ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರವಾದಿಯವರು ﷺ ಖುರ್'ಆನ್ ಪಠಿಸಿದ ನಂತರ, ಉತ್'ಬಃ ಪ್ರವಾದಿಯವರಲ್ಲಿ , ನನಗೆ ಹೇಳಲಿಕ್ಕಿರುವುದನ್ನು ನಾನು ಹೇಳಿದನು. ಇನ್ನೂ ನಿಮ್ಮ ಇಷ್ಟದಂತೆ ಮಾಡಿ, ಇದಲ್ಲದೆ ಇನ್ನೇನಾದರೂ ಹೇಳಲಿಕ್ಕಿದೆಯೇ.? ಎಂದು ಉತ್'ಬಃ ಕೇಳಿದಾಗ ಪ್ರವಾದಿಯವರು ﷺ ಇಲ್ಲ ಎಂದು ಉತ್ತರಿಸಿದರು.
ಉತ್'ಬಃ ಅಲ್ಲಿಂದ ಹೊರಟು ಹೋದರು, ಆದರೆ ತನ್ನನ್ನು ನಿಯೋಗಿಸಿದ ಖುರೈಷಿಗಳ ಬಳಿ ಹೋಗಿರಲಿಲ್ಲ. ಅದಕ್ಕೆ ಅಬೂಜಹಲ್ ಇತರ ಗೆಳೆಯರೊಂದಿಗೆ, ಉತ್'ಬಃ ಮುಹಮ್ಮದ್'ರ ﷺ ಬಲೆಯಲ್ಲಿ ಬಿದ್ದನೋ.? ಎಂದು ಅನಿಸುತ್ತದೆ. ಬಹುಶಃ ಒಳ್ಳೆಯ ಊಟೋಪಚಾರ ಮಾಡಿ ಒಳ್ಳೆಯ ಆತಿಥ್ಯ ನೀಡಿರಬೇಕು, ಹಾಗಾಗಿ ಅವರ ಬಲೆಯಲ್ಲಿ ಬಿದ್ದರಬೇಕು. ಇಲ್ಲದಿದ್ದರೆ ನೇರವಾಗಿ ಇಲ್ಲಿಗೆ ಬರಬೇಕಿತ್ತಲ್ವಾ.? ಸರಿ ನಾವೊಮ್ಮೆ ನೋಡಿ ಬರೋಣ ಎಂದು ಹೇಳಿದಾಗ, ಅವನ ಜೊತೆಯಲ್ಲಿದ್ದವರೂ ಕೂಡ ಎದ್ದು ಅವನ ಜೊತೆಯಲ್ಲಿ ಉತ್'ಬರನ್ನು ಹುಡುಕುತ್ತಾ ನಡೆದರು. ಅವರ ಬಳಿ ತಲುಪಿದಾಗ, ಅಬೂಜಹಲ್ ಮುಂದೆ ಬಂದು, ನೀನು ಆ ಪ್ರವಾದಿಯವರ ﷺ ಬಲೆ ಬಿದ್ದು ಬಿಟ್ಟಿಯ ಹೇಗೆ.? ಅಥವಾ ಅವರು ನೀಡಿದ ಆತಿಥ್ಯ ನಿನ್ನನ್ನು ವಿಸ್ಮಯಗೊಳಿಸಿದಿಯ ಹೇಗೆ.? ನಿನ್ನ ಆಗ್ರಹ ಏನಂತ ಹೇಳು, ನಾವೆಲ್ಲರೂ ಚಂದಾ ವಸೂಲಿ ಮಾಡಿಯಾದ್ರು ನಿನಗೆ ಮೃಷ್ಟಾನ್ನ ಭೋಜನ ತಯಾರು ಮಾಡುತ್ತೇವೆ ಅಂದನು.
ಅದನ್ನು ಕೇಳಿದ ಉತ್'ಬರ ಕೋಪವು ನೆತ್ತಿಗೇರಿತು. ಅವರು ಶಪಥ ಮಾಡುತ್ತಾ ನಾನು ಇನ್ನೂ ಯಾವತ್ತೂ ಮುಹಮ್ಮದ್'ರಲ್ಲಿ ﷺ ಮಾತಾಡುದಿಲ್ಲ ಎಂದು ಹೇಳಿದನು. ಬಹುಶಃ ನೀವುಗಳು ನಾನೂ ಕೂಡ ಒಬ್ಬ ಶ್ರೀಮಂತ ವ್ಯಕ್ತಿ ಎನ್ನುವ ಸತ್ಯವನ್ನು ಮರೆತಿರುವ ಹಾಗೆ ಕಾಣುತ್ತಿದೆ ಎಂದು ಹೇಳುತ್ತಾ, ಅಲ್ಲಿ ನಡೆದ ಎಲ್ಲಾ ಘಟನೆಗಳನ್ನು ಸಂಪೂರ್ಣವಾಗಿ ವಿವರಿಸಿದರು. ಅದನ್ನು ಕೇಳಿದ ಜನರು ನೀವು ಅದಕ್ಕೆ ಏನೆಂದು ಉತ್ತರ ನೀಡಿದಿರಿ.? ಎಂದು ಕೇಳಿದಾಗ. ಮುಹಮ್ಮದ್'ರು ﷺ ಪಠಿಸಿದ ವಾಕ್ಯಗಳು ಬಹಳ ಸ್ಪಷ್ಟವಾಗಿತ್ತು ಆದರೆ ಅದರ ಅನುವಾದ ಮಾತ್ರ ನನಗೆ ಸ್ಪಷ್ಟವಾಗಿ ಅರ್ಥವಾಗಿಲ್ಲ. ಆದರೆ ಅವರು ಆದ್, ಸಮೂದ್, ಜನಾಂಗಕ್ಕೆ ಲಭಿಸಿದ ಹಾಗೆ ಕಠಿಣ ಶಿಕ್ಷೆ ಬರಬಹುದು ಎಂದು ಕೇಳಿದಾಗ, ಮಾತ್ರ ನಾನು ಅವರ ಬಾಯಿ ಮುಚ್ಚಲು ಪ್ರಯತ್ನ ಮಾಡಿದೆನು. ಕಾರಣ ನಿಮಗೆ ಗೊತ್ತಿದೆ ಅಲ್ಲವೇ ಮುಹಮ್ಮದ್'ರು ﷺ ಹೇಳಿದ ಒಂದೇ ಒಂದು ಮಾತು ಕೂಡ ಇವತ್ತಿನವರೆಗೂ ಸುಳ್ಳು ಆಗಲೇ ಇಲ್ಲ ಎಂದು. ಅವರೊಂದು ಮಾತು ಹೇಳಿದರೆ ಅದು ಖಂಡಿತ ವಾಸ್ತವವಾಗಿ ನಡೆದೇ ನಡೆಯುತ್ತದೆ ಎಂದು ಹೇಳಿದರು.
ಉತ್'ಬರ ಮಾತು ಕೇಳಿದ ಜನರು ಕೋಪದಿಂದ, ಇದೇನು ಹೇಳುತ್ತಿದ್ದೀರ.? ಅರಬಿ ಭಾಷೆಯಲ್ಲಿ ಹೇಳಿದ ವಾಕ್ಯಗಳು, ಒಬ್ಬ ಅರಬಿ ಪ್ರಜೆಯಾದ ನಿಮಗೆ ಅರ್ಥ ಆಗಿಲ್ವಾ.? ಎಂದು ಕೇಳಿದಾಗ. ಆ ವಾಕ್ಯಗಳನ್ನು ನಾನು ಗಮವಿಟ್ಟು ಕೇಳಿದ್ದೆ, ಅದೊಂದು ಕವಿತೆಯಾಗಲಿ, ವಾಮಾಚಾರವಾಗಲಿ, ಜ್ಯೋತಿಷ್ಯವಾಗಲಿ, ಆಗಿರಲಿಲ್ಲ. ಓ ಖುರೈಷಿಗಳೇ ನೀವು ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ, ಆ ಪ್ರವಾದಿಯವರ ﷺ ಮಾತಿನಲ್ಲಿ ಚಿಂತಿಸುವ ವಿಷಯಗಳಿವೆ. ಅದು ಸಾಕ್ಷಾತ್ಕಾರವಾದರೆ ಅರಬಿಗಳು ಕೂಡ ಉನ್ನತ ಸ್ಥಾನಕ್ಕೆ ತಲುಪುವರು. ಜಯ ಶಾಲಿಗಳಾದರೆ, ಅರಬಿಗಳ ಜಯ, ಅಧಿಕಾರ ಎಲ್ಲವೂ ನಿಮ್ಮ ಪಾಲಿಗೆ ಬಂದು ಸೇರುತ್ತದೆ. ಎಂದು ಉತ್'ಬಃ ಅವರಲ್ಲಿ ಹೇಳಿದರು.
ಅಷ್ಟೇ ಯಾಕೆ ಬೇರೆ ವಿಷಯಗಳನ್ನು ಬಿಟ್ಟು ಬಿಡಿ, ಈ ವಿಷಯದಲ್ಲಿ ಸ್ವತಃ ನನ್ನನ್ನೇ ನೋಡಿ. ಜಗದೊಡೆಯನಾಣೆಗೂ ನಾನು ಇವತ್ತಿನವರೆಗೂ ಅಂತಹ ಒಂದು ವಾಕ್ಯಗಳನ್ನು ಕೇಳಲೇ ಇಲ್ಲ. ಅದನ್ನು ಕೇಳಿದ ನನಗೆ ಉತ್ತರಿಸಲೇ ಮಾತೇ ಇರಲಿಲ್ಲ, ಎಂದು ಕೂಡ ಹೇಳಿದರು.
ಅದನ್ನು ಕೇಳಿದ ಜನರು, ಓ ಅಬುಲ್ ವಲೀದ್ ನಿಮ್ಮ ಮೇಲೂ ಆ ವ್ಯಕ್ತಿಯ ವಾಮಾಚಾರ ಪ್ರಭಾವ ಬೀರಿದೆ ಎಂದು ಹೇಳಿದರು.
ಇಷ್ಟೆಲ್ಲಾ ಚಿಂತನಾರ್ಹ ಘಟನೆಗಳು ಅವರ ಕಣ್ಣು ಮುಂದೆ ನಡೆದರೂ, ಅವರು ಮಾತ್ರ ಅದರ ಬಗ್ಗೆ ಅಧ್ಯಯನ ನಡೆಸಲು ಮುಂದಾಗಲೇ ಇಲ್ಲ. ಬದಲಾಗಿ ಹಗೆಯ, ದ್ವೇಷದ ದಾರಿಯನ್ನೇ ಆಯ್ಕೆ ಮಾಡಿಕೊಂಡರು. ಹೇಗೆ ಮುಹಮ್ಮದ್'ರನ್ನು ﷺ ಮೂಲೆ ಗುಂಪು ಮಾಡಬೇಕು ಎನ್ನುವ ಬಗ್ಗೆಯೇ ಚಿಂತಿಸುತ್ತಿದ್ದರು.
ಒಂದು ದಿನ ಮುಸ್ಸಂಜೆಯ ವೇಳೆಯಲ್ಲಿ ಖುರೈಷಿಗಳ ಗಣ್ಯ ವ್ಯಕ್ತಿಗಳು ಮತ್ತೊಮ್ಮೆ ಕಅಬಾದ ಬಳಿ ಸಭೆ ನಡೆಸಿದರು. ಮುಹಮ್ಮದ್'ರ ﷺ ಕುರಿತು ಚರ್ಚೆ ನಡೆಸಿ ಹೊಸದೊಂದು ತೀರ್ಮಾನಕ್ಕೆ ಬಂದರು. ಮುಹಮ್ಮದ್'ರನ್ನು ﷺ ಆಮಂತ್ರಣ ನೀಡಿ ಕರೆಸೋಣ, ನಂತರ ಅವರಲ್ಲಿ ನೇರವಾಗಿ ಚರ್ಚೆ ನಡೆಸೋಣ, ಪ್ರಶ್ನೆಗಳನ್ನು ಕೇಳೋಣ ಎಂದಾಗಿತ್ತು ಅವರು ತೀರ್ಮಾನಿಸಿದ್ದು. ಹಾಗೆ ಮುಹಮ್ಮದ್'ರನ್ನು ﷺ ಕರೆತರಲು ವ್ಯಕ್ತಿಯನ್ನು ಕಳುಹಿಸಿದರು. ಅವರ ಮಾತಿಗೆ ಬೆಲೆ ಕೊಟ್ಟು ತಕ್ಷಣವೇ ಪ್ರವಾದಿಯವರು ﷺ ಆಗಮಿಸಿದರು. ಕಾರಣ ಬಯಸದೆ ಬಂದ ಭಾಗ್ಯ, ಅವಕಾಶ ಸಿಕ್ಕರೆ ಪ್ರಭೋಧನೆ ನಡೆಸಿ, ಸಮಯವನ್ನು ಸದುಪಯೋಗ ಮಾಡಬಹುದು, ವಾಸ್ತವವಾದ ವಿಷಯಗಳನ್ನು ತಿಳಿಸಿ ಕೊಟ್ಟು, ತಪ್ಪು ತಿಳಿವಳಿಕೆಗಳನ್ನು ದೂರಿಕರಿಸಬಹುದು, ಎನ್ನುವ ಉದ್ದೇಶದಿಂದಾಗಿತ್ತು ತಕ್ಷಣವೇ ಬಂದದ್ದು.
ಹೀಗೆ ಅಲ್ಲಿ ಸೇರಿದ್ದ ಜನರು ಪ್ರವಾದಿಯವರ ﷺ ಬಳಿ ಬಂದು, ಓ ಪ್ರವಾದಿಯವರೇ.! ﷺ ನಿಮ್ಮ ಬಳಿ ಮಾತುಕತೆ ನಡೆಸಲು ನಾವು ಪ್ರತಿನಿಧಿಯೊಬ್ಬರನ್ನು ಕಳುಹಿಸಿ ಕೊಟ್ಟಿದ್ದೆವು. ನೀವು ಈ ಜನಾಂಗಕ್ಕೆ ನೀಡಿದಷ್ಟು ಭಾರವನ್ನು ಬೇರೆ ಯಾರೂ ಕೂಡ ಅವರ ಜನಾಂಗಕ್ಕೆ ನೀಡಿರಲಿಕ್ಕಿಲ್ಲ, ಪೂರ್ವಿಕರನ್ನು ವಿರೋಧ ಮಾಡಿದಿರಿ, ಅವರ ವಿಶ್ವಾಸಗಳ ಕುರಿತು ಅಸಡ್ಡೆ ಮಾಡಿದಿರಿ, ಇದರಿಂದ ಬಹಳಷ್ಟು ಜನರು ಗೊಂದಲಕ್ಕೀಡಾಗಿದ್ದಾರೆ. ಎಂದು ಹೇಳುತ್ತಾ, ಉತ್'ಬ ಹೇಳಿದ್ದ ಆ ಆಮೀಷಗಳನ್ನು ಪುನಃ ಪ್ರವಾದಿಯವರ ﷺ ಮುಂದೆ ಇಟ್ಟರು. ಪ್ರವಾದಿಯವರು ﷺ ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಕೇಳುತ್ತಿದ್ದರು, ನಂತರ...
(ಮುಂದುವರಿಯುವುದು...)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

No comments:
Post a Comment