Abu Hisham Saquafi

Official Website Of Hafiz Ilyas Saquafi Padaladka

Saturday, August 20, 2022

ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ || ಭಾಗ -66 || ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ 
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು

  ಮಕ್ಕಾದಲ್ಲಿ ದಿವಸಗಳು ಕಳೆಯುತ್ತಾ ಹೋದಂತೆ ಪ್ರವಾದಿಯವರ ﷺ ಪ್ರಭೋಧನೆಯು ಬಹಳಷ್ಟು ಚರ್ಚೆಯಾಗ ತೊಡಗಿತು. ಪ್ರವಾದಿಯವರು ﷺ ಹಾಗೂ ಅವರ ಅನುಯಾಯಿಗಳು ಬಹಳ ರಹಸ್ಯವಾಗಿಯೇ ಆರಾಧನೆಗಳನ್ನು ಮಾಡುತ್ತಿದ್ದರೂ, ಜನರು ಮಾತ್ರ ಇಸ್ಲಾಮಿಗೆ ಆಕರ್ಷಿತರಾಗುತ್ತಲೇ ಇದ್ದರು. ಪ್ರವಾದಿಯವರು ﷺ ಅರ್'ಖಂ ಬಿನ್ ಅಲ್'ಖಮಿನ ಮನೆಯಲ್ಲಿ ಅಥವಾ 'ದಾರುಲ್ ಅರ್'ಖಮ್' ಎನ್ನುವ ಮನೆಯನ್ನು ಕೇಂದ್ರವಾಗಿರಿಸಿ ಪ್ರಭೋಧನೆ ಮಾಡುತಿದ್ದರು. ಕಅಬಾಲಯದಿಂದ ಕೇವಲ ನೂರ ಮೂವತ್ತು ಮೀಟರ್ ದೂರದಲ್ಲಿರುವ ಸ್ವಫ ಪರ್ವತಕ್ಕೆ ಸಮೀಪವಾಗಿಯಾಗಿತ್ತು ಈ ಮನೆ ಇರುವುದು. 

      ಸುಮಾರು ಮೂವತ್ತೆಂಟು ಜನರು ಇಸ್ಲಾಮ್ ಸ್ವೀಕರಿಸಿ, ಸತ್ಯ ವಿಶ್ವಾಸಿಗಳ ಸಾಲಿನಲ್ಲಿ ಸೇರಿಕೊಂಡಾಗ, ಅಬೂಬಕ್ಕರ್'ರವರು ◌ؓ ಪ್ರವಾದಿಯವರಲ್ಲಿ ﷺ ನಾವು ಇಸ್ಲಾಮನ್ನು ಸಾರ್ವಜನಿಕವಾಗಿ ಘೋಷಣೆ ಮಾಡಿದರೆ ಹೇಗೆ.? ಎಂದು ಕೇಳಿದರು. ಅದಕ್ಕೆ ಪ್ರವಾದಿಯವರು ﷺ, ಓ ಅಬೂಬಕ್ಕರ್'ರವರೇ ◌ؓ ನಾವು ಬೆರಳೆಣಿಕೆಯಷ್ಟು ಜನರು ಮಾತ್ರವಲ್ಲವೇ ಇರುವುದು ಎಂದು ಹೇಳಿದರು. ಆದರೆ ಅಬೂಬಕ್ಕರ್'ರವರು ◌ؓ ಸಾರ್ವಜನಿಕವಾಗಿ ಘೋಷಣೆ ಮಾಡಲು ಬಹಳ ಹಾತೊರೆಯುತಿದ್ದರು. ಹಾಗಾಗಿ ಅವರು ಪದೇ ಪದೇ ಬಂದು ಪ್ರವಾದಿಯವರಲ್ಲಿ ﷺ ತಮ್ಮ ಆಗ್ರಹವನ್ನು ತಿಳಿಸುತ್ತಲೇ ಇದ್ದರು. ಕೊನೆಗೆ ಪ್ರವಾದಿಯವರು ದಾರುಲ್ ಅರ್'ಖಮಿನಿಂದ ಹೊರಗೆ ಬಂದರು. ಪ್ರವಾದಿಯವರ ﷺ ಅನುಯಾಯಿಗಳು ಮಸ್ಜಿದ್'ನ ಸುತ್ತಮುತ್ತಲಿನಲ್ಲಿ ನಿಂತಿದ್ದರು, ಅಷ್ಟೊತ್ತಿಗೆ ಅಬೂಬಕ್ಕರ್'ರವರು ◌ؓ ಆಗಮಿಸಿದರು. ತಕ್ಷಣವೇ ಭಾಷಣ ಮಾಡಲು ತಯಾರಾಗಿ ನಿಂತರು.  ಇಸ್ಲಾಮಿನ ಮೊದಲ ಭಾಷಣವಾಗಿತ್ತು ಅದು. ಪ್ರವಾದಿಯವರು ﷺ ಸ್ವಲ್ಪ ದೂರದಲ್ಲಿ ಕುಳಿತು ಕೇಳುತಿದ್ದರು. ಅಬೂಬಕ್ಕರ್'ರವರು ◌ؓ ಜನರಿಗೆ ಅಲ್ಲಾಹನ ಬಳಿ, ಅವನ ಸಂದೇಶ ವಾಹಕರ ಬಳಿ ಆಹ್ವಾನ ನೀಡಲು ಆರಂಭಿಸಿದರು. ಅದನ್ನು ಕೇಳಿದ ಅವಿಶ್ವಾಸಿಗಳಾದ ಜನರು ಒಟ್ಟಾಗಿ ಸೇರಿ ಅವರ ಮೇಲೆ ದಾಳಿ ನಡೆಸಿದರು, ಕಾಲಿನಿಂದ ತುಳಿಯಲು ಆರಂಭಿಸಿದರು. ಇದರ ನಡುವೆ ಉತ್'ಬ ಬಿನ್ ರಬೀಅ ಎನ್ನುವ ದುಷ್ಟನು ತನ್ನ ಆಣಿ ಚುಚ್ಚಿದ್ದ ಚಪ್ಪಲಿಯಿಂದ ಮುಖಕ್ಕೆ ಹೊಡೆದಾಗ, ಮೂಗಿನ ಮೇಲೆ ಗಾಯ ಆಗಿ ಬಿಟ್ಟಿತು. ಅಷ್ಟರಲ್ಲೇ ಅಬೂಬಕ್ಕರ್'ರವರ ◌ؓ ಜನಾಂಗದ ಜನರೆಲ್ಲರೂ ಸ್ಥಳಕ್ಕೆ ಆಗಮಿಸಿದರು. ಬಹುಶಃ ಈ ಹಲ್ಲೆಯಿಂದ ಅಬೂಬಕ್ಕರ್ ◌ؓ ಸಿದ್ದೀಕ್'ರವರು ಮರಣ ಹೊಂದಬಹುದೋನೋ ಎನ್ನುವ ಆತಂಕ ಎಲ್ಲರಿಗೂ ಉಂಟಾಯಿತು. ಪ್ರಜ್ಞೆ ತಪ್ಪಿ ಬಿದ್ದ ಅಬೂಬಕ್ಕರ್'ರವರನ್ನು ◌ؓ ಒಂದು ಬಟ್ಟೆಯಲ್ಲಿ ಸುತ್ತಿ ಮನೆಗೆ ಕೊಂಡು ಹೋದರು. ಬಹುಶಃ ಈ ಹಲ್ಲೆಯಿಂದ ಅಬೂಬಕ್ಕರ್'ರವರ ◌ؓ ಮರಣ ಉಂಟಾದರೆ, ಖಂಡಿತ ನಾವು ಉತ್'ಬನನ್ನು ಕೊಲೆ ಮಾಡುತ್ತೇವೆ ಎಂದು ಬನೂ ತೈಂ ಘೋಷಣೆ ಮಾಡಿದರು. 

   ಅಬೂಬಕ್ಕರ್'ರವರ ◌ؓ ತಂದೆ ಅಬೂಖುಹಾಫ ಹಾಗೂ ಅವರ ಸಂಬಂಧಿಕರೆಲ್ಲರೂ, ಅವರಿಗೆ ಪ್ರಜ್ಞೆ ಬರುವುದನ್ನು ಕಾಯುತ್ತಾ ಕುಳಿತರು. ಸಂಜೆಯ ವೇಳೆಗೆ ಅಬೂಬಕ್ಕರ್'ರವರು ಮೆಲ್ಲನೆ ತಮ್ಮ ಕಣ್ಣು ತೆರದರು. ಕಣ್ಣು ತೆರೆದ ಕೂಡಲೇ ಅಬೂಬಕ್ಕರ್'ರವರು ◌ؓ ಕೇಳಿದ್ದು ಪ್ರವಾದಿಯವರು ﷺ ಹೇಗಿದ್ದಾರೆ.? ಎಂದಾಗಿತ್ತು. ಇದನ್ನು ಕಂಡ ಸಂಬಂಧಿಕರು ಆಶ್ಚರ್ಯದಿಂದ ನೋಡುತ್ತಾ, ಎಲ್ಲರೂ ಅಬೂಬಕ್ಕರ್'ರವರನ್ನು ◌ؓ  ಗದರಿಸ ತೊಡಗಿದರು. (ಈಗಲೂ ಪ್ರವಾದಿಯವರ ﷺ ಕುರಿತು ಕೇಳುತಿದ್ದೀರಿ ಅಲ್ವಾ ಎಂದು) ಅವರು ಅಬೂಬಕ್ಕರ್'ರವರ ◌ؓ ತಾಯಿ, ಉಮ್ಮುಲ್ ಖೈರ್'ರವರಲ್ಲಿ, ನೀವು ಅಬೂಬಕ್ಕರಿಗೆ ◌ؓ ಏನಾದರೂ ತಿನ್ನಲು ಆಹಾರ ನೀಡಿರಿ ಎಂದು ಹೇಳಿದಾಗ, ಅವರ ತಾಯಿ ಹತ್ತಿರ ಹೋದರು. ತಕ್ಷಣವೇ ಅಬೂಬಕ್ಕರ್'ರವರು ◌ؓ  ತಾಯಿಯಲ್ಲೂ ಕೂಡ ಪ್ರವಾದಿಯವರಿಗೆ ﷺ ಏನಾಯಿತು ಎಂದು ಕೇಳಿದರು. ನನಗೆ ಏನು ಗೊತ್ತಿಲ್ಲ ಮಗನೇ ಎಂದು ಹೇಳುತ್ತಾ, ಪಾನೀಯ ಕುಡಿಯಲು ಒತ್ತಾಯಿಸಿದಾಗ, ಅಮ್ಮ ನೀವು ಉಮರಿನ ಸಹೋದರಿಯಾದ ಉಮ್ಮು ಜಮೀಲರ ಬಳಿಯೊಮ್ಮೆ ಹೋಗಿ ಕೇಳಿ ಬರುತ್ತೀರ.? ಎಂದು ಹೇಳಿದಾಗ, ತಾಯಿ ಅಲ್ಲಿಂದ ಹೊರಟರು. ಉಮ್ಮು ಜಮೀಲರ ಬಳಿ ಅಬೂಬಕ್ಕರ್ ◌ؓ ಹುಡುಕುತ್ತಿರುವ ಮುಹಮ್ಮದ್'ರ ﷺ ಕುರಿತು ನಿಮಗೆ ತಿಳಿದಿದಿಯೇ.? ಎಂದು ಕೇಳಿದಾಗ, ನನಗೆ ಅಬೂಬಕ್ಕರ್ ◌ؓ ಕೂಡ ಗೊತ್ತಿಲ್ಲ, ಮುಹಮ್ಮದ್ ﷺ ಕೂಡ ಗೊತ್ತಿಲ್ಲ, ನಿಮಗೆ ಇಷ್ಟವಿದ್ದರೆ ನಿಮ್ಮ ಜೊತೆಯಲ್ಲೇ ಬರುತ್ತೇನೆ ಎಂದು ಹೇಳಿ, ಅವರ ಜೊತೆಯಲ್ಲೇ ಹೊರಟರು. ಅಬೂಬಕ್ಕರ್'ರವರನ್ನು ◌ؓ  ಕಂಡಾಗ, ನಿಮ್ಮ ಮೇಲೆ ಹಲ್ಲೆ ಮಾಡಿದವರು ಕ್ರೂರಿಗಳು, ರಕ್ಕಸರು ಆಗಿರುತ್ತಾರೆ. ಅವರು ಇನ್ನೂ ಕೂಡ ಖಂಡಿತ ನಿಮಗೆ ಹಲ್ಲೆ ಮಾಡುವರು ಎಂದು ಉಮ್ಮು ಜಮೀಲ ಹೇಳಿದಾಗಲೂ, ಅಬೂಬಕ್ಕರ್'ರವರು ◌ؓ  ಕೇಳಿದ್ದು ಪ್ರವಾದಿಯವರು ﷺ ಹೇಗಿದ್ದಾರೆ ಎಂದಾಗಿತ್ತು. ಅದಕ್ಕೆ ಜಮೀಲ ನಿಮ್ಮ ತಾಯಿಗೆ ಕೇಳುತ್ತದೆ ಎಂದು ಹೇಳಿದರು. (ಆಗಲೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದೂ, ಈಗ ಈ ರೀತಿ ಹೇಳಿದ್ದು ಎಲ್ಲವೂ, ಇಸ್ಲಾಮ್ ಸ್ವೀಕರಿಸದ ತಾಯಿಗೆ ಅವರ ರಹಸ್ಯ ತಿಳಿಯಬಾರದು ಎನ್ನುವ ಉದ್ದೇಶದಿಂದಾಗಿತ್ತು.) ಅದು ಪರವಾಗಿಲ್ಲ ನೀವು ಹೇಳಿ ಎಂದು ಹೇಳಿದಾಗ, ಪ್ರವಾದಿಯವರಿಗೆ ﷺ ಏನು ಆಗಿಲ್ಲ. ಅವರು ಸುರಕ್ಷಿತವಾಗಿ ದಾರುಲ್ ಅರ್'ಖಮಿನಲ್ಲಿ ಇದ್ದಾರೆ ಎಂದು ಉಮ್ಮು ಜಮೀಲ ಹೇಳಿದರು. ಅಲ್ಲಾಹನ ಮೇಲಾಣೆ ಇನ್ನೂ ಪ್ರವಾದಿಯವರನ್ನು ﷺ ಕಂಡ ನಂತರವೇ, ನಾನು ಅನ್ನ ನೀರು ಕುಡಿಯುವುದು ಎಂದು ಹಠ ಹಿಡಿದರು. 

     ಜೊತೆಯಲ್ಲಿರುವವರು  ಅಬೂಬಕ್ಕರ್'ರವರನ್ನು  ◌ؓ  ಸಮಾಧಾನ  ಪಡಿಸಿದರು. ನಂತರ ಅಬೂಬಕ್ಕರ್'ರವರು ◌ؓ ತಾಯಿಯ ಭುಜಕ್ಕೆ ಹೊರಗಿ ಪ್ರವಾದಿಯವರ ﷺ ಸನ್ನಿಧಿಗೆ ಬಂದು ಬಿಟ್ಟರು. ಅಬೂಬಕ್ಕರ್'ರವರನ್ನು ◌ؓ ಕಂಡ ತಕ್ಷಣವೇ ಪ್ರವಾದಿಯವರು ﷺ ಹೊರಗೆ ಬಂದು ಗಟ್ಟಿಯಾಗಿ ಅಪ್ಪಿಕೊಂಡು, ಕಣ್ಣೀರು ಸುರಿಸುತ್ತಾ ಚುಂಬಿಸಿದರು. ಅಲ್ಲಿದ್ದ ಇತರ ಸತ್ಯವಿಶ್ವಾಸಿಗಳು ಕೂಡ ಕಣ್ಣೀರು ಸುರಿಸುತ್ತಾ ಅಪ್ಪಿಕೊಂಡು, ಚುಂಬಿಸಿದರು. ತಕ್ಷಣವೇ ಅಬೂಬಕ್ಕರ್'ರವರು, ◌ؓ ನನ್ನ ತಂದೆ ತಾಯಿಗಿಂತ ನಾನು ಹೆಚ್ಚು ಪ್ರೀತಿಸುವ ಪ್ರವಾದಿಯವರೇ ﷺ ನನಗೆ ಏನೂ ಆಗಲಿಲ್ಲ. ಅವರು ನನ್ನ ಮುಖಕ್ಕೆ ಹೊಡೆದು ಗಾಯ ಮಾಡಿದರು ಅಷ್ಟೇ, ಅದು ಪರವಾಗಿಲ್ಲ. ಇದು ನನ್ನ ತಾಯಿ ಉಮ್ಮುಲ್ ಖೈರ್. ಅವರಿಗೆ ಮಗನ ಮೇಲೆ ತುಂಬಾ ಮಮಕಾರ ಇದೆ, ನೀವು ನನ್ನ ತಾಯಿಯನ್ನು ನರಕಾಗ್ನಿಯಿಂದ ರಕ್ಷಣೆ ಮಾಡಬೇಕು. ಎಂದು ಹೇಳಿದರು. ಪ್ರವಾದಿಯವರು ﷺ ಅವರಿಗೆ ಬೇಕಾಗಿ ಪ್ರಾರ್ಥನೆ ನಡೆಸಿದರು. ನಂತರ ಅವರನ್ನೂ ಕೂಡ ಇಸ್ಲಾಮಿಗೆ ಆಹ್ವಾನಿಸಿದರು. ಅವರೂ ಕೂಡ ಇಸ್ಲಾಮ್ ಸ್ವೀಕರಿಸಿದರು. 

      (ಮುಂದುವರಿಯುವುದು...)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments: