ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರವಾದಿತ್ವದ ಘೋಷಣೆಯಾಗಿ ಹನ್ನೊಂದು ವರ್ಷ ಕಳೆಯಿತು. ಒಂದು ರಜಬ್ ಇಪ್ಪತ್ಟೇಳರ ರಾತ್ರಿಯಾಗಿತ್ತು ಅದು. ಪ್ರಭೋಧನೆಯ ದಾರಿಯಲ್ಲಿ ಚಲಿಸುತ್ತಿದ್ದ ಪ್ರವಾದಿಯವರು ﷺ ಎದುರಿಸಿದ ನೋವುಗಳಿಗೆ, ಅಪಹಾಸ್ಯಗಳಿಗೆ ಸಮಾಧಾನ ಪಡಿಸುವ ನಿಟ್ಟಿನಲ್ಲಿ ಪ್ರವಾದಿಯವರಿಗೆ ﷺ ಲಭಿಸಿದ ಅಂಗೀಕಾರದ ರಾತ್ರಿಯಾಗಿತ್ತು ಅದು. ಅಥವಾ ಪ್ರವಾದಿಯವರನ್ನು ﷺ ಅತ್ಯುತ್ತಮ ಸ್ಥಳಕ್ಕೆ ಕರಿಸಿಕೊಂಡು, ಜಗತ್ ಪಾಲಕನಾದ ಅಲ್ಲಾಹನೊಂದಿಗೆ ವಿಶೇಷವಾಗಿ ಸಂಭಾಷಣೆ ನಡೆಸಿದ ಇಸ್'ರಾಅ್, ಮಿಅ್'ರಾಜ್'ನ ಆ ಪವಿತ್ರ ಕ್ಷಣವಾಗಿತ್ತು ಅದು.
ಮಕ್ಕಾದಿಂದ ಬೈತುಲ್ ಮುಖದ್ದಸ್'ವರೆಗೆ ರಾತ್ರಿ ನಡೆಸಿದ ಸಂಚಾರಕ್ಕಾಗಿತ್ತು ಇಸ್'ರಾಅ್ ಎಂದು ಹೇಳುವುದು. ಪವಿತ್ರ ಕುರ್'ಆನಿನ ಹದಿನೇಳನೇ ಅಧ್ಯಾಯದ ಹೆಸರು ಕೂಡ ಇಸ್'ರಾಅ್ ಎಂದೇ ಆಗಿದೆ. ಈ ಅಧ್ಯಾಯದ ಆರಂಭದ ಸೂಕ್ತದಲ್ಲಿ ತಿಳಿಸುವುದೇ, ಪ್ರವಾದಿಯವರು ﷺ ನಡೆಸಿದ ರಾತ್ರಿ ಸಂಚಾರದ ಕುರಿತಾಗಿತ್ತು. ಅದರ ಸಾರಾಂಶ ಈ ರೀತಿಯಾಗಿದೆ, "ಒಂದು ರಾತ್ರಿಯಲ್ಲಿ ತನ್ನ ವಿಶೇಷವಾದ ದಾಸನನ್ನು, ಮಸ್'ಜಿದುಲ್ ಹರಾಮಿನಿಂದ, ಸುತ್ತಮುತ್ತಲಿನಲ್ಲಿ ಪವಿತ್ರತೆ ತುಂಬಿ ತುಳುಕುವ ಮಸ್ಜಿದುಲ್ ಅಖ್'ಸಾಗೆ ರಾತ್ರಿ ಸಂಚಾರ ನಡೆಸಿದವನು ಎಷ್ಟೊಂದು ಉತ್ತಮನು" ಎಂದು. ಬೈತುಲ್ ಮುಖದ್ದಸ್'ನಿಂದ ಆಕಾಶಲೋಕಕ್ಕೆ ನಡೆಸಿದ ಪ್ರಯಾಣವಾಗಿತ್ತು ಮಿಅ್'ರಾಜ್. ಪವಿತ್ರ ಕುರ್'ಆನಿನ ಅನ್ನಜ್'ಮ್ ಅಧ್ಯಾಯದ, ಒಂದರಿಂದ ಹದಿನೆಂಟರವರೆಗಿನ ಸೂಕ್ತಗಳಲ್ಲಿ ಈ ಘಟನೆಯ ಬಗ್ಗೆ ವಿವರಿಸಲಾಗಿದೆ.
ಪ್ರವಾದಿಯವರ ﷺ ಜೀವನದಲ್ಲಿ ಉಂಟಾದ ವಿಶಿಷ್ಟವಾದ ಈ ಘಟನೆಯ ಬಗ್ಗೆ ಪ್ರಮಾಣಗಳು ಸಮೇತವಾಗಿ, ಬಹಳಷ್ಟು ಕಡೆಗಳಲ್ಲಿ ಉಲ್ಲೇಖಿತವಾಗಿದೆ. ಪ್ರವಾದಿಯವರು ﷺ, ತಮ್ಮ ದೊಡ್ಡಪ್ಪ ಅಬೂತ್ವಾಲಿಬರ ಮಗಳಾದ, ಉಮ್ಮುಹಾನಿ ಎಂದು ಪ್ರಸಿದ್ಧಿ ಪಡೆದ, ಹಿಂದ್'ರ ಮನೆಯಲ್ಲಾಗಿತ್ತು ಇದ್ದದ್ದು. ಎಲ್ಲರೂ ನಿದ್ರಿಸಿದ ನಂತರ, ಜಿಬ್'ರೀಲ್'ರವರು (ಅ) ಬಂದು ಪ್ರವಾದಿಯವರನ್ನು ﷺ ಭೇಟಿಯಾದರು. ಈ ಘಟನೆಯ ಕುರಿತಾಗಿ ಅಬೂದರ್ರ್'ರವರು ◌ؓ ಉಲ್ಲೇಖಿಸಿದ ಹದೀಸನ್ನು, ಪ್ರವಾದಿಯವರು ﷺ ಹೇಳಿರುವುದಾಗಿ, ಅನಸ್'ರವರು ◌ؓ ಹೇಳುವುದು ಕಾಣಬಹುದು. ನಾನು ಮನೆಯಲ್ಲಿದ್ದಾಗ, ಮನೆಯ ಮೇಲ್ಛಾವಣಿಯ ಸಣ್ಣ ಅಂತರದ ಮೂಲಕ ಪ್ರತ್ಯಕ್ಷರಾದ ಜಿಬ್'ರೀಲ್'ರವರು ◌ؓ ನನ್ನ ಬಳಿ ಬಂದು, ನನ್ನ ಎದೆಯ ಭಾಗವನ್ನು ತೆರೆದು, ಝಮ್'ಝಮ್ ನೀರಿನಿಂದ ನನ್ನ ಹೃದಯವನ್ನು ತೊಳೆದ ನಂತರ, ಒಂದು ಚಿನ್ನದ ಬಟ್ಟಲಿನಲ್ಲಿ ತುಂಬಿದ್ದ ವಿಶ್ವಾಸ ಹಾಗೂ ತಂತ್ರವನ್ನು (ಈಮಾನ್ ಹಾಗೂ ಹಿಕ್'ಮತ್) ನನ್ನ ಹೃದಯಕ್ಕೆ ತುಂಬಿದರು. ತಕ್ಷಣವೇ ನನ್ನ ಎದೆಯು ಯಥಾ ಸ್ಥಿತಿಗೆ ಮರಳಿತು. ನಂತರ ನನ್ನ ಕೈ ಹಿಡಿದು ಮಕ್ಕಾದಿಂದ ಬೈತುಲ್ ಮುಖದ್ದಸ್'ಗೆ ಯಾತ್ರೆ ಮಾಡಲು, ಆಕಾಶಕ್ಕೆ ಹಾರಿ ಬುರಾಖ್ ಎಂಬ ವಾಹನದ ಬಳಿ ಕರೆದುಕೊಂಡು ಹೋದರು. ಗಾತ್ರದಲ್ಲಿ ಕೇವರ್ ಕತ್ತೆಗಿಂತಲೂ ಸಣ್ಣದಾಗಿ, ಸಾಮಾನ್ಯ ಕತ್ತೆಗಿಂತ ದೊಡ್ಡದಾದ ಜೀವಿಯಾಗಿತ್ತು ಅದು. ಮಿಂಚು ಎನ್ನುವ ಅರ್ಥವನ್ನು ಸೂಚಿಸುವ "ಬರಕ" ಎಂಬ ಅರಬಿ ಪದದಿಂದ, ಮಿಂಚಿನ ವೇಗದಲ್ಲಿ ಸಂಚರಿಸುವ ವಾಹನಕ್ಕೆ "ಬುರಾಖ್" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಎಂದು ಹೇಳಿದ ಬಹಳಷ್ಟು ಜನರಿದ್ದಾರೆ. ಗತಕಾಲದ ಪ್ರವಾದಿಗಳು ಕೂಡ ಸಂಚರಿಸುತ್ತಿದ್ದ ವಾಹನವಾಗಿತ್ತು ಅದು. ಪ್ರವಾದಿ ಇಬ್ರಾಹಿಂ'ರವರು (ಅ) ಮಕ್ಕಾನಗರಕ್ಕೆ ಸಂಚರಿಸುತ್ತಿದ್ದ ವಾಹಣವೂ ಕೂಡ ಇದೆ ಆಗಿತ್ತು ಎಂದು, ಕೆಲವೊಂದು ಉಲ್ಲೇಖಗಳಲ್ಲಿ ಕಾಣಲು ಸಾಧ್ಯವಿದೆ.
ಕೆಲವೇ ಕೆಲವು ನಿಮಿಷದಲ್ಲಿ, ಅತೀ ವೇಗವಾಗಿ ಒಂದೊಂದು ಹೆಜ್ಜೆಯನ್ನು ಇಡುತ್ತಾ ಬುರಾಖ್ ಮಕ್ಕಾದಿಂದ ಬೈತುಲ್ ಮುಖದ್ದಸಿಗೆ ತಲುಪಿತು. ಯಾತ್ರೆಯ ನಡುವೆ ಬಹಳಷ್ಟು ವಿಸ್ಮಯಕಾರಿ ಸ್ಥಳಗಳಿಗೆ ಭೇಟಿ ನೀಡಿದರು. ಹೆಬ್ರೋನ್, ಬತ್'ಲಹೆಮನ್ನು ಕೂಡ ವೀಕ್ಷಿಸಿ, ಪ್ರವಾದಿ ಮೂಸರವರು (ಅ) ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದ ಕೆಂಪು ಗುಡ್ಡದ ಹಾದಿಯಲ್ಲಿ ಸಂಚರಿಸುತ್ತಿದ್ದಾಗ, ಮೂಸ ಪ್ರವಾದಿಯವರು (ಅ) ಖಬರಿನ ಒಳಗಿನಿಂದ ನಮಾಝ್ ಮಾಡುತಿದ್ದ ದೃಶ್ಯವನ್ನು ಕಾಣಲು ಸಾಧ್ಯವಾಗಿತ್ತು. ಗತಕಾಲದ ಪ್ರವಾದಿಗಳ, ಹಾಗೂ ಅವರ ಅನುಯಾಯಿಗಳ ನೆನಪುಗಳನ್ನು ತರಿಸುವಂತಹ ಬಹಳಷ್ಟು ವಸ್ತುಗಳನ್ನು ಕೂಡ ವೀಕ್ಷಿಸಿದರು. ಯಾತ್ರೆಯ ಮದ್ಯೆ ಕೆಲವೊಂದು ವಿಶಿಷ್ಟವಾದ ಸ್ಥಳಗಳಿಗೆ ತಲುಪಿದಾಗ, ಪ್ರವಾದಿಯವರು ﷺ, ಜಿಬ್'ರೀಲ್'ರ ಸೂಚನೆಯಂತೆ ಅಲ್ಲಿ ಇಳಿದು ನಮಾಝ್ ಮಾಡುತಿದ್ದರು. ಪಲಾಯನ ಮಾಡಿ ತಲುಪಬೇಕಾದ ತ್ವೈಬ ಅಥವಾ ಮದೀನದಲ್ಲೂ ಕೂಡ ಇಳಿದು ನೋಡಿದರು. ಕೆಲವೊಂದು ಶಿಕ್ಷೆಯನ್ನು ಅನುಭವಿಸುತ್ತಿದ್ದಾ ದೃಶ್ಯಗಳನ್ನೂ, ಅದೇ ರೀತಿ ಗತಕಾಲದ ಮಹಾನ್ ವ್ಯಕ್ತಿಗಳು ಅನುಭವಿಸುತ್ತಿದ್ದ ಅನುಗ್ರಹಗಳನ್ನು ಕೂಡ ಜಿಬ್'ರಲರು (ಅ) ತೋರಿಸಿ, ಅವುಗಳ ಬಗ್ಗೆಯೂ ವಿವರಿಸುತ್ತಿದ್ದರು.
ಬೈತುಲ್ ಮುಖದ್ದಸಿಗೆ ತಲುಪಿದಾಗ, ಗತಕಾಲದ ಪ್ರವಾದಿಗಳೆಲ್ಲರೂ, ಪ್ರವಾದಿ ಪೈಗಂಬರ್'ರವರ ﷺ ಸ್ವಾಗತಕ್ಕಾಗಿ ಅಲ್ಲಿ ನೆರೆದಿದ್ದರು. ಮೊದಲು ಪ್ರವಾದಿಯವರು ﷺ ಹಾಗೂ ಜಿಬ್'ರೀಲರು ಮಾತ್ರ ಒಟ್ಟಿಗೆ ನಮಾಝ್ ಮಾಡಿ ನಂತರ ಎಲ್ಲಾ ಪ್ರವಾದಿಗಳ ಜೊತೆಯಲ್ಲಿ ಇಮಾಮಾಗಿ (ಜಂಟಿಯಾಗಿ ) ನಮಾಝ್ ಮಾಡಿದರು.
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
No comments:
Post a Comment