್ರವಾದಿ ಮೂಸರನ್ನು (ಅ) ಒಪ್ಪಿಕೊಂಡ ಯೂಶಅ ಬಿನ್ ನೂನ್ ಎಂಬ ವ್ಯಕ್ತಿ, ಈಸ (ಅ) ಪ್ರವಾದಿಯವರನ್ನು ಒಪ್ಪಿಕೊಂಡ ಹಬೀಬುನ್ನಜ್ಜಾರ್ (ಸ್ವಾಹಿಬ್ ಯಾಸೀನ್) ಎನ್ನುವ ವ್ಯಕ್ತಿ ಹಾಗೂ ನನ್ನನ್ನು ಒಪ್ಪಿಕೊಂಡ ವ್ಯಕ್ತಿ ಅಲಿ (ರ) ಆಗಿರುವರು ಎಂದು ಹೇಳಿದ್ದರು. 
     ಪ್ರವಾದಿಯವರ ﷺ ಜೊತೆಗಿನ ನಿರಂತರವಾದ ಸಂಪರ್ಕ ಅಲಿಯವರನ್ನು (ರ) ಜ್ಞಾನ ಸಂಪತ್ತಾಗಿ ಬದಲಾಯಿಸಿತ್ತು. ವಿಜ್ಞಾನ ಗೋಪುರದ ದಾರಿಯನ್ನಾಗಿಸಿತ್ತು. ಎಲ್ಲಾ ಸಂಕಷ್ಟದ ಸಂದರ್ಭಗಳಲ್ಲೂ ಪ್ರವಾದಿಯವರ ﷺ ಜೊತೆಯಲ್ಲೇ ನಿಂತು, ಅವರ ಸಂಪೂರ್ಣ ಜೀವನವನ್ನೇ ಪ್ರವಾದಿಯವರಿಗಾಗಿ ﷺ ತ್ಯಾಗಮಾಡಿದ್ದರು. 

    ಆಧ್ಯಾತ್ಮಿಕ ಚಿಂತನೆಯಲ್ಲೂ, ಆರಾಧನೆ ಕ್ರಮಗಳಲ್ಲೂ, ನಿಖರವಾದ ಶಿಸ್ತುಗಳನ್ನು ಪ್ರವಾದಿಯವರ ﷺ ಜೀವನದಿಂದ ಕಲಿತುಕೊಂಡಿದ್ದರು. ಪ್ರವಾದಿಯವರ ﷺ ಪ್ರೀತಿಯ ಮಗಳಾದ ಫಾತಿಮರನ್ನು (ರ) ವಿವಾಹವಾಗುವ ಮೂಲಕ, ಪ್ರವಾದಿಯವರ ﷺ ಅಳಿಯ ಕೂಡ ಆಗಿಬಿಟ್ಟರು. ಪ್ರವಾದಿಯವರ ﷺ ಸಂತಾನ ಪರಂಪರೆಯ ತಂದೆ ಎನ್ನುವ ಪದವಿಯನ್ನು ಅಲಂಕರಿಸಿದಾಗ, ಸಾಕು ಮಗನಿಂದ ಸ್ವಂತ ಮಗನ ಸ್ಥಾನಕ್ಕೆ ತಲುಪಿದರು. ಇತಿಹಾಸದಲ್ಲೇ ಅಲಿಯವರು ಬಹಳಷ್ಟು ಪದವಿಗಳನ್ನು ತಮ್ಮದಾಗಿಸಿಕೊಂಡಿದ್ದರು. 

     ಅಲಿಯವರ (ರ) ಬಾಲ್ಯ, ಯೌವನ, ದಾಂಪತ್ಯ ಜೀವನ ಎಲ್ಲವೂ ಕಳೆದದ್ದು ಪ್ರವಾದಿಯವರ ﷺ ನಿರೀಕ್ಷಣೆಯಲ್ಲಿ ಮಾತ್ರವಾಗಿತ್ತು. ಪ್ರವಾದಿಯವರು ﷺ ಅಲಿಯವರನ್ನು (ರ) ನೋಡಿಕೊಳ್ಳುವ ಜವಾಬ್ದಾರಿ ಎತ್ತಿಕೊಂಡಾಗ, ಅಬ್ಬಾಸ್'ರವರು ಜಅಫರನ್ನು ನೋಡಿಕೊಳ್ಳುವ ಜವಾಬ್ದಾರಿ ಎತ್ತಿಕೊಂಡಿದ್ದರು. ಜಅಫರ್ ಕೂಡ ಆರಂಭಿಕ ಹಂತದಲ್ಲೇ ಇಸ್ಲಾಮ್ ಸ್ವೀಕರಿಸಿದ್ದರು. ತನ್ನ ಇಬ್ಬರು ಮಕ್ಕಳು ಕೂಡ ಪ್ರವಾದಿಯವರ ﷺ ಜೊತೆಯಲ್ಲೇ ಇರಬೇಕು ಎಂಬುವುದು ಅಬೂತ್ವಾಲಿಬರ ಆಗ್ರಹವಾಗಿತ್ತು. ಅದಕ್ಕಾಗಿ ಅವರಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದರು. "ಉಸ್'ದುಲ್ ಗಾಬ" ಎಂಬ ಗ್ರಂಥದಲ್ಲಿರುವ ಒಂದು ಘಟನೆಯು ಈ ರೀತಿಯಾಗಿದೆ. ಒಮ್ಮೆ ಅಲಿ (ರ) ಹಾಗೂ ಪ್ರವಾದಿಯವರು ﷺ ಜೊತೆಯಲ್ಲಿ ನಮಾಝ್ ಮಾಡುತಿದ್ದರು, ಆ ಸಂದರ್ಭದಲ್ಲಿ ಅಬೂತ್ವಾಲಿಬರು ಜಅಫರನ್ನು ಕರೆದುಕೊಂಡು ಬಂದರು. ನಂತರ ಜಅಫರಲ್ಲಿ, ನಿಂತು ನೋಡದೆ ನೀನೂ ಕೂಡ ಅವರ ಜೊತೆಯಲ್ಲಿ ಸೇರಿ ನಮಾಜ್ ಮಾಡು ಎಂದು ಹೇಳಿದರು. ಅದೇ ರೀತಿ ಜಅಫರ್ ಕೂಡ ಅವರ ಜೊತೆಯಲ್ಲಿ ಸೇರಿ ನಮಾಝ್ ಮಾಡಿದರು. 

    (ಮುಂದುವರಿಯುತ್ತದೆ...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: