ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಸೇವಕಿಯು ನಡೆದ ಎಲ್ಲಾ ಘಟನೆಯನ್ನು ವಿವರಿಸಿದಳು. ಅದನ್ನು ಕೇಳಿದ ಹಂಝರ ◌ؓ ಕೋಪವು ನೆತ್ತಿಗೇರಿತು. ಅವರು ನೇರವಾಗಿ ಮಸ್ಜಿದಿಗೆ ಲಕ್ಷ್ಯವಿಟ್ಟು ಹೆಜ್ಜೆ ಹಾಕಿದರು. ಅಬೂಜಹಲ್ ತನ್ನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಾ ಕುಳಿತಿದ್ದನು. ಅವನ ಬಳಿ ಹೋದ ಹಂಝರವರು, ◌ؓ ತಮ್ಮ ಕೈಯಲ್ಲಿದ್ದ ಬಿಲ್ಲಿನಿಂದ ಅವನ ತಲೆಗೊಂದು ಏಟು ಕೊಟ್ಟು ಸಿಟ್ಟಿನಿಂದ, ನೀನು ಮುಹಮ್ಮದ್'ರನ್ನು ﷺ ನಿಂದಿಸುತ್ತೀಯ.? ಸರಿಯಾಗಿ ಕೇಳು ಈಗ ನಾನು ಕೂಡ ಅವರ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ. ನಿನಗೆ ತಾಕತ್ತಿದ್ದರೆ ನನ್ನನ್ನು ಎದುರಿಸು ನೋಡೋಣ.! ಎಂದು ಹೇಳಿದರು. ಅದನ್ನು ಕೇಳಿದ ತಕ್ಷಣವೇ ಅಬೂಜಹಲಿನ ಸಂಬಂಧಿಕರಾದ ಬನೂಮಖ್'ಸೂಗಳು ಅವರನ್ನು ಎದುರಿಸಲು ಮುಂದಾದಾಗ, ಅಬೂಜಹಲ್ ಅವರನ್ನು ತಡೆದು ನಿಲ್ಲಿಸಿ, ಅವರನ್ನು ಬಿಟ್ಟು ಬಿಡಿ. ಅವರ ಸಿಟ್ಟಿನಲ್ಲೂ ಅರ್ಥವಿದೆ, ನಾನು ಅವರ ಅಣ್ಣನ ಮಗನನ್ನು ಬಹಳಷ್ಟು ನಿಂದಿಸಿದ್ದೇನೆ ಎಂದು ಹೇಳಿದನು.
ನಂತರ ಅಲ್ಲಿಂದ ಮನೆಕಡೆ ಹೊರಟಿದ್ದ ಹಂಝರಲ್ಲಿ ◌ؓ ಬಹಳಷ್ಟು ಜನರು ಬಂದು, ನೀವು ಕೂಡ ಆ ಸಾಬಿಯಿಗಳ ಧರ್ಮವನ್ನು ಸೇರುತಿದ್ದೀರಾ.? ಖುರೈಷಿಗಳ ನಾಯಕರಾದ ನೀವು ತಮ್ಮ ಪೂರ್ವಿಕರನ್ನು ವಿರೋಧಿಸುತ್ತಿದ್ದೀರ.? ಅದಕ್ಕಿಂತ ಸಾಯುವುದೇ ಒಳ್ಳೆಯದು ಅಲ್ವಾ.? ಎಂದು ಹೇಳುತ್ತಿದ್ದ ಚುಚ್ಚುಮಾತುಗಳು, ಹಂಝರವರ ◌ؓ ಮನಸ್ಸಿಗೆ ನಾಟಿತ್ತು. ನಂತರದ ದಿನಗಳಲ್ಲಿ ಹಂಝರವರು ◌ؓ ಈ ಘಟನೆಯ ಕುರಿತು, ನಾನು ಅವತ್ತಿನ ದಿನ ಅನುಭವಿಸಿದಷ್ಟು ನೋವು ಯಾವತ್ತೂ ಉಂಟಾಗಿರಲಿಲ್ಲ. ಪಿಶಾಚಿಯೂ ನನ್ನನ್ನು ದಾರಿ ತಪ್ಪಿಸುವ ಹಲವಾರು ಯೋಚನೆಗಳನ್ನು ನನ್ನ ತಲೆಯಲ್ಲಿ ಹಾಕಿದ್ದವು, ಕೊನೆಗೆ ನಾನು ಅಲ್ಲಾಹನಲ್ಲಿ ನಾನು ಸ್ವೀಕರಿಸಿದ ದಾರಿ ಸತ್ಯವಾದ ಧರ್ಮವಾಗಿದ್ದರೆ.? ನನ್ನ ಮನಸ್ಸಿನಲ್ಲಿ ಅದರ ವಿಶ್ವಾಸವನ್ನು ಗಟ್ಟಿಗೊಳಿಸಬೇಕು. ಇಲ್ಲದಿದ್ದರೆ ಸರಿಯಾದ ದಾರಿಯನ್ನು ತೋರಿಸಿ ಕೊಡಬೇಕು ಎಂದು ಪ್ರಾರ್ಥಿಸಿದೆನು. ಮರು ದಿನ ಪ್ರವಾದಿಯವರ ﷺ ಬಳಿ ತೆರಳಿ, ನಾನು ಬಹಳಷ್ಟು ಗೊಂದಲದಲ್ಲಿದ್ದೇನೆ, ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಯವಿಟ್ಟು ನನ್ನನ್ನು ಸಮಾಧಾನ ಪಡಿಸಿರಿ ಎಂದು ವಿನಮ್ರವಾಗಿ ಹೇಳಿದೆನು. ಪ್ರವಾದಿಯವರು ﷺ ನನಗೆ ಇಸ್ಲಾಮಿನ ಸುಂದರ ಆದರ್ಶಗಳನ್ನು ಸಂಪೂರ್ಣವಾಗಿ ವಿವರಿಸಿ ಕೊಟ್ಟರು. ಅದನ್ನು ಕೇಳಿದ ನಂತರ ನನ್ನ ಮನಸ್ಸಿನಲ್ಲಿ ಇಸ್ಲಾಮ್ ಬಲವಾಗಿ ಬೇರೂರಿತು. ನಂತರ ನಾನು ಅವರಲ್ಲಿ, ನಿಜವಾಗಿಯೂ ನೀವು ಅಲ್ಲಾಹನ ಸಂದೇಶವಾಹಕರೇ ಆಗಿರುವಿರಿ, ನಾನೂ ಇನ್ನೂ ಕೂಡ ಅದೇ ಹಳೆಯ ಧರ್ಮವನ್ನು ಸ್ವೀಕರಿಸಿದರೆ ಆಕಾಶದಿಂದ ಲಭಿಸುವ ಯಾವುದೇ ಅನುಗ್ರಹವನ್ನೂ ಅನುಭವಿಸಲು, ನನಗೆ ಅರ್ಹತೆ ಇರಲಾರದು ಎಂದು ಹೇಳಿದೆನು. ಹಂಝರವರು ◌ؓ ತಮ್ಮ ಆದರ್ಶವನ್ನು ಗಟ್ಟಿಗೊಳಿಸಿ, ಪ್ರವಾದಿಯವರ ﷺ ಜೊತೆಯಲ್ಲೇ ನಿಂತರು. ಇದರೊಂದಿಗೆ ಶತ್ರುಗಳ ಎಲ್ಲಾ ಕುತಂತ್ರವೂ ಕೂಡ ಮಣ್ಣು ಪಾಲಾಯಿತು. ಧೀರನೂ ಪರಾಕ್ರಮಿಯೂ ಆದ ಹಂಝರವರು ◌ؓ ಪ್ರವಾದಿಯವರ ﷺ ಜೊತೆ ಸೇರಿರುತ್ತಾರೆ, ಎನ್ನುವ ಸತ್ಯವು ಎಲ್ಲರಿಗೂ ಅರ್ಥ ಆಗಿತ್ತು.
ಹಂಝರವರು ◌ؓ ಇಸ್ಲಾಮ್ ಸ್ವೀಕರಿಸಿದ ಘಟನೆಯನ್ನು ನೆನೆಪಿಸುತ್ತಾ, ಪವಿತ್ರ ಕುರ್'ಆನಿನ ಅಲ್'ಫತ್'ಹ್ ಅಧ್ಯಾಯದ ಇಪ್ಪತ್ತಾರನೇ ಸೂಕ್ತವೂ ಅವತರಿಸಿತು. ಅದರ ಅನುವಾದವು ಈ ರೀತಿಯಾಗಿದೆ. "ಸತ್ಯ ನಿಷೇಧಿಗಳು ಅವರ ಮನಸ್ಸಿನಲ್ಲಿ, ಅಜ್ಞಾನ ತುಂಬಿದ ಸಮಯದಲ್ಲಿದ್ದ ದುರಾಭಿಮಾನಗಳನ್ನು ಎತ್ತಿಹಿಡಿದು ವಂಚಿಸಲು ಪ್ರಯತ್ನಿಸಿದಾಗ, ಅಲ್ಲಾಹನು ಅವನ ದೂತರ ಹಾಗೂ ಸತ್ಯ ವಿಶ್ವಾಸಿಗಳ ಮನಸ್ಸಿಗೆ ಸಮಾಧಾನ ನೀಡಿದನು. ಅವರನ್ನು ಬಯಭಕ್ತಿಯ ವಚನದ ಮೇಲೆ ಬದ್ಧರಾಗುವಂತೆ ಮಾಡಿದನು. ಏಕೆಂದರೆ ಅದಕ್ಕವರು ಅರ್ಹತೆ ಇರುವವರು ಆಗಿದ್ದರು, ಅಲ್ಲಾಹನು ಎಲ್ಲಾ ವಿಷಯಗಳನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ".
ಇಸ್ಲಾಂ ಸ್ವೀಕರಿಸಿದ ಹಂಝರವರು ◌ؓ ಅಭಿಮಾನದಿಂದ ಸುಂದರ ಕವಿತೆಯನ್ನು ಹೀಗೆ ಹಾಡಿದರು.
(ಹಮಿದ್ ತುಲ್ಲಾಹ್ ಹೀನ ಹದಾ ಫುಆದಿ...)
ಸೃಷ್ಟಿಕರ್ತನು ನನಗೆ ಇಸ್ಲಾಮನ್ನು ಅನುಗ್ರಹಿಸಿ ಕೊಟ್ಟನು
ಸತ್ಯ ದಾರಿ ತೋರಿಸಿದ ನಿನಗೆ ಸ್ತುತಿಸುತ್ತಿರುವೆನು ಒಡೆಯ
ಅಭಿಮಾನ ಪಡುತ್ತೇನೆ, ನೀನು ಸತ್ಯದ ದಾರಿ ತೋರಿಸಿದ್ದರಲ್ಲಿ
ಅವನು ಗುಲಾಮರಿಗೆ ಯಾವತ್ತೂ ಪರಿಹಾರ ನೀಡುತ್ತಲೇ ಇರುವನು .
ಅಲ್ಲಾಹನ ಸಂದೇಶವನ್ನು ತಿಳಿಸುವ ಜ್ಞಾನಿಯನ್ನು
ಹೃದಯದಲ್ಲಿ ಇರಿಸಿದರೆ ಆನಂದ ಭಾಷ್ಪವು ಹರಿಯುವುದು.
ಅಹ್'ಮದರ ﷺ ಸಂದೇಶವನ್ನು ಸ್ಪಷ್ಟವಾಗಿ ಉಲ್ಲೇಖಿಸಿದರೆ
ಮಾತು ಕೂಡ ಜಗಳವಾಡಿ, ಮೊಳಗಿಸುತ್ತದೆ ವ್ಯಂಜನಾಕ್ಷರಗಳನ್ನು.
ಹಿಂಬಾಲಿಸುವರು ಜನರು ಅಹ್'ಮದ್ ಮುಸ್ತಫರನ್ನು ﷺ
ಅದನ್ನು ತಡೆಯಲು ಸಾಧ್ಯವಿಲ್ಲ ದುರ್ಬಲ ಮಾತುಗಳಿಂದ .
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment