Abu Hisham Saquafi

Official Website Of Hafiz Ilyas Saquafi Padaladka

Sunday, August 14, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -60 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

       ಉಸ್ಮಾನ್ (ರಲಿಯಲ್ಲಾಹು ಅನ್'ಹು):
ಅಬೂಬಕ್ಕರ್'ರವರು (ರ) ಪ್ರವಾದಿಯವರ ﷺ ಜೊತೆಯಲ್ಲಿ ಯಾವಾಗಲೂ ನೆರಳಿನ ಹಾಗೆ ಇರುತ್ತಿದ್ದರು. ಪ್ರವಾದಿಯವರ ﷺ ಜೀವನದ ಪ್ರತಿಯೊಂದು ವಿಷಯದಲ್ಲೂ ಅದರ ಪ್ರಾರಂಭದಲ್ಲೇ ಇರುತ್ತಿದ್ದರು. ಅವರ ಬಗ್ಗೆ ಮತ್ತೆ ಚರ್ಚಿಸೋಣ, ಈಗ ನಾವು ಉಸ್ಮಾನ್'ರವರ (ರ) ಕುರಿತು ತಿಳಿಯೋಣ.
     ಆರಂಭ ಘಟ್ಟದಲ್ಲೇ ಇಸ್ಲಾಂ ಸ್ವೀಕರಿಸಿದ ಪ್ರಮುಖರಲ್ಲಿ ಒಬ್ಬರಾಗಿದ್ದರು ಉಸ್ಮಾನ್ ಬಿನ್ ಅಫ್ಫಾನ್'ರವರು (ರ). ಆರಂಭಿಕ ಘಟ್ಟದಲ್ಲಿ ಇಸ್ಲಾಮ್ ಸ್ವೀಕರಿಸಿದ ನಾಲ್ಕು ಜನರಲ್ಲಿ ನಾನು ನಾಲ್ಕನೆ ವ್ಯಕ್ತಿ ಆಗಿರುವೆನು ಎಂದು ಅವರು ಆಗಾಗ ಹೇಳುತ್ತಿದ್ದರು. ಉಸ್ಮಾನ್'ರವರು (ರ) ಇಸ್ಲಾಂ ಸ್ವೀಕರಿಸಿದ್ದ ಘಟನೆಯ ಕುರಿತು ಒಂದು ಉಲ್ಲೇಖವು ಹೀಗೆ ತಿಳಿಸುತ್ತದೆ. ಉಸ್ಮಾನ್'ರವರು ಕಅಬಾದ ನೆರಳಿನಲ್ಲಿ ಕುಳಿತು ಕೊಂಡಿದ್ದರು. ಆ ಸಂದರ್ಭದಲ್ಲಾಗಿತ್ತು, ಪ್ರವಾದಿಯವರ ﷺ ಮಗಳಾದ ರುಖಿಯ್ಯ (ರ) ಹಾಗೂ ಅಬೂಲಹಬಿನ ಮಗನಾದ ಉತ್'ಬರಿಗೂ ವಿವಾಹದ ನಡೆದ ವಿಷಯವು ತಿಳಿಯುವುದು. ಅದ್ವಿತೀಯ ಸುಂದರಿಯಾಗಿದ್ದ ರುಖಿಯರನ್ನು (ರ) ತಾನು ಮದುವೆಯಾಗಬೇಕೆಂದು ಬಹಳ ಆಸೆ ಪಟ್ಟಿದ್ದರು. ಆ ಕಾರಣದಿಂದ ಈ ವಾರ್ತೆಯು ಅವರ ಕಿವಿಗೆ ಬಿದ್ದಾಗ ಬಹಳ ಬೇಸರ ಪಟ್ಟಿದ್ದರು. ಉತ್'ಬರ ಮುಂಚೆಯೇ ನಾನು ವಿವಾಹ ಪ್ರಸ್ತಾವನೆ ನಡೆಸಬೇಕಿತ್ತೇನೋ ಎಂದು ತನ್ನಲ್ಲೇ ಹೇಳಿಕೊಂಡು, ಸ್ವಲ್ಪ ಸಮಯದ ಬಳಿಕ ತನ್ನ ಮನೆಯ ಕಡೆಗೆ ನಡೆದರು. ಅವರ ಮುಖ ಭಾವವನ್ನು ಕಂಡ ಅವರ ಅತ್ತೆ ಸಅದ ಬಿಂತ್ ಕುರೈಸ್ ವಿಷಯವನ್ನು ಕೇಳಿ ತಿಳಿದುಕೊಂಡರು. ಅವರಿಗೆ ಜೋತಿಷ್ಯ ವಿದ್ಯೆ ತಿಳಿದಿತ್ತು. ಅವರು ಉಸ್ಮಾನ್'ರವರ ಬಳಿ ಬಂದು, ನೀನೊಬ್ಬ ಭಾಗ್ಯಶಾಲಿ ಆಗಿರುವೆ, ಬಹಳಷ್ಟು ಅದೃಷ್ಟಗಳು ನಿನ್ನನ್ನು ಹುಡುಕಿ ಬರಲಿದೆ, ಸುಂದರಿಯಾದ ಆ ಪುಷ್ಪವು ನಿನಗೆ ಸಿಗಲಿದೆ, ಪುಣ್ಯ ಪುರುಷನ ಮಗಳಾಗಿರುವಳು ಅವಳು ಎಂದು ಹೇಳಿದರು. ಅದನ್ನು ಕೇಳಿದ ಉಸ್ಮಾನ್'ರವರು ಇದೇನು ಹೇಳುತ್ತಿದ್ದೀರಿ ನೀವು ಎಂದು ತಿರುಗಿ ಅವರಲ್ಲೇ ಕೇಳಿದರು. 

       ಅದೇ ಪ್ರೀತಿಯ ಮಗನೇ, ಮುಹಮ್ಮದ್'ರು ﷺ ಅಲ್ಲಾಹುವಿನ ಪ್ರವಾದಿಯಾಗಿರುವರು, ಸತ್ಯ ಸಂದೇಶವಾಹಕರಾಗಿರುವರು. ಸಾಕ್ಷಿಗಾಗಿ ಅವರು ತನ್ನ ಜೊತೆಯಲ್ಲಿ, ಸತ್ಯವನ್ನೂ, ಅಸತ್ಯವನ್ನು ಬಹಳ ಸ್ಪಷ್ಟವಾಗಿ ತಿಳಿಸುವ ಗ್ರಂಥದ ಜೊತೆಯಲ್ಲಾಗಿದೆ ಅವರು ಬಂದಿರುವುದು. ನೀನು ಆ ಪ್ರವಾದಿಯವರ ﷺ ಬಳಿ ಹೋಗಿ ಬಾ, ಅದಕ್ಕೆ ಆ ವಿಗ್ರಹಗಳು ನಿನಗೆ ಅಡಚಣೆ ಮಾಡದೆ ಇರಲಿ ಎಂದು ಹೇಳಿದಾಗ, ಇದೆಲ್ಲವೂ ಈ ಊರಿನ ವಿಷಯವೇ ಅಲ್ವೆ.? ಎಂದು ಉಸ್ಮಾನ್ ಕೇಳಿದರು.
      ಅದಕ್ಕೆ ಸಅ್'ದ ಎಲ್ಲವನ್ನೂ ವಿವರಿಸ ತೊಡಗಿದರು. ಅಬ್ದುಲ್ಲಾಹ್'ರ ಮಗನಾದ ಮುಹಮ್ಮದ್'ರು ಅಲ್ಲಾಹನು ನಿಯೋಗಿಸಿದ ಪ್ರವಾದಿಯಾಗಿರುವರು. ಅವರು ಆಹ್ವಾನಿಸುತ್ತಿರುವುದು ಅಲ್ಲಾಹುವಿನ ಧರ್ಮಕ್ಕಾಗಿದೆ, ಎಂದು ಹೀಗೆ ಹಲವಾರು ವಿಶೇಷತೆಗಳನ್ನು ವಿವರಿಸಿ ಕೊಟ್ಟರು.
      ಅವರು ಹೇಳಿದ ವಿಷಯಗಳನ್ನು ಆಲೋಚಿಸುತ್ತಾ ಮುಂದೆ ನಡೆಯುತ್ತಾ ಹೋಗುತ್ತಿರುವಾಗ, ಅಬೂಬಕ್ಕರ್'ರವರ (ರ) ಭೇಟಿಯಾದರು. ಎಲ್ಲಾ ವಿಷಯಗಳನ್ನು ಅವರಲ್ಲಿ ತಿಳಿಸಿದಾಗ, ಅಬೂಬಕ್ಕರ್'ರವರು ಈ ರೀತಿ ಹೇಳಿದರು. ಉಸ್ಮಾನ್ ನಿಮಗೂ ಕೂಡ ಪರಿಚಯ ಇರುವ ವ್ಯಕ್ತಿಯೇ ಅಲ್ಲವೇ ಅವರು, ನೀವೊಮ್ಮೆ ಸ್ವತಃ ಆಲೋಚಿಸಿರಿ ಈ ಆರಾಧಿಸುವ ಮೂರ್ತಿಗಳೆಲ್ಲವೂ ಕಲ್ಲುಗಳಲ್ಲವೇ.? ಒಳಿತಾಗಲಿ, ಕೆಡುಕಾಗಲಿ ಮಾಡದೆ, ಕಾಣಲೋ, ಕೇಳಲೋ ಸಾಧ್ಯವಾಗದ ಕೇವಲ ಕಲ್ಲುಗಳಲ್ಲವೇ ಅದು, ಎಂದು ಹೇಳಿದಾಗ. ಉಸ್ಮಾನ್'ರವರು ಅದು  ಹೌದು ಎಂದು ಉತ್ತರಿಸಿದರು. ಅಬೂಬಕ್ಕರ್ (ರ) ಮುಂದುವರಿಸುತ್ತಾ, ನಿಮ್ಮ ಅತ್ತೆ ಹೇಳಿದ್ದು ಸತ್ಯವಾಗಿದೆ. ಮುಹಮ್ಮದರು ﷺ ಪ್ರವಾದಿತ್ವದ ಘೋಷಣೆ ಈಗಾಗಲೇ ಮಾಡಿದ್ದಾರೆ, ನಾವೊಮ್ಮೆ ಹೋಗಿ ಅವರನೊಮ್ಮೆ ಭೇಟಿಯಾಗೋಣ ಎಂದು ಹೇಳಿದರು. ಅದಕ್ಕೆ ಉಸ್ಮಾನ್ ಕೂಡ ಸಮ್ಮತಿಸಿದರು. ನಂತರ ಇಬ್ಬರೂ ಜೊತೆಯಲ್ಲಿ ಪ್ರವಾದಿಯವರ ﷺ ಸನ್ನಿಧಿಗೆ ತಲುಪಿದರು. ಪ್ರವಾದಿಯವರು ﷺ ಉಸ್ಮಾನ್'ರವರಲ್ಲಿ, ಓ ಉಸ್ಮಾನ್ ನಾನು ನಿಮ್ಮನ್ನೆಲ್ಲರನ್ನೂ ಅಲ್ಲಾಹುವಿನ ಬಳಿ ಆಹ್ವಾನಿಸಲು ನಿಯೋಗಿಸಿದ ಪ್ರವಾದಿಯಾಗಿರುತ್ತೇನೆ. ಹಾಗಾಗಿ ನೀವು ಅಲ್ಲಾಹುವಿನ ಆಮಂತ್ರಣವನ್ನು ಸ್ವೀಕರಿಸಿರಿ ಎಂದು ಹೇಳಿದ್ದೇ ತಡ, ಉಸ್ಮಾನ್'ರವರು ತಕ್ಷಣವೇ ಇಸ್ಲಾಮ್ ಸ್ವೀಕರಿಸಿದರು.

     ಪ್ರವಾದಿಯವರ ನಂಬಿಕಸ್ಥ ಅನುಯಾಯಿಯಾಗಿ ಬದಲಾದರು. ಕೆಲವು ದಿನಗಳ ನಂತರ ವಿವಾಹದ ಒಪ್ಪಂದ ಕಳೆದು ಜೊತೆಯಲ್ಲಿ ಜೀವಿಸುದಕ್ಕೂ ಮುಂಚೆಯೇ ಉತ್'ಬ, ರುಖಿಯರವರಿಗೆ(ರ) ವಿಚ್ಛೇದನ ನೀಡಿದರು. ಪ್ರವಾದಿಯವರು ರುಖಿಯರನ್ನು (ರ) ಉಸ್ಮಾನ್'ರಿಗೆ (ರ) ಮದುವೆ ಮಾಡಿ ಕೊಟ್ಟರು. ರುಖಿಯರ (ರ) ಮರಣದ ನಂತರ ಉಮ್ಮುಕುಲ್'ಸುವನ್ನು (ರ) ಕೂಡ ಉಸ್ಮಾನ್'ರಿಗೆ ಮದುವೆ ಮಾಡಿ ಕೊಟ್ಟರು. ಪ್ರವಾದಿಯವರಿಗೆ ﷺ ಅವರಲ್ಲಿದ್ದ ಪ್ರೀತಿಯ ಕಾರಣವಾಗಿತ್ತು ಅದು. ಉಸ್ಮಾನ್'ರವರು (ರ) ಇಸ್ಲಾಂ ಸ್ವೀಕರಿಸಿದ ಕಾರಣ ಬಹಳಷ್ಟು ತೊಂದರೆಗಳನ್ನು ಎದುರಿಸಿದ್ದರು. ಉಸ್ಮಾನ್'ರವರು (ರ) ತನ್ನ ಸಂಪತ್ತುಗಳೆಲ್ಲವನ್ನು ನಂತರದ ಕಾಲದಲ್ಲಿ ಇಸ್ಲಾಮಿನ ಅವಶ್ಯಕತೆಗಳಿಗಾಗಿ ಬಳಸಿದರು.

      (ಮುಂದುವರಿಯುವುದು...) 

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: